:- ಕೆಲವು ತಿಕಲುತನದ:-
ವಿಚಾರಗಳನ್ನು ಬಿಟ್ಟು ಉಳಿದ ಎಲ್ಲಾ ವಿಷಯಗಳಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಪತ್ರಕರ್ತ ನಮ್ಮ ಪುರಂದರ ಲೋಕಿಕೆರೆ.
1995 ರಲ್ಲಿಯೇ ಕ್ರಿಯಾಶೀಲ ಪತ್ರಕರ್ತರಾಗಿ ಅನೇಕ ಸಂಘಸಂಸ್ಥೆಗಳ ಉದ್ಬವಕ್ಕೆ ಕಾರಣರಾಗಿ ಅನೇಕ ಪ್ರತಿಭೆಗಳಿಗೆ ನಿಸ್ವಾರ್ಥ ಗುರುವಾಗಿದ್ದ ದಿನಮಾನಗಳಲ್ಲೇ ದಿಟ್ಟತನದ ಪತ್ರಕರ್ತ ನಮ್ಮ ಪುರಂದರ ಲೋಕಿಕೆರೆಯವರು.
ಅಂದಿನಿಂದ ಇಂದಿನವರೆಗೆ ಭ್ರಷ್ಟಾಚಾರವನ್ನ ಸಹಿಸಿಕೊಂಡವನಲ್ಲ.
ಎಂದೂ ಒಂದು ಜಾತಿಯ ಪರವಾಗಿ ನಿಂತವನಲ್ಲ.ಅದೇರೀತಿ ಎಂದೂ ಕೂಡ ಶ್ರೀಮಂತರ ಸಹವಾಸ ಮಾಡಿದವನಲ್ಲ.ಅಂದು ಇಂದು ಬಡವರ ಮಕ್ಕಳು ಬೆಳಯಬಾರದಾ ಎಂದು ವಾದ ಮಾಡುವ ವಿಶೇಷ ವ್ಯಕ್ತಿತ್ವದ ಪುರಂದರ ಲೋಕಿಕೆರೆ.
ನಾಡಿನಲ್ಲಿ ಹಾಯ್ ಬೆಂಗಳೂರ್ ಎಂಬ ವಾರಪತ್ರಿಕೆಯ ಅಬ್ಬರದಲ್ಲಿರುವಾಗ ದಾವಣಗೆರೆಯಲ್ಲಿಯೇ ಅಷ್ಟೊಂದು ತೀಕ್ಷ್ಣ ವರದಿ ಬರೆದು ರವಿ ಬೆಳೆಗೆರೆ ಎಂಬ ದೈತ್ಯ ಪತ್ರಕರ್ತನಿಗೆ ಸರಿಸಾಟಿಯಾಗಿ ನಿಂತ ನಮ್ಮ ದಾವಣಗೆರೆಯ ಪತ್ರಕರ್ತ ಪುರಂದರ ಲೋಕಿಕೆರೆ ಎಂದರೆ ತಪ್ಪಾಗಲಾರದು.
ಉದಾಹರಣೆಗೆ ಪುರಂದರನ ಎಮ್ 80 ಸ್ಕೂಟರ್ ಸರ್ಕಾರಿ ಕಛೇರಿ ಮುಂದೆ ನಿಂತಿದ್ದರೆ ಭ್ರಷ್ಟರಗಳ ಎದೆ ನಡುಗುತಿತ್ತು.
ಇಂತಹ ಬರವಣಿಗೆಯೇ ಬದುಕು.ಪತ್ರಿಕೆಯ ಕಚೇರಿಯೇ ಮನೆ ಅಂದುಕೊಂಡಿದ್ದ ಪ್ರಾಮಾಣಿಕ. ನೇರ .ದಿಟ್ಡ.ನಿಷ್ಟುರುವಾದಿ.ಗೆಳೆತನಕ್ಕೆ ನಿಜವಾದ ಅರ್ಥ ನೀಡಬಲ್ಲ ಅಪ್ಪಟ ಸ್ನೇಹಜೀವಿ ನಮ್ಮ ಪುರಂದರ.ಇಂತಹ ಬಹುಮುಖ ಪ್ರತಿಭೆಗೆ
ಈ ಪ್ರಶಸ್ತಿ ಪುರಸ್ಕಾರಗಳು ಮೂರು ದಶಕಗಳ ಹಿಂದೆಯೇ ಪಡೆಯಬಹುದಾಗಿತ್ತು. ಆದರೂ ಇಂತಹ ಕಾಲಮಾನದಲ್ಲೂ ಪುರಂದರ ಲೋಕಿಕೆರೆಯವರನ್ನ ರಾಜ್ಯ ಕಾರ್ಯ ನಿರತ ಪತ್ರಕರ್ತ ಸಂಘ ಗುರುತಿಸಿ ರಾಜ್ಯಮಾದ್ಯಮ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಮಗೆಲ್ಲ ಸಂತೋಷವಾಗಿದೆ.
ಮಾಧ್ಯಮ ಪ್ರಶಸ್ತಿಗೊಂದು ಗೌರವ ಘನತೆ ಹೆಚ್ಚಿಸಿದಂತಾಗಿದೆ.
ಶುಭಾವಾಗಲಿ….

(ಬಾಡದ ಆನಂದರಾಜ್ ಜಿಲ್ಲಾಧ್ಯಕ್ಷರು ಶೋಷಿತ ವರ್ಗಗಳ ಒಕ್ಕೂಟ. ದಾವಣಗೆರೆ.)

LEAVE A REPLY

Please enter your comment!
Please enter your name here