ವಿಜಯಪುರ:ಗದಗ-ವಿಜಯಪುರ ಮಾರ್ಗದಲ್ಲಿ ಬರುವ ಹೊನಗನಹಳ್ಳಿ ರೈಲು ನಿಲ್ದಾಣವು ಹೊನಗನಹಳ್ಳಿ,ಸವನಹಳ್ಳಿ,ಹಿಟ್ನಳ್ಳಿ,ಮನಗೂಳಿ,ತೊನಶಾಳ,ಬಬಲೇಶ್ವರ,ದೂಡಿಹಾಳ,ಕಾಖಂಡಕಿ,ಮಮದಾಪುರ,ಹಂಗರಗಿ,ಕೊಲ್ಲಾರ,ರೋಣಿಹಾಳ,ಮಲಘಾನ,ಕಾರಜೋಳ,ಅಷ್ಟೆ ಅಲ್ಲದೆ ಇನ್ನೂ ಅನೇಕ ಗ್ರಾಮಗಳ ಜಂಕ್ಷನ್ ತರ ಇದೆ ಅಲ್ಲದೆ ಜುಮನಾಳ ಮತ್ತು ಮುಳವಾಡ ರೈಲು ನಿಲ್ದಾಣಗಳಿದ್ದರೂ ಸಹ ಅವು ಪ್ರಯಾಣಿಕರಿಗೆ ಅನಾನುಕೂಲ ಅವರೂ ಸಹ ಹೊನಗನಹಳ್ಳಿ ರೈಲು ನಿಲ್ದಾಣವೇ ಅತ್ಯಂತ ಅನುಕೂಲವಾಗುತ್ತದೆ.

ಮತ್ತು ಕಲಬುರಗಿ ಈ ಭಾಗದ ಹೈಕೋರ್ಟ್ ಸ್ಥಾನ ಅಲ್ಲಿಗೆ ಹೋಗಿಬರಲು ಒಂದೇ ಒಂದು ರೈಲಿನ ವ್ಯವಸ್ಥೆ ಇಲ್ಲಾ.ಈ ಭಾಗದ ಜನರು ಮುಂಬಯಿ, ಹೈದರಾಬಾದ್, ಸೊಲ್ಲಾಪುರ, ಹೊಸಪೇಟೆ, ಹುಬ್ಬಳ್ಳಿ ಗಳೊಂದಿಗೆ ನಿರಂತರ ವ್ಯವಹಾರ ಹಾಗೂ ಕೌಟುಂಬಿಕ ಸಂಭಂದವಿದ್ದು ಪ್ರತಿನಿತ್ಯ ನೂರಾರು ಪ್ರಯಾಣಿಕರು ಈ ನಿಲ್ದಾಣದಿಂದ ಪ್ರಯಾಣಿಸುತ್ತಾರೆ.ಹಿಂದೆ ಮೀಟರ್ ಗೇಜ್ ಇದ್ದಾಗ ಈ ನಿಲ್ದಾಣದ ಮೂಲಕ ಒಟ್ಟು ಹತ್ತು ರೈಲುಗಳು ಓಡಾಡುತಿದ್ದವು ಆಗ ಈ ನಿಲ್ದಾಣದಲ್ಲಿ ಹತ್ತರಲ್ಲಿ ಎಂಟು ರೈಲುಗಳು ನಿಲುಗಡೆ ಇದ್ದವು.ಆಗ ಪ್ರಯಾಣಿಕರಿಂದ ನಿಲ್ದಾಣ ತುಂಬಿತುಳುಕುತಿತ್ತು. ಆದರೆ ಟಿಕೇಟ್ ವ್ಯವಸ್ಥೆ ಸರಿ ಇರದೆ ಕೇವಲ ವಿಜಯಪುರ ಮತ್ತು ಬಸವನಬಾಗೇಡಿ ಅಥವಾ ಆಲಿಮಟ್ಟಿವರೆಗೆ ಮಾತ್ರ ಸಿಗುತಿದ್ದವು ಈಗ ತಾವು ಗಣಕೀಕೃತ ಟಿಕೇಟ್ ಸಿಗುವ ವ್ಯವಸ್ಥೆ ಮಾಡಬೇಕು ಮತ್ತು ಈ ನಿಲ್ದಾಣದಲ್ಲಿ ರೈಲು ಸಂಖ್ಯೆ:
(1),06919 & 06920,
(2),17308 & 17307,
(3),07330 & 07329,
(4),07377 & 07378,
(5),06545 & 06545,
(6),17324 & 17323,
(7),17320 & 17319.ಈ ಸಂಖ್ಯೆಗಳ ರೈಲುಗಳನ್ನು ಹೊನಗನಹಳ್ಳಿ ರೈಲು ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆ ಮಾಡಬೇಕು. ಇದರಿಂದ ಮುಂಬಯಿ, ಹೈದರಾಬಾದ್,ಕಲಬುರಗಿ,ಹೊಸಪೇಟೆ,ಸೊಲ್ಲಾಪುರ, ಹುಬ್ಬಳ್ಳಿ ಗೆ ನೇರ ಪ್ರಯಾಣಕ್ಕೆ ಅನುಕೂಲವಾಗುತ್ತದೆ.ಇಲಾಖೆಗೂ ಆದಾಯಬರುತ್ತದೆ ಗ್ರಾಮಾಂತರ ರೈಲು ಪ್ರಯಾಣಿಕರು ನೇರವಾಗಿ ಬೆಂಗಳೂರು, ಕಲಬುರಗಿ ಮುಂತಾದ ಕಡೆ ಕೋರ್ಟ್, ಕಚೇರಿ,ವಿದ್ಯಾಭ್ಯಾಸ, ವ್ಯವಹಾರಕ್ಕಾಗಿ ಪ್ರಯಾಣಿಸಲು ಅನುಕೂಲವಾಗುತ್ತದೆ.

ಈ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ಈ ಬೇಡಿಕೆಯನ್ನು ಭ್ರಹತ್ ಕೈಗಾರಿಕೆ ಮತ್ತು ಮೂಲಸೌಕರ್ಯಾಭಿವೃದ್ಧಿಸಚಿವರು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರೂ ಇದೇ ಕ್ಷೇತ್ರದ ಶಾಸಕ ಶ್ರೀ ಎಂ.ಬಿ.ಪಾಟೀಲ್ ರವರು ಮತ್ತು ಈ ನಿಲ್ದಾಣದ ಕುರಿತು ಎಲ್ಲಾ ರೀತಿಯ ತಿಳುವಳಿಕೆ ಮತ್ತು ಸ್ವತಃ ನೋಡಿದ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಹಾಗೂ ಚಿತ್ರದುರ್ಗ ಸಂಸದ ಗೋವಿಂದಕಾರಜೋಳರವರು ಮುತವರ್ಜಿ ವಹಿಸಿ ಸೋಮಣ್ಣ ನವರ ಗಮನಕ್ಕೆ ಇದರ ಅನುಕೂಲ ವಿವರಿಸಿ ಕಾರ್ಯಸಾಧನೆ ಮಾಡಿ ಜನರ ಆಶೋತ್ತರಕ್ಕೆ ಸ್ಪಂದಿಸಬೇಕು.ಅಧಿಕಾರ ಶಾಸ್ವತವಲ್ಲಾ ಮಾಡಿದ ಸೇವೆ ಶಾಸ್ವತ ಜನಮನದಲ್ಲಿರುವಂತೆ ಮಾಡಬಢಕಾಗಿ ಈ ಸಾರ್ವಜನಿಕರ ಒತ್ತಾಯವಾಗಿದೆ.

LEAVE A REPLY

Please enter your comment!
Please enter your name here