ಬೆಂಗಳೂರು:ರಾಜ್ಯಸಭಾ ಚುನಾವಣೆಗೆ ಸ್ಥಾನ ನೀಡದಿದ್ದಕ್ಕೆ ಕಾಂಗ್ರೆಸ್ ನಾಯಕರ ತುಚ್ಛ ಟೀಕೆಗಳಿಗೆ ತಕ್ಕ ಉತ್ತರ ನೀಡಿದ ದೇವೇಗೌಡರು, ‘ರಾಜ್ಯಸಭೆಯ ಒಂದು ಸ್ಥಾನದಿಂದ ಸಂಬಂಧಗಳನ್ನು ಅಳೆಯಲು ಸಾಧ್ಯವಿಲ್ಲ’ ಎಂದು ದೇವೆಗೌಡರು ಸ್ಪಷ್ಟಪಡಿಸಿದರು.
ಗೋಧ್ರಾ ಘಟನೆಯ ಸಂದರ್ಭದಲ್ಲಿ ಪ್ರಧಾನಿಯಾಗಿದ್ದೆ ಮತ್ತು ಮೋದಿ ಅವರು ಗುಜರಾತ್ ಮುಖ್ಯಮಂತ್ರಿಗಳಾಗಿದ್ದರು. ಅಂದಿನ ಕಾಲದಿಂದಲೂ ಇರುವ ಪರಸ್ಪರ ಗೌರವ, ವಿಶ್ವಾಸ ಮತ್ತು ಆತ್ಮೀಯತೆಯ ಸಂಬಂಧವನ್ನು ರಾಜ್ಯಸಭೆಯ ಒಂದು ಸ್ಥಾನಕ್ಕೆ ಸೀಮಿತಗೊಳಿಸುವುದು ರಾಜಕೀಯ ದಿವಾಳಿತನದ ಪರಮಾವಧಿ ಎಂದು ನುಡಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಅಧ್ಯಕ್ಷರಾದ ಗುರುರಾಜ್ ಹುಣಸಿಮರದ್ದ ಹಾಗೂ ಪಕ್ಷದ ಹಿರಿಯ ನಾಯಕರು ಮುಖಂಡರು ಸೇರಿದ್ದರು





