ಬೆಂಗಳೂರು: ಕರ್ನಾಟಕ ರತ್ನ ಡಾಕ್ಟರ್ ವಿಷ್ಣುವರ್ಧನ್ ರವರ ಹದಿನಾರಣೆಯ ಪುಣ್ಯಸ್ಮರಣೆಯನ್ನು ಮಾಡಲಾಯಿತು.ನಗರದ ರಾಜಾಜಿನಗರ ಮೂರನೆ ಹಂತ ಶ್ರೀ ರಾಮ ಮಂದಿರ ಹತ್ತಿರ ಅಧ್ಯಕ್ಷ ದೇವರಾಜ್ ಅವರ ಮುಖಂಡತ್ವದಲ್ಲಿ ವಕೀಲರಾದ ಶ್ರೀ ರಮೇಶ್ ಆರ್ ಎ ಗೌಡ ಅವರ ಸಲಹೆಯಂತೆ ಕಾರ್ಯಕ್ರಮ ನೆರವೇರಿಸಲಾಯಿತು.ಈ ಕಾರ್ಯಕ್ರಮದ ಉಸ್ತುವಾರಿ ಶ್ರೀ ಸುರೇಶ್,ಬಾಬು ವಹಿಸಿದ್ದರು.ಅಭಿಮಾನಿಗಳಾದ ದೀಪಕ್ ಹಾಗೂ ಅವರ ಸ್ನೇಹಿತರು ಮತ್ತು ಎಸ್.ಕೆ.ಒಡೆಯರ್,ಕಾಶಿ ಸೇರಿದಂತೆ ಹಲವರು ಭಾಗವಹಿಸಿದ್ದರು.





