ಉತ್ತರ ಪ್ರದೇಶ್ ಲಕ್ನೋದ ಒಂದು ಊರಿನಲ್ಲಿ ಉತ್ತಮ ಹಿನ್ನೆಲೆ ಉಳ್ಳ ವೃದ್ಧ ತಂದೆ ಒಬ್ಬರು ತನ್ನ ಇಬ್ಬರು ಪುತ್ರರಿಗೆ ಪತ್ರ ಬರೆದು….ಗುಂಡು ಹಾರಿಸಿಕೊಂಡು ಆತ್ಮ*ಹತ್ಯೆ ಮಾಡಿಕೊಂಡರು.
ಪತ್ರ ಯಾಕೆ ಬರೆದರು.. ಮತ್ತು ಅದರಲ್ಲಿ ಏನು ಬರೆದರು… ಆದನ್ನು ತಿಳಿದುಕೊಳ್ಳುವ ಮೊದಲು..ಅವರ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದು ಮುಖ್ಯ.
ಗುಂಡು ಹರಿಸಿಕೊಂಡ ತಂದೆ ಕರ್ನಲ್ ಹುದ್ದೆಯೊಂದಿಗೆ ಸೈನ್ಯದಿಂದ ನಿವೃತ್ತರಾದರು… ಅವರು ಲಕ್ನೋದ ಐಷಾರಾಮಿ ಕಾಲೋನಿಯಲ್ಲಿ ತಮ್ಮ ಪತ್ನಿಯೊಂದಿಗೆ ವಾಸಿಸುತ್ತಿದ್ದರು… ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು…ದೂರದ ಅಮೆರಿಕದಲ್ಲಿ ವಾಸಿಸುತ್ತಿದ್ದವರು ಇಬ್ಬರು…ಆ ತಂದೆ ತಾಯಿ ತಮ್ಮ ಮಕ್ಕಳನ್ನು ಬೆಳೆಸುವಲ್ಲಿ ಯಾವುದೇ ವಿಷಯದಲ್ಲೂ ಎಳ್ಳಿನಷ್ಟು ಕಡಿಮೆ ಮಾಡಲಿಲ್ಲ ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು ನಾನು….ಆ ಮಕ್ಕಳು ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಲೇ ಇದ್ದರು….ಓದಿದ ನಂತರ, ಅವರು ಎಷ್ಟು ಸಮರ್ಥರಾದರು ಅಂದ್ರೆ ಅವರು ವಿಶ್ವದ ಅತ್ಯಂತ ಪ್ರಸಿದ್ಧ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು…ಒಳ್ಳೆಯ ಸಂಬಂಧ ನೋಡಿ ಮದುವೆಯೂ ಮಾಡಿಸಿದರು… ಕಾಕತಾಳೀಯವಾಗಿ, ಇಬ್ಬರೂ ಸಹೋದರರು ಒಂದೇ ದೇಶದಲ್ಲಿ ವಾಸಿಸುತ್ತಿದ್ದರು ಸಂಸಾರ ಸಮೇತ, ಆದರೆ ಪ್ರತ್ಯೇಕವಾಗಿ ಅವರವರ ಕುಟುಂಬದೊಂದಿಗೆ…
【ಇಲ್ಲಿ ಹಿರಿಯ ಮಗನ ಹೆಸರು ಮನೋಜ್…ಕಿರಿಯ ಮಗನ ಹೆಸರು ಚೇತನ್.. ಮುನ್ನ…ಚಿಂಟು】
ಒಂದು ದಿನ ಇದ್ದಕ್ಕಿದ್ದಂತೆ ತಂದೆ ತನ್ನ ಇಬ್ಬರು ಮಕ್ಕಳಿಗೆ ಒಂದು ದುಃಖದ ಸುದ್ದಿಯನ್ನು ಕಣ್ಣೀರು ಬಂದರು ಅಳಲಾಗದ ಸ್ಥಿತಿಯಲ್ಲಿ ತಿಳಿಸಿದರು….ಮಕ್ಕಳೇ ಮುನ್ನ..ಚಿಂಟು…ನಿಮ್ ತಾಯಿ ಈ ಭೂಮಿ ಬಿಟ್ಟು ಹೊರಟಳು(ತೀರಿಕೊಂಡಳು).ಅಂತ ಹೇಳಿದರು….
ನನ್ನ ಹೆಂಡತಿಯನ್ನು ಮಣ್ಣಿನಲ್ಲಿ ವಿಲೀನ ಮಾಡಲು ತನ್ನ ಮಕ್ಕಳು ಬರುತ್ತಾರೆ ಎಂದು ತಂದೆ ಕಾಯುತ್ತಿದ್ದರು…..ಒಂದು ದಿನದ ನಂತರ ಕಿರಿಯ ಮಗ ಚೇತನ್ ಬಂದನು, ಅವನ ಕುಟುಂಬ ಸಮೇತ…
ಆ ವೃದ್ಧ ತಂದೆ ಚಿಂಟುಗೆ ಕೇಳಿದ…ಮುನ್ನಾ ಏಕೆ ಬರಲಿಲ್ಲ ಇನ್ನು? ನಿಮ್ ಕರೆ ಬಂತು ಅಂತ ಮೊದಲ ವಿಮಾನದಲ್ಲಿ ನಾವುಗಳು ಹತ್ತಿ ಬಂದೆವು….ಮನೋಜಣ್ಣ ಬರ್ತನೊ ಇಲ್ವೋ ಗೊತ್ತಿಲ್ಲ ಅಂದ…
ಹಿಂದೂ ಧರ್ಮದ ಪ್ರಕಾರ ಹಿರಿಯ ಮಗನ ಆಗಮನವೇ..ಮುಖ್ಯವಾಗಿರುತ್ತೆ ಅಂತಿಮ ಕಾರ್ಯಮಾಡಲು.ಈ ಬಗ್ಗೆ ತಂದೆ ಯೋಚಿಸಿಸುತ್ತಿರುವಗಲೇ..
ಕಿರಿಯ ಮಗನ ಬಾಯಿಂದ ಸತ್ಯವೊಂದು ಹೊರಬಿತ್ತು… ತಾಯಿ ಸತ್ತಾಗ ನೀನು ಹೋಗು, ತಂದೆ ಸತ್ತರೆ ನಾನು ಹೋಗುತ್ತೇನೆ ಎಂದು ಮನೋಜಣ್ಣ ಹೇಳಿದ್ದ…ಅದಕ್ಕೆ ಅವನು ಬರೋಲ್ಲ ಅನಿಸುತ್ತೆ…ಅಂತ ತನ್ನ ತಂದೆಗೆ ಹೇಳಿದನು.
ತಕ್ಷಣವೇ ಕರ್ನಲ್ ಸಾಹೇಬ್ರು (ತಂದೆ) ಕೋಣೆಯೊಳಗೆ ಹೋದರು….ಅವರು ಹಲವಾರು ಬಾರಿ ತನ್ನನ್ನು ತಾನು ಪ್ರೆಶ್ನೆ ಮಾಡುತ್ತ ….ಯಾವುದೋ ಒಂದು ನಿರ್ಧಾರ ಮಾಡಿ…ಕೆಲವು ಸಾಲುಗಳ ಪತ್ರವನ್ನು ಬರೆದರು..
ಪತ್ರ ಹೀಗಿತ್ತು –
ಪ್ರೀತಿಯ ಮಗನೆ ಚೇತನ್
ನಿಮ್ಮ ತಾಯಿ ಮತ್ತು ನಾನು ನಿಮ್ಮನ್ನು ಸಾಕಷ್ಟು ಆಸೆ ನಿರೀಕ್ಷೆಗಳೊಂದಿಗೆ ಬೆಳೆಸಿದ್ದೇವೆ….ಪ್ರಪಂಚದ ಎಲ್ಲಾ ಸಂತೋಷವನ್ನು ನೀಡಿದ್ದೇವೆ… ದೇಶ ಮತ್ತು ವಿದೇಶದ ಅತ್ಯುತ್ತಮ ಸ್ಥಳದಲ್ಲಿ ಶಿಕ್ಷಣವನ್ನು ನೀಡಿದ್ದೇವೆ… ನಿನ್ನ ತಾಯಿ ಕೊನೆಯುಸಿರೆಳೆದಾಗ ನಾನು ಅವಳ ಹತ್ತಿರ ಇದ್ದೆ….ಸಾಯುತ್ತಿರುವಾಗ ನಿಮ್ಮಿಬ್ಬರ ಮುಖವನ್ನು ಒಮ್ಮೆ ನೋಡಬೇಕೆಂದು ಆಸೆಪಟ್ಟು ನಿಮ್ಮಿಬ್ಬರನ್ನು ತನ್ನ ತೋಳುಗಳಲ್ಲಿ ಹಿಡಿದು ಮುದ್ದಾಡಬೇಕೆಂದುಕೊಂಡ್ಡಿದ್ದಳು… ನೀವು ಇನ್ನು ಚಿಕ್ಕ ಮಕ್ಕಳೇ ಅವಳಿಗೆ…ಅದೇ ಮುಗ್ಧ ಮನಸ್ಸಿನ ಮುನ್ನಾ ಮತ್ತು ಚಿಂಟು….ಅವಳು ಸತ್ತಾಗ, ಅವಳ ಮೃತದೇಹದ ಬಳಿ ನೀವು ಬರೋತನಕ ಕಾಯಲು ನಾನಿದ್ದೆ…. ನನಗೆ ಸಾಂತ್ವನ ಹೇಳಲು ನನ್ನ ಮಕ್ಕಳು ನೀವ್ ಇದ್ದೀರಿ ಅಂತ ಅನಿಸಿತು….ಆದ್ರೆ..ಈಗ ವಾಸ್ತವ ಅರಿವಾಗಿದೆ…ನಾನು ಒಂಟಿಯಾದೆ ನನ್ನ ನೋಡಿಕೊಳ್ಳೋರು ಯಾರು ಇಲ್ಲ….ನನ್ನ ಸಾವಿನ ನಂತರ, ನನ್ನ ಶವವನ್ನು ನಿಮಗಾಗಿ ಕಾಯಲು ಯಾರೂ ಇರುವುದಿಲ್ಲ ಅಂತ….
ಅದರಿಂದ….
ಅತ್ಯಂತ ಮುಖ್ಯವಾದ ವಿಷಯವೆ ಮಗನೇ ಚೇತನ್ ನಿನಗೆ…. ನನ್ನ ಮೃತ ದೇಹವನ್ನು ವಿಲೇವಾರಿ ಮಾಡಲು ನಿಮ್ಮ ಅಣ್ಣ ಬರುವುದು ನನಗೆ ಇಷ್ಟವಿಲ್ಲ….ಆದುದರಿಂದ ನೀನು ನಿನ್ನ ತಾಯಿಯ ಶವದ ಪಕ್ಕದಲ್ಲೇ ನನ್ನ ಶವವನ್ನು ಪಂಚ ಭೂತಗಳಲ್ಲಿ ವಿಲೀನ…ಮಾಡಿ…ವಾಪಸ್ ಹೋಗುವುದು ಉತ್ತಮ.ಶ್ರಾದ್ದಾ ಕಾರ್ಯ ಮಾಡದೆ ಇದ್ರು ಚಿಂತೆ ಇಲ್ಲ…ಯಾವತ್ತು ಪ್ರೇತವಾಗಿ ಕಾಡೊಲ್ಲ ನಿಮ್ಮನ್ನ ನಾವುಗಳು….
ನನ್ನ ಜೀವನದುದ್ದಕ್ಕೂ ಸಂಪತ್ತಿನ ಜೊತೆಗೆ ಗೌರವ ಸಂಪಾದಿಸಿದೆ…. ಆದರೆ….ಸಮಾಜಕ್ಕೆ ಅಸಂಸ್ಕೃತ…ಅಸಭ್ಯ..ಅನಾಗರಿಕ.. ಪ್ರಜೆಗಳನ್ನ ನನ್ನ ಮಕ್ಕಳ ರೂಪದಲ್ಕಿ ನೀಡಿದ್ದರಿಂದ ನನಗೆ ಬದುಕುವ ಹಕ್ಕಿಲ್ಲ… ಹೌದು. ನೀವು ಅಮೇರಿಕಾಕ್ಕೆ ಹೋಗಿ ನೆಲೆಸದೇ ಇದ್ದಿದ್ದರೆ ಒಳ್ಳೇದಿತ್ತು..ಈ ತಪ್ಪಿಗೆ ಪ್ರಾಯಶ್ಚಿತ್ತವಾಗಿ….ಈ ಕೆಳಗಿನ ನಿರ್ಧಾರ ಮಾಡಿರುವೆ.
ನನ್ನ ಪದಕಗಳು…ಪಾರಿತೋಷಕಗಳು ಮತ್ತು ಸರ್ಕಾರ ನೀಡಿದ ಭೂಮಿಯನ್ನು ಮತ್ತು ಸೇನೆಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕು ಮತ್ತು ಮನೆಯಲ್ಲಿರುವ…. ಹಣವನ್ನು ಕೆಲಸದವರಿಗೆ ಹಂಚಬೇಕು ಎಂಬುದು ನನ್ನ ಕೊನೆಯ ಆಸೆ…ಮತ್ತು ಬ್ಯಾಂಕ್ ಠೇವಣಿ ಇಟ್ಟಿರುವ ಹಣದ ಅರ್ಧ ಭಾಗವನ್ನು ವೃದ್ಧಾಪ್ಯ ಸೇವಾ ಕೇಂದ್ರಕ್ಕೆ ಮತ್ತು ಅರ್ಧವನ್ನು ಸೈನಿಕ ಕಲ್ಯಾಣ ನಿಧಿಗೆ ನೀಡಬೇಕು.
ಇಂತಿ ನಿಮ್ಮ ತಂದೆ
ಕೋಣೆಯಿಂದ ಢo ಸದ್ದು ಕೇಳಿಸಿತು.
ಕರ್ನಲ್ ಸಾಹೇಬರು ಗುಂಡು ಹಾರಿಸಿಕೊಂಡರು.
ಇ ಘಟನೆ ಏಕೆ ಸಂಭವಿಸಿತು, ಅದಕ್ಕೆ ಕಾರಣವೇನು? ಯಾರಾದರೂ ತಪ್ಪಿತಸ್ಥರೋ ಇಲ್ಲವೋ? ಅದರ ಬಗ್ಗೆ ನಾನು ಏನನ್ನು ಹೇಳಲಾರೆ..
ಇದು ಕಾಲ್ಪನಿಕ ಕಥೆಯಲ್ಲ. ಇದು ಸಂಪೂರ್ಣ ಸತ್ಯ ಘಟನೆ..!!
ನನ್ನದೇ ಶೈಲಿಯಲ್ಲಿ ಬರೆದಿರುವೆ.(ಕೃಪೆ:ರವಿ ಬೆಳಗೆರೆ ಕಥೆಗಳು ಫೇಸ್ಬುಕ್ )





