ಬೆಂಗಳೂರು: ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಸಂಪೂರ್ಣವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ ಬಾಲಕೃಷ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭ ಕರಂದ್ಲಾಜೆ ಅವರನ್ನ ಅತ್ಯಂತ ಗೌರವದಿಂದ ಶೋಭಕ್ಕ ಎಂದು ಸಂಭೋದಿಸಿದ್ದೇನೆ. ಬಿಡದಿಟೌನ್ ಶಿಪ್ ಯೋಜನೆಗೆ 2010 ರಲ್ಲಿ ಟೆಂಡರ್ ಕರೆದಿದ್ದು ನಿಮ್ಮ ಯಜಮಾನ, ನಿಮ್ಮ ಸಾಹೇಬ ಎಂದು ಉಲ್ಲೇಖಿಸಿದ್ದೆ ಎಂದಿದ್ದಾರೆ.

ಒಬ್ಬ ಸಾಮಾನ್ಯ ಕಾರ್ಯಕರ್ತೆಯಾಗಿ ಅವರನ್ನು ಗುರುತಿಸಿ ಸಚಿವೆಯನ್ನಾಗಿ ಮಾಡಿ ರಾಜಕೀಯದಲ್ಲಿ ಉನ್ನತ ಸ್ಥಾನ ನೀಡಿ ಬೆಳೆಸಿದ ನಾಯಕರು ಯಡಿಯೂರಪ್ಪ ಅವರು ಎಂಬ ರಾಜಕೀಯ ಹಿನ್ನೆಲೆಯ ಉದ್ದೇಶದಿಂದ ಮಾತ್ರ ಸಾಹೇಬ, ಯಜಮಾನ ಎಂಬ ಪದಗಳನ್ನು ಬಳಸಿದ್ದೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿರುವವರು ಯಾವುದೇ ಹೇಳಿಕೆಯ ಆಶಯವನ್ನು ಸರಿಯಾದ ಸಂದರ್ಭದಲ್ಲಿ ಅರ್ಥೈಸಿಕೊಳ್ಳಬೇಕು, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಸಂಪೂರ್ಣ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here