ಗದಗ;
ಕುಲಗೆಟ್ಟು ಹೋಗುತ್ತಿರುವ ಮತ ಹಾಗೂ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂವಿಧಾನಿಕ ನೈತಿಕತೆಯನ್ನು ಪ್ರದರ್ಶಿಸುವುದು ಕಾಂಗ್ರೆಸ್ ಪಕ್ಷದ ಧ್ಯೇಯವಾಗಿದ್ದು ಪದವೀಧರ ಚುನಾವಣೆಯ ನಮ್ಮ ಅಭ್ಯರ್ಥಿಯಾದ ಮೋಹನ ಲಿಂಬಿಕಾಯಿ ಸಮರ್ಥ ಅಭ್ಯರ್ಥಿಯಾಗಿದ್ದಾರೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ ಅಧ್ಯಕ್ಷರಾದ ಕೃಷ್ಣಗೌಡ ಪಾಟೀಲ ಹೇಳಿದರು.
ಗದಗ ಜಿಲ್ಲಾ ನ್ಯಾಯಾಲಯದ ವಕೀಲರ ಸಂಕೀರ್ಣದಲ್ಲಿ ಪಶ್ಚಿಮ ಪದವಿಧರ ಚುನಾವಣೆಯ ನಿಮಿತ್ತ ವಕೀಲರ ಸಂಘದ ವತಿಯಿಂದ ಜರುಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ನ್ಯಾಯದ ಪರ ಗಟ್ಟಿ ಧ್ವನಿಯಾದ ವಕೀಲರು ಸಮಾಜಕ್ಕೆ ಹಾಗೂ ಸೇವಾ ಕ್ಷೇತ್ರದಲ್ಲಿ, ರಾಜಕೀಯ ವೇದಿಕೆಯಲ್ಲಿ ಸಕ್ರೀಯವಾಗಿ ತೊಡಗಿಕೊಳುವಂಥವರಿಗೆ ಸದಾ ಮಾರ್ಗದಶನ ಮಾಡುವ ಸ್ಥಾನದಲ್ಕಿದ್ದು ಸಾಮಾಜಿಕ ಬದಲಾವಣೆಗೆ, ಸಂವಿದಾನದ ಆಶಯಗಳ ರಕ್ಷಣೆಗೆ ಮೋಹನ ಲಿಂಬಿಕಾಯಿ ಅವರಿಗೆಬೆಂಬಲವಾಗಿ ನಿಲ್ಲುವ ಮೂಲಕ ಪದವಿಧರರ ಹಿತ ರಕ್ಷಣೆಗೆ ಕೈ ಜೊಡಿಸಬೇಕು.
ನಮ್ಮ ನಾಯಕರಾದ ಎಚ್.ಕೆ. ಪಾಟೀಲ ಅವರೊಂದಿಗೆ ಹೆಚ್ಚು ಒಡನಾಟ ಹೊಂದಿರುವ ಬಹಳಷ್ಟು ನ್ಯಾಯವಾದಿಗಳು ಈ ಕ್ಷೇತ್ರದಲ್ಲಿ ಆದ ಅಮುಲಾಗ್ರ ಬದಲಾವಣೆಯ ಫಲವಾಗಿ ಈ ಬಾರಿ ಮೊಹನ ಲಿಂಬಿಕಾಯಿ ಅವರನ್ನು ಬೆಂಬಲಿಸಬೇಕು ಎಂದರು.
ಪದವೀಧರ ಕ್ಷೇತ್ರದ ಅಭ್ಯರ್ಥಿಗಳಾದ ಮೋಹನ ಲಿಂಬಿಕಾಯಿ ಮಾತನಾಡಿ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಹೆಚ್ಚಿನ ಕಾಂಗ್ರೆಸ್ ಶಾಸಕರಿದ್ದು ಪದವೀಧರ ಮತದಾರರ ಆಶಿರ್ವಾದದಿಂದ ಈ ಬಾರಿ ಕಾಂಗ್ರೆಸ ಪಕ್ಷಕ್ಕೆ ಗೆಲುವು ನಿಶ್ಚಿತವಾಗಿದೆ.
ಕಳೆದ ಹಲವು ವರ್ಷಗಳಲ್ಲಿ ವಕೀಲರ ಜೊತೆ ನಿಕಟ ಪೂರ್ವ ಸಂಬಂಧ ಹೊಂದಿದವನಾಗಿದ್ದು ಗದಗ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ನನ್ನ ಅಳಿಲು ಸೇವೆ ಸಲ್ಲಿಸಿದ್ದೇನೆ. ಪ್ರಾಮಾಣಿಕವಾಗಿ ನಿಯತ್ತಿನಿಂದ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದ್ದು ವಕೀಲರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ. ಕಾನೂನು ಸಚಿವರಾಗಿದ್ದ ಎಚ್.ಕೆ. ಪಾಟೀಲರು ವಕೀಲರ ಹಿತ ರಕ್ಷಣೆಗೆ ವಿಶೇಷ ಕಾನೂನು ಜಾರಿಗೆ ತಂದ ಕೀರ್ತಿ ಎಚ್.ಕೆ. ಪಾಟೀಲರಿಗೆ ಸಲ್ಲುತ್ತದೆ ಎಂದರು.
ನಾನು ಒಬ್ಬ ವೃತ್ತಿಪರ ವಕೀಲನಾಗಿದ್ದು ತಾವೇಲ್ಲರೂ ಪ್ರಥಮ ಪ್ರಾಸರ್ಥ್ಯದ ಮತ ನೀಡಿ ಬೆಂಬಲಿಸುವುದರ ಜೊತೆಗೆ ನೀವು ಮತ ಹಾಕುವ ಜೊತೆಗೆ ಎಲ್ಲ ಒದವಿಧರರ ಮತ ಹಾಕಿಸಿ ಉತ್ತರ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ವಕೀಲರಾದ ಮೋಹನ ಭಜಂತ್ರಿ ಮಾತನಾಡಿ
ಪದವೀಧರ ಸಮಸ್ಯೆ ಆಲಿಸುವಲ್ಲಿ ಎಚ್.ಕೆ
. ಪಾಟೀಲ ಅವರು ಸೇವಾ ಭಾವದಿಂದ ಕೆಲಸ ಮಾಡಿದ್ದಾರೆ.
ಒಟ್ಟುಗದಗ ತಾಲೂಕಿನಲ್ಲಿ 21 ಸಾವಿರ ಮತದಾರರಿದ್ದಾರೆ.
ಮೋಹನ ಲಿಂಬಿಕಾಯಿಯ ಅವರು ವಕೀಲರ ಶ್ರೇಯೋಭಿವೇದ್ಧಿಗೆ ಸ್ನೇಹ ಭಾವದಿಂದ ಕೆಲಸ ಮಾಡುತ್ತಾರೆ ಎಂದರು.
ವಕೀಲರ ಬಾರ ಕೌನ್ಸಿಲ್ ಸದಸ್ಯರಾಗಿ ವಕೀಲರ ಕಷ್ಟ ಸುಖಗಳನ್ನು ಅರಿತವರಾಗಿದ್ದು ನಮ್ನ ವಕೀಲಿ ವೃತಗತಿ ಬಾಂಧವರನ್ಬು ಗೆಲ್ಲಿಸುವುದರಿಂದ ಬಹಳಷ್ಟು ಅನುಕೂಲವಾಗುವುದು ಎಂದರು.
ಜಿ..ಕೆ. ಆದಪ್ಪಗೌಡ್ರ ಮಾತನಾಡಿ ಪದವಿಧರ ಮತಬಾಂಧವರೆಲ್ಲರೂ ಒಕ್ಕಟ್ಟಿನಿಂದ ಲಿಂಬಿಕಾಯಿ ಅವರ ಪರವಾಗಿ ಸಕ್ರೀಯವಾಗಿ ಕೆಲಸ ಮಾಡಬೇಕು ಎಂದರು..
ಮುಕ್ತಾರ ಮೌಲ್ವಿ ವಕೀಲರು ಮಾತನಾಡಿ ಕಾನೂನು ಹಾಗೂ ಸಂವಿದಾನದ ಆಶಯಗಳನ್ನು ಈಡೇರಿಸುವ. ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಹೋರಾಡುತ್ತಿರುವ ವಕೀಲರ ಪರ ಕೆಲಸ ಮಾಡುವರನ್ನು ಪ್ರೋತ್ಸಾಹಿಸಬೇಕು ಎಂದರು.
ಅಧ್ಯಕ್ಷತೆಯನ್ನು ಆರ್.ಜಿ. ಕಲ್ಲೂರ ವಹಿಸಿದ್ದರುಈ ವೇಳೆ ಎಂ.ಎ. ಸಂಗನಾಳ,ಶೈಲಾ ಹಿರೇಮಠ, ಕೆಮೆಲ್. ಕರಿಗೌಡ್ರ, ವಾಯ್.ಡಿ ತಳವಾರ, ಪಡಿಬಂದ, ಎಲ್.ಎಂ. ಅಕ್ಕಿ, ಪದ್ಮಾ ಮಾನೆ, ಬಿಚಗತ್ತಿ, ಸಿಳ್ಳಿನ, ಜಿ.ಬಿ. ನಿಲರಡ್ಡಿ, ಚಿನ್ನಪ್ಪಗೌಡ್ರ, ಅಶೋಕ ಹದ್ಲಿ ಸೇರಿದಂತೆ ಅನೇಕರು ಇದ್ದರು.





