ದಾವಣಗೆರೆ:ಜಿಲ್ಲೆಯಲ್ಲಿ ನಕಲಿಬಂಗಾರವನ್ನು ಅಸಲಿಬಂಗಾರವೆಂದು ನಂಬಿಸಿ ಲಕ್ಷಾಂತರ ರೂಪಾಯಿಗಳ ವಂಚಿಸುವ ಜಾಲ ಮೊದಲಿನಿಂದಲೂ ಜಿಲ್ಲೆಯಲ್ಲಿ ಕೇಳಿ ಬರುತ್ತಿರುವ ವಿಚಾರ. ಆದರೂ ಸಹ ಜನರು ಜಾಗೃತರಾಗದೇ ಪದೇ ಪದೇ ವಂಚಕರನ್ನು ನಂಬಿ ಮೋಸ ಹೋಗುತ್ತಿರುವುದು ವಿಶಾಧನೀಯ ಸಂಗತಿಯೇ.
ಈ ಹಿಂದೆ ಇಂಥ ಪ್ರಕರಣವು ಪತ್ರಕರ್ತ ರವಿ ಬೆಳಗೆರೆಯವರು ಇಂಥ ಜಾಲ ಬೇಧಿಸಲುಹೋಗಿ ಪ್ರಾಣಾಪಾಯದಿಂದ ಪಾರಾದ ವಿಷಯ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಈಗ ಎರಡು ದಿನಗಳ ಹಿಂದೆ ಇಂಥಹದೇ ಜಾಲವನ್ನುದಾವಣಗೆರೆ ಜಿಲ್ಲಾ ಪೊಲೀಸರು ಬಂಧಿಸಿ ನಲವತ್ತು ಲಕ್ಷಕ್ಕೂ ಅಧಿಕ ಹಣವನ್ನು ಅಪರಾಧಿಗಳಿಂದ ವಶಪಡಿಸಿಕೊಂಡು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದರು. ಈ ಸುದ್ದಿಯನ್ನು ಸಹಾಯವಾಣಿ ಕನ್ನಡ ದಿನಪತ್ರಿಕೆಯ ವೆಬ್ ಸೈಟ್ನಲ್ಲಿ ಪ್ರಕಟಿಸಿದ ಕೆಲವೇ ಹೊತ್ತಿನಲ್ಲಿ ಆ ಸುದ್ದಿಯನ್ನು ಓದಿದ ಓದುಗರೊಬ್ಬರು ನನಗೆ ಫೋನು ಮಾಡಿದರು. ಸರ್ ನಾನು ಮನೆಯಲ್ಲಿ ಇಲ್ಲದಿರುವಾಗ ನನ್ನ ತಾಯಿಯವರಿಗೂ ಇದೇ ರೀತಿ ಅಸಲಿಬಂಗಾರ ತೋರಿಸಿ ನಕಲಿಬಂಗಾರಕೊಟ್ಟು ಮೋಸಮಾಡಿ ಐದುಲಕ್ಷ ರೂಪಾಯಿಗಳನ್ನು ತಗೆದುಕೊಂಡು ಹೋಗಿದ್ದಾರೆ. ನಾನು ಕೃಷಿಕ ಮತ್ತು ಕೊಬ್ಬರಿ ಎಣ್ಣೆಯ ಚಿಕ್ಕ ಗಾಣ ಮಾಡಿಕೊಂಡಿದ್ದೇನೆ.ನನ್ನ ತಾಯಿಯ ಕೈಯಲ್ಲಿ ಹಣ ಕೊಟ್ಟಿದ್ದೆ ನನ್ನ ವ್ಯವಹಾರಕ್ಕೆ ಬೇಕಾದಾಗ ತಾಯಿಯವರಿಂದ ಹಣಪಡೆಯುತಿದ್ದೆ.ನಾನು ಊರಲ್ಲಿ ಇಲ್ಲದ ಸಮಯದಲ್ಲಿ ವಂಚಕರು ನನ್ನ ತಾಯಿಯ ಬಳಿಬಂದು ಅಮ್ಮಾ ನಾವು ಪೈಪ್ ಲೈನ್ ಕೆಲಸಮಾಡುವಾಗ ನಮಗೆ ಬಂಗಾರ ಸಿಕ್ಕಿದೆ ಕಡಿಮೆ ಬೆಲೆಯಲ್ಲಿ ನಿಮಗೆ ಕೊಡುತ್ತೇವೆ ಇಪ್ಪತ್ತೈದು ಲಕ್ಷ ಕೊಟ್ರೆ ಸಾಕು ಎಂದು ಕೇಳಿಕೊಂಡಿದ್ದಾರೆ.ಈ ವಂಚಕರು ಸಮಾರು ದಿನಗಳಿಂದ ಇಲ್ಲಿಗೆ ಬಂದು ಕೊಬ್ರಿ ಎಣ್ಣೆಯನ್ನು ತಗೆದುಕೊಂಡು ಹೋಗುತಿದ್ದರು ಹಾಗಾಗಿ ಸ್ವಲ್ಪ ಮುಖಪರಿಚಯವೂ ಆ ತಾಯಿವರಿಗೆ ಇತ್ತು ಹಾಗಾಗಿ ಅವರೂ ಕೂಡಾ ಇವರನ್ನು ನಂಬಿದ್ದಾರೆ. ಆಗ ವಂಚಕರು ಅಸಲಿಬಂಗಾರ ಒಂದೆರಡು ಕಾಯಿನ್ ತೋರಿಸಿದ್ದಾರೆ. ಅದನ್ನು ನಂಬಿದ ನಮ್ಮ ತಾಯಿಯು ನನಹತ್ತಿರ ಅಷ್ಟು ಹಣವಿಲ್ಲಾ ಐದುಲಕ್ಷಮಾತ್ರ ಇದೆ ಎಂದು ಹೇಳಿದ್ದಾರೆ.ಸರಿ ಅಮ್ಮಾ ಅಷ್ಟಾದರೂ ಕೊಡಿ ಎಂದು ಹೇಳಿ ಹಣಪಡೆದು ನಕಲಿಬಂಗಾರ ಕೊಟ್ಟು ಹೋಗಿದ್ದಾರೆ.ಇದಾದನಂತರ ನನಗೆ ವ್ಯವಹಾರಕ್ಕೆ ಹಣಬೇಕಾದ್ದರಿಂದ ನನ್ನ ತಾಯಿಹತ್ತಿರ ಹಣಕೇಳಿದಾಗ ನನ್ನ ತಾಯಿಯವರು ಬಂಗಾರ ಖರೀದಿಸಿದ್ದಾಗಿ ಹೇಳಿದರು.ಅದನ್ನು ಪರೀಕ್ಷಿಸಿದಾಗ ಅದು ನಕಲಿ ಬಂಗಾರವೆಂದು ಗೊತ್ತಾಗಿದೆ ಎಂದು ನನಗೆ ವಿವರಿಸಿದರು.ನೀವು ಪೊಲೀಸ್ ದೂರು ನೀಡಿದ್ದೀರಾ ಎಂದು ಕೇಳಿದಾಗ ಇಲ್ಲಾ ಸರ್ ಆ ವಂಚಕರು ನಮ್ಮಹತ್ತಿರ ಎಣ್ಣೆ ವ್ಯಾಪಾರಕ್ಕೆ ಬರುತಿದ್ದರು ಅವರನ್ನು ನಾನು ನೋಡಿದ್ದರಿಂದ ಅವರನ್ನು ಹುಡುಕುತ್ತಾ ಹಳ್ಳಿ ಹಳ್ಳಿಗಳಲ್ಲಿ ಹುಡುಕುತಿದ್ದೇನೆ ಎಂದು ಹೇಳಿದು. ತಾವು ತಕ್ಷಣವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಈ ಕುರಿತು ನಡೆದ ವಿಷಯವನ್ನೆಲ್ಲಾ ವಿವರಿಸಿ ದೂರು ನೀಡಲು ಹೇಳಿದ್ದೆ ಅದರಂತೆ ಈ ದಿನ ಅವರು ಬಸವಾಪಟ್ಟಣ ಪೊಲೀಸ್ ಠಾಣೆಗೆ ಹೋಗಿದ್ದಾರೆ.
ಆದರೆ ಅಧಿಕಾರಿಗಳು ಕೆಲಸದ ಒತ್ತಡದಿಂದಾಗಿ ಇವರಿಗೆ ಸಿಕ್ಕಿಲ್ಲವಂತೆ ಠಾಣೆಯಲ್ಲಿ ಇದ್ದ ಸಹಾಯಕರಿಗೆ ಹೇಳಿ ಒಂದು ದೂರನ್ನು ಕೊಟ್ಟು ಬಂದಿದ್ದಾರೆ. ಬಸವಾಪಟ್ಟಣದ ಪೊಲೀಸ್ ಅಧಿಕಾರಿಗಳು ತಕ್ಷಣವೇ ಇಂಥಾ ವಂಚಕರ ಜಾಲವನ್ನು ಪತ್ತೆ ಹಚ್ಚಿ ಜನಜಾಗೃತಿಗಾಗಿ ಕ್ರಮಕೈಗೋಳ್ಳಬೇಕು.ಮತ್ತು ವಂಚನೆಗೆ ಒಳಗಾದ ಬಡ ರೈತಕುಟುಂಬಕ್ಕೆ ನ್ಯಾಯವದಗಿಸಬೇಕು.