ಬೆಂಗಳೂರಿನ ನಯನ ಸಭಾಂಗಣದಲ್ಲಿ ಕರ್ನಾಟಕ ರಂಗ ಪರಿಷತ್ತು ಕೇಂದ್ರ ಸಮಿತಿ ಬೆಂಗಳೂರು ಏರ್ಪಡಿಸಿದ್ದ ಹಿರಿಯ ರಂಗ ಸಂಘಟಕ ಮಂಡ್ಯದ ಪ್ರೊ. ಜಯಪ್ರಕಾಶ್ ಗೌಡ ಅಭಿನಂದನಾ ಸಮಾರಂಭದಲ್ಲಿ ಹಿರಿಯ ರಂಗ ಸಂಘಟಕ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಜಿ. ಕಪ್ಪಣ್ಣ
ಮಾತನಾಡುತ್ತ,ಜಯಪ್ರಕಾಶಗೌಡ ರು ರೈತ ಕುಟುಂಬದಲ್ಲಿ ಹುಟ್ಟಿ ಮಂಡ್ಯದ ಜನನಾಯಕರು ಮತ್ತು ಸಾಂಸ್ಕೃತಿಕ ನಾಯಕರು ಆದ ಕೆ. ವಿ.ಶಂಕರೇಗೌಡ ಶಿಷ್ಯರಾಗಿ,ರಂಗ ಬಂಧುವಾಗಿ ನಿರಂತರವಾಗಿ ಕನ್ನಡದ ಕೆಲಸಗಳನ್ನ ಮಾಡುತ್ತಾ ಬರುತ್ತಿದ್ದಾರೆ, ಜೊತೆಗೆ ಮೂಡಲಪಾಯ ಯಕ್ಷಗಾನದ ತರಬೇತಿ ಕೇಂದ್ರವನ್ನು ತೆರೆದು ಇಂದಿನ ಯುವ ಪೀಳಿಗೆಯವರಿಗೆ ಕಲೆ,ಸಾಹಿತ್ಯ, ಸಂಸ್ಕೃತಿಯ ಅರಿವು ಮೂಡಿಸುತ್ತಿರುವುದು ಅಭಿನಂದನಿಯ. ಮಂಡ್ಯದಲ್ಲಿ ಕರ್ನಾಟಕ ಸಂಘದಿಂದ ಸುಸರ್ಜಿತ ರಂಗಮಂದಿರವನ್ನು 5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಹೊರಟಿರುವುದು ಜಯಪ್ರಕಾಶಗೌಡರ ರಂಗಬದ್ದ ತೆಯ ಸಾಕ್ಷಿ. ಗೌಡರ ನಿರಂತರ ಸೇವೆಯನ್ನು ಪರಿಗಣಿಸಿ ಮಂಡ್ಯ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿರುವುದು, ಖಂಡಿತ ರಂಗಭೂಮಿ ಹೆಮ್ಮೆ ಪಡುವಂತಹದ್ದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಾಟಕಕಾರ ಡಾ. ಚಂದ್ರು ಕಾಳೇನಹಳ್ಳಿ ಕರ್ನಾಟಕ ರಂಗ ಪರಿಷತ್ತಿನ ರಾಜ್ಯ ಸಂಚಾಲಕ ಸಿಎಂ ನರಸಿಂಹಮೂರ್ತಿ, ರಂಗಸಂಘಟಕ ಸಂಸ ಸುರೇಶ್, ಭಾಗವಹಿಸಿದ್ದರು, ಕಾರ್ಯಕ್ರಮದಲ್ಲಿ ಕಿರಂ ನಾಗರಾಜ ರಚನೆಯ ನೀಗಿಕೊಂಡ ಸಂಸ ನಾಟಕ ಸಿದ್ದರಾಮ ಕೊಪ್ಪರ್ ನಿರ್ದೇಶನದಲ್ಲಿ ಪ್ರದರ್ಶನವಾಯಿತು.