ಬೆಂಗಳೂರು: ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಯಾಗಿ ಸುದೀರ್ಘ ಆಡಳಿತ ನಡೆಸಿ ದಿವಂಗತ ಡಿ.ದೇವರಾಜ್ ಅರಸು ರವರ ದಾಖಲೆ ಮುರಿದರು ಎನ್ನುವ ಮಾತು ಒಪ್ಪಲಾಗದು.ದೇವರಾಜ್ ಅರಸು ರವರಿಗೆ ಇದ್ದ ಅಹಿಂದ ಚಿಂತನೆಗಳೇ ಬೇರೆ ಈ ಅಹಿಂದ ನಾಯಕ ಸಿದ್ದರಾಮಯ್ಯನವರ ಚಿಂತನೆಗಳೇ ಬೇರೆ.ಡಿ.ದೇವರಾಜ್ ಅರಸು ರವರು ರಾಜಕೀಯ ಇತಿಹಾಸದಲ್ಲಿ ಬರಿ ಹೆಚ್ಚು ಕಾಲ ರಾಜ್ಯದ ಮುಖ್ಯಮಂತ್ರಿ ಆಗಿ ದಾಖಲೆ ಮಾಡುವುದರ ಜೊತೆಗೆ ಅಹಿಂದ ನಾಯಕತ್ವದ ಹಲವಾರು ಆಗಿನ ಅಹಿಂದ ಯುವಕರಿಗೆ ಅವಕಾಶ ಕೊಟ್ಟು ರಾಜಕೀಯ ವಾಗಿ ಬೆಳೆಸಿದ್ದಾರೆ.ರಾಜಕೀಯವಾಗಿ ಅಹಿಂದ ನಾಯಕರನ್ನು ದೇವರಾಜ್ ಅರಸು ರವರು ಬೆಳಸಿದ ದಾಖಲೆಯನ್ನು ಸಿದ್ದರಾಮಯ್ಯ ನವರು ಮುರಿದಿಲ್ಲಾ.ಬಹುತೇಕ ಆ ದಾಖಲೆ ಮುರಿಯಲು ಸಾಧ್ಯತೆಯೂ ಇಲ್ಲವೆಂದು ಹೇಳಬಹುದೆನೋ.
ಸಿದ್ದರಾಮಯ್ಯ ನವರು ಅಹಿಂದ ನಾಯಕರಾಗಿ ರಾಜಕೀಯವಾಗಿ ಬೆಳೆದರು ಒಳ್ಳೆಯ ಜನಪ್ರಿಯ ಯೋಜನೆಗಳನ್ನೂ ಕೊಟ್ಟಿದ್ದಾರೆ,ಅಭಿವೃದ್ಧಿ ಯನ್ನೂ ಮಾಡಿದ್ದಾರೆ. ಆದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಹಿಂದ ಬಲಿಷ್ಠವಾಗಿದ್ದರೂ ಸಹ ಸಿದ್ದರಾಮಯ್ಯ ನವರು ಆ ಜಿಲ್ಲೆಗಳಲ್ಲಿ ಅಹಿಂದ ವರ್ಗದ ವಿರೋಧಿಗಳಿಗೇ ಬೆಂಬಲಿಸಿ ಬೆಳೆಸಿದರು.ಅಹಿಂದ ನಾಯಕತ್ವ ಬೆಳೆಯಲು ವಿಫುಲವಾದ ಅವಕಾಶ ಗಳಿದ್ದರೂ ಸಹ ಅಲ್ಲಿ ಪ್ರಜ್ಞಾವಂತ ಅಹಿಂದ ನಾಯಕರನ್ನು ಬೆಳೆಯದಂತೆ ಮೂಲೆಗುಂಪು ಮಾಡಿದ ದಾಖಲೆಯೂ ಬಹುತೇಕ ಸಿದ್ದರಾಮಯ್ಯ ನವರದ್ದೇ ಇರಬಹುದು.
ಏನೇ ಆಗಲಿ ಅಹಿಂದ ವರ್ಗದ ಪರ ದುಡಿದ ನಾಯಕನೊಬ್ಬ ಸುದೀರ್ಘ ಆಡಳಿತ ನಡೆಸಿದ ದಾಖಲೆಯನ್ನು ಮತ್ತೊಬ್ಬ ಅಹಿಂದ ನಾಯಕನೇ ಮುರಿದು ದಾಖಲೆ ಮಾಡಿದ್ದು ಸಂತಸವೇ ಆದರೆ ದಿವಂಗತ ದೇವರಾಜ್ ಅರಸ ರವರು ಅಹಿಂದ ನಾಯಕರನ್ನು ರಾಜಕೀಯವಾಗಿ ಬೆಳೆಸಿದ ದಾಖಲೆಯನ್ನಲ್ಲಾ ಎಂಬ ಸತ್ಯವನ್ನೂ ತಿಳಿದುಕೊಳ್ಳಬೇಕಾಗಿದ್ದು ಬಹು ಮುಖ್ಯ(ಎಸ್.ಕೆ.ಒಡೆಯರ್)





