ಬೆಂಗಳೂರು:ಇತ್ತೀಚೆಗೆ ಜಾತಿಗೊಂದು ಅಭಿವೃದ್ಧಿ ನಿಗಮ ಹಾಗೂ ಭಾಷೆಗೊಂದು ಅಭಿವೃದ್ಧಿ ನಿಗಮ ಮಾಡಿ ಹಿಂದುಳಿದ ವರ್ಗದವರಿಗೆ ಸಲ್ಲುತ್ತಿದ್ದ ಸವಲತ್ತುಗಳನ್ನು ಮುಂದುವರೆದ ಸಮುದಾಯದ ಆರ್ಥಿಕ ದುರ್ಬಲರಿಗೆ ಒದಗಿಸಲು ಪ್ರಾರಂಭಿಸಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿ ಹಿಂದುಳಿದ ವರ್ಗಗಳ ಜೊತೆಗೆ ಪ್ರಬಲ ಸಮುದಾಯದ ಆರ್ಥಿಕ ದುರ್ಬಲರಿಗೆ ಸವಲತ್ತು ನೀಡುವ ಸರ್ಕಾರದ ನಡೆಗೆ ಯಾವುದೇ ಅಹಿಂದ ವರ್ಗ ಇದುವರೆಗೂ ಯಾವುದೇ ರೀತಿಯ ವಿರೋಧ ವ್ಯಕ್ತ ಪಡಿಸಿಲ್ಲ ಅಥವಾ ತಲೆಯನ್ನು ಸಹ ಕೆಡಿಸಿ ಕೊಂಡಿಲ್ಲ. ಆದರೆ ಸರ್ಕಾರದ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಜಯ ಪ್ರಕಾಶ್ ಹೆಗ್ಡೆರವರ (ಕಾಂತರಾಜು ವರದಿ ಸರ್ಕಾರ ಹಿಂದೆ ನೇರವಾಗಿ ಪಡೆದುಕೊಳ್ಳದ ಕಾರಣ) ವರದಿಯು ಬಿಡುಗಡೆಯಾದ ನಂತರ ಬಂದ ವಿರೋಧಗಳು ಹಿಂದುಳಿದ ವರ್ಗಗಳು, ಶೋಷಿತರು ಹಾಗೂ ಅಲ್ಪ ಸಂಖ್ಯಾತರು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಸಾದ್ಯವೇ ಇಲ್ಲವೆಂಬ ಸಂಕೋಚಿತ ಮನೋಭಾವ ತೋರುತ್ತದೆ. ಈ ವರದಿಯಲ್ಲಿನ ಅಂಶಗಳಲ್ಲಿನ ಅಂಕಿಅಂಶಗಳ ಬಗ್ಗೆ ಚರ್ಚಿಸದೇ ಕಾಂತರಾಜು ರವರು ಒಂದು ಸಮುದಾಯಕ್ಕೆ ಸೇರಿದ್ದಾರೆ. ಆ ಸಮುದಾಯದ ಹಿಂದುಳುವಿಕೆಯ ಬಗ್ಗೆ ವರದಿಯಲ್ಲಿ ಉಲ್ಲೇಖವಿದೆ ಎಂಬ ಅಂಶವನ್ನು ಮಾತ್ರ ಎತ್ತಿ ಹಿಡಿದು “ನಾನು ಕಳ್ಳ ಪಾರರನ್ನು ನಂಬುವುದೇ” ಎಂಬಂತೆ ವಿಳಂಬ ಮಾಡಿ ಈಗ ಹತ್ತು ವರ್ಷದ ಹಿಂದಿನ ವರದಿ ಎಂದು ಮರು ಸಮೀಕ್ಷೆ ಮಾಡಲು ನಿರ್ಧರಿಸಿದ್ದಾರೆ. ನೂರು ಮರು ಸಮೀಕ್ಷೆ ಮಾಡಿದ್ದರೂ ಸಹ ಸಂಖ್ಯೆಗಳು ಮಾತ್ರ ಹೆಚ್ಚು ಕಮ್ಮಿ ಆಗುತ್ತವೆ. ಆದರೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿವಿಕೆಯ ಗಾತ್ರ ಮಾತ್ರ ಒಂದೇ ಇರುತ್ತದೆ.

ಹಳೆ ಮೈಸೂರು ಪ್ರಾಂತ್ಯದಲ್ಲಿ ಒಂದು ಮುಂದುವರೆದ ಸಮುದಾಯ ಪ್ರಬಲ ಜಾತಿ ಜೊತೆ ಹಿಂದುಳಿದ ಸಮುದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಪೈಪೋಟಿ ಮಾಡುವುದೆ ಎಂದರೆ ಅದು ಮುಂದುವರೆದಿದೆ ಎಂದು ಅರ್ಥವಲ್ಲ, ಏಕೆಂದರೆ ಅದೇ ರೀತಿ ಅದೇ ಹಿಂದುಳಿದ ಸಮುದಾಯ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಬಲ ಸಮುದಾಯದ ಜೊತೆ ಪೈಪೋಟಿ ಮಾಡಲು ಸಾಧ್ಯವಿಲ್ಲ. ಅದೇ ರೀತಿ ಉತ್ತರ ಕರ್ನಾಟಕದ ಜನರ ಪರಿಸ್ಥಿತಿನೂ, ದಕ್ಷಿಣ ಕರ್ನಾಟಕ ಜನರ ಪರಿಸ್ಥಿತಿ ಒಂದೇ ರಾಜ್ಯ, ಒಂದೇ ಸರ್ಕಾರ ಇದ್ದರೂ ಸಹ ಒಂದೇ ತರ ಇಲ್ಲ, ಏಕೆಂದರೆ ಸಾಮಾಜಿಕ ನ್ಯಾಯದ ಆಧಾರದಲ್ಲಿ ಇರುವವರೆಗೂ ಅಧಿಕಾರ ಮತ್ತು ಸರ್ಕಾರದ ಸವಲತ್ತು ಹಂಚಿಕೆಯಾಗಿಲ್ಲ. ಶಿಕ್ಷಣದ ಪರಿಸ್ಥಿತಿಯು ಸಹ ಭಿನ್ನವಾಗಿದೆ. ಅಲ್ಲಿ ಆ ಹಿಂದುಳಿದ ಸಮುದಾಯದ ಸಂಖ್ಯೆ ಜಾಸ್ತಿ ಇದ್ದಾಗ ಅದು ಹೆಚ್ಚು ತೋರಿಸಿದ್ದಾರೆ ಎಂಬ ಭಾವನೆ ಮೈಸೂರು ಪ್ರಾಂತ್ಯದಲ್ಲಿ ತುಲನೆ ಮಾಡಿ ಹೇಳುವಷ್ಟು ಬುದ್ದಿ ಜೀವಿಗಳು ಪ್ರಬಲ ಸಮುದಾಯದಲ್ಲಿ ಇದ್ದಾರೆ ಎಂದರೆ ಎಂತಹ ಸ್ವಾರ್ಥಿಗಳು, ನೋಡಿ ಅರ್ಥ ಮಾಡಿಕೊಳ್ಳಬೇಕು.
ಈ ರೀತಿಯ ಹಿಂದುಳಿದ ವರ್ಗಗಳ ಸಮೀಕ್ಷೆಯನ್ನು ವಿಳಂಬ ಮಾಡಿ ಅವರ ಹಕ್ಕನ್ನು ಕಿತ್ತುಕೊಳ್ಳುವ ಕೆಲವು ನಾಯಕರು ಮತ್ತು ಜಾತಿಗಣತಿ ಎಂದು ತಪ್ಪು ತಿಳಿದು ಬೇಕಾಬಿಟ್ಟಿ ಮಾತನಾಡುವ ಕೆಲವು ಮುಂದುವರೆದ ಸಮುದಾಯದ ಜನರಿಗೆ ಈ ನನ್ನ ಕೆಲವು ಪ್ರಶ್ನೆಗಳು.

  1. ಪ್ರಣಾಳಿಕೆಯಲ್ಲಿ ಜಾತಿಗಣತಿ ಮಾಡುತ್ತೇವೆ ಎಂದಾಗ ಸ್ವಪಕ್ಷ (ಕಾಂಗ್ರೇಸ್) ಮತ್ತು ಈಗಿನ ವಿರೋಧ ಪಕ್ಷದ ಮುಂದುವರೆದ ಸಮುದಾಯದ ನಾಯಕರು ಅಥವಾ MLA/MP ಅಭ್ಯರ್ಥಿಗಳು ಏಕೆ ವಿರೋದಿಸದೇ ಮೌನವಾಗಿದ್ದು. ಈಗ ಗೆದ್ದ ಮೇಲೆ ವಿರೋಧ ವ್ಯಕ್ತ ಪಡಿಸುತ್ತಿರುವುದು ತರವೇ.
  2. ಕಾಂತರಾಜು ವರದಿಯ ಪರಿಷ್ಕರಣೆ ಮತ್ತು ಬಿಡುಗಡೆಗೆ ಜಯಪ್ರಕಾಶ್ ಹೆಗ್ಡೆ ನೇಮಕ ಮಾಡಿ ಪರಿಶೀಲಿಸಿದ ನಂತರವೂ ವಿಳಂಭ ಮಾಡಿ ಎರಡು ವರ್ಷ ಕಾಲಹರಣ ಮಾಡಿ ನಂತರ 10 ವರ್ಷದ ಹಿಂದಿನ ವರದಿ ಎಂದು ಮರು ಸಮೀಕ್ಷೆ ಮಾಡುತ್ತಿರುವುದು. ಶೋಷಿತರಿಗೆ (ಎಲ್ಲಾ ವರ್ಗದ, ಎಲ್ಲಾ ಜಾತಿಯ) ಮಾಡುವ ಅನ್ಯಾಯವಲ್ಲವೇ.
  3. ನಮ್ಮ ಸಮುದಾಯ ಕಡಿಮೆ ತೋರಿಸಿದ್ದಾರೆ ಎಂದು ಎಲ್ಲಾ ಸಮುದಾಯದ ನಾಯಕರು ಮತ್ತು ಮುಖಂಡರು, ಸ್ವಾಮೀಜಿಗಳು ಹೇಳುತ್ತಿದ್ದಾರೆ. ಇದು ಜನಸಂಖ್ಯೆಯ ಜಾತಿ ಗಣತಿಯೇ? ಅಥವಾ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ಆರ್ಥಿಕ ಸಮೀಕ್ಷೆಯೇ? ಆಯ್ತು ನೀವು ಜಾಸ್ತಿ ಇದೆ ಎಂದು ಹೇಳಲು ಏನು ಆಧಾರ, ಸರಿ ಜನ ಸಂಖ್ಯೆ ಜಾಸ್ತಿ ಇದ್ದರೂ ಸಹ ನಿಮ್ಮ ಹಿಂದು ಪ್ರಳೆಕೆಯ ಅಂಶ ಎಷ್ಟು, ಶೇಕಡವಾರು ಎಷ್ಟು ಇದೆ. ತಮ್ಮ ಶೈಕ್ಷಣಿಕ ಹಿಂದುವುಳಿಕೆ ಮುಸ್ಲಿಂ, ಕುರುಬ, SC/ST, ಸಮುದಾಯಕ್ಕಿಂತ ಕಡಿಮೆ ಇದೆಯೇ? ತಮ್ಮ ಆರ್ಥಿಕ ಪರಿಸ್ಥಿತಿ ಮುಸ್ಲಿಂ, ಕುರುಬ, SC/ST ಗಿಂತ ಕಡಿಮೆ ಇದೆಯೇ? ಎಷ್ಟು ಶೇಕಡವಾರು ಕಡಿಮೆ ಇದೆ ಹೇಳಿ.
  4. ಯಾವುದೇ ಹಿಂದುಳಿದ ರಾಜಕಾರಣಿ/ನಾಯಕ ಧ್ವನಿ ಎತ್ತಿದ್ದಾಗ ಅವರನ್ನು ತುಳಿಯುವ ಕೆಲಸ ನೀವು ಮಾಡಿಲ್ಲವೇ? ಮಾಡಿಲ್ಲವಾದಲ್ಲಿ ಹೆಚ್ಚು ಜನಸಂಖ್ಯೆವುಳ್ಳ ಅಹಿಂದ ವರ್ಗದ ನಾಯಕರು ಏಕೆ ಗೆದ್ದು ಬರುತ್ತಿಲ್ಲ? ನಿಮ್ಮ ಹಣಬಲ ಮತ್ತು ತೋಳ್ಳಲದ ಮುಂದೆ ಅವರು ನಿಲ್ಲಲು ಸಾಧ್ಯವಿಲ್ಲ ಹಾಗಾದರೆ ಅವರು ಶೋಷಿತರಲ್ಲವೇ?.
  5. ನೀವು ಮತ್ತು ನಿಮ್ಮ ಮಕ್ಕಳು ಅಲೆಮಾರಿ, ಕಸುಬು, ಅಲೆಮಾರಿ ಕುರಿಗಾಹಿ, ಅಲೆಮಾರಿ ಗೋಲ್ಲರು ಶಿಕ್ಷಣದಿಂದ ವಂಚಿತರಾಗಿದ್ದೀರಾ? ಅದರ ಶೇಕಡಾವಾರು ಎಷ್ಟು?.
  6. ನೀವು ಮತ್ತು ನಿಮ್ಮ ಮಕ್ಕಳು ಪ್ರಬಲ ರಾಜಕೀಯ ಒತ್ತಡದಿಂದ ಬೇರೆಯವರ ಅವಕಾಶಗಳನ್ನು ಕಿತ್ತುಕೊಂಡು ಆರ್ಥಿಕವಾಗಿ ಸಬಲರಾಗಿಲ್ಲವೇ? ಎಂಬುದನ್ನು ಸಾಬೀತು ಪಡಿಸಲು ಹೊರಟಿದ್ದೀರಾ?.
  7. ಈಗಾಗಲೇ ಶೋಷಿತರ, SC/ST ವರ್ಗದವರ ಮೀಸಲಾತಿಯನ್ನು ಕಸಿದುಕೊಳ್ಳಲು ಹಿಂದುಳಿದ ಜಾತಿಯ ಹೆಸರಿನಲ್ಲಿ, SC/ST ಯ ಜಾತಿ ದೃಢೀಕರಣ ಪತ್ರಗಳನ್ನು ಪಡೆದುಕೊಂಡು ಎಲ್ಲಾ ಅವಕಾಶಗಳನ್ನು ಶೋಷಿತರ ಮತ್ತು SC/ST ರವರಿಂದ ಕಸಿದುಕೊಂಡಿದ್ದು, ಆ ಜಾತಿಗಳ ದೃಢೀಕರಣ ಪಡೆದವರು ಈಗ ನಿಮ್ಮ ಸಮುದಾಯದ ಜನಸಂಖ್ಯೆ/ಜಾತಿಗಣನೆಗೆ ಬರಲು ಹೇಗೆ ಸಾಧ್ಯ? ಮದುವೆ, ಮುಂಜಿ, ಸಂಪ್ರದಾಯ ಎಲ್ಲಾ ಮಠ-ಮಾನ್ಯಗಳನ್ನು ಮಾಡುವಾಗ ನಾವುಗಳು ಮುಂದುವರೆದ ಸಮುದಾಯದವರು, ಸರ್ಕಾರದ
    ಅವಕಾಶಗಳನ್ನು, ಸೌಲಭ್ಯಗಳನ್ನು ಪಡೆಯುವಾಗ ಹಿಂದುಳಿದ ಸಮುದಾಯದವರಾಗಲಿ ಹೇಗೆ ಆಗಲು ಸಾಧ್ಯ?. ಒಂದೇ ಮನೆಯಲ್ಲಿ ನಂಟಸ್ತಿತನಕ್ಕೆ ಒಂದು ಜಾತಿ, ಉದ್ಯೋಗಕ್ಕೆ ಒಂದು ಜಾತಿ ಇರಲು ಸಾಧ್ಯವೇ? ದುರ್ಬಲರು ಹೋದಾಗ ಸಿಂದುತ್ವ ನೀಡಲು ವರ್ಷ, ಎರಡು ವರ್ಷ ಅಲೆಸುವ ಮುಂದುವರೆದ ಸಮುದಾಯದ ಅಧಿಕಾರಿಗಳು, ಮುಂದುವರೆದ ಸಮುದಾಯದವರಿಗೆ ಸುಳ್ಳು ಜಾತಿ ಪ್ರಮಾಣ ಮತ್ತು ಸಿಂಧುತ್ವ ನೀಡಲು ಒಂದೇ ತಿಂಗಳಿನಲ್ಲಿ ಶ್ರಮದಾನ ಮಾಡುತ್ತಾರೆ. ಅದಕ್ಕೆ ತಮ್ಮ ಸಮುದಾಯದವರಿಗೆ ಆಯ ಕಟ್ಟಿನ ಹುದ್ದೆ ಕೇಳುವುದು ಮತ್ತು ಗಲಾಟೆ ಮಾಡುವುದು.
  8. ಸ್ವತಂತ್ರ ಪೂರ್ವದಲ್ಲಿ ಹಿಂದುಳಿದ ಜಾತಿಗೆ ಸೇರಿದವರನ್ನು ಈಗ ರಾಜಕೀಯಕ್ಕಾಗಿ ಮತ್ತು ಮತಗಳಿಕೆಗಾಗಿ ತಮ್ಮ ಸಮುದಾಯ ಜೊತೆಗೆ ಸೇರಿಸಿಕೊಂಡು ಜಾತಿ ಗಣನೆಯಲ್ಲಿ ಹೆಚ್ಚು ಜನ ಸಂಖ್ಯೆವುಳ್ಳವರು ಎಂದು ಬಿಂಬಿಸಿಕೊಳ್ಳುವವರು, ಆ ಜಾತಿಗಳಿಗೆ ಮೀಸಲಾತಿಯಲ್ಲಿ OBC, ST ಕೊಡಿ ಎಂದು ಕೇಳುತ್ತಿರುವುದು ಏಕೆ? ಅವರನ್ನು ಬಿಟ್ಟು ಜಾತಿಗಣತಿ ಮಾಡಲಿ ಆಗ ತಮ್ಮ ನೈಜ್ಯ ಸಂಖ್ಯೆ ಎಷ್ಟು ಎಂದು ತಿಳಿಯುತ್ತದೆ.
  9. ಹೆಚ್ಚು ಮುಂದುವರೆದು ಸಮುದಾಯದವರು ರಾಜಕೀಯವಾಗಿ MLA/MP ಗಳಾಗಲು ತಮ್ಮ ಸಮುದಾಯದ ಜನಸಂಖ್ಯೆ ಕಾರಣವಲ್ಲ. ತಾವುಗಳು ಹಿಂದುಳಿದ ಸಮುದಾಯದವರ ಮೇಲೆ SC/ST ಯವರನ್ನು ಎತ್ತಿ ಕಟ್ಟಿ ಜಗಳ ಮಾಡಿಸಿ ಅವರ ಒಗ್ಗಟ್ಟನ್ನು ಹಾಳು ಮಾಡಿ ಅಲ್ಲಿಂದ ಸ್ವಲ್ಪ ಮತ ಪಡೆದು ಗೆಲ್ಲುತ್ತಿರುವುದು ಕರ್ನಾಟಕದಲ್ಲಿ ಉಂಟಾಗಿರುವ ಜಾತಿ ಸಂಘರ್ಷಗಳು, ಕೋಮುಗಲಭೆಗಳು (ಧರ್ಮದ ಹಾಗೂ ದಲಿತರ ಮೇಲಿನ ದೌರ್ಜನ್ಯಗಳ ಪ್ರಕರಣಗಳಲ್ಲಿ ಸಾಬೀತಾಗುತ್ತದೆ). ಇದು ಹಿಂದುಳಿದವರು, SC/ST ಹೆಚ್ಚು ಸಾಮಾನ್ಯ ಕ್ಷೇತ್ರದಲ್ಲಿ ಸೋಲಲು ಕಾರಣ ನಿಮ್ಮ ಸಾಮಾಜಿಕ ಹಾಗೂ ಸೇವಾ ಕಾಳಜಿ ಎಲ್ಲಿ?.
  10. ಬೆಂಗಳೂರು ನಗರದಲ್ಲಿ ಸಮೀಕ್ಷೆಗೆ ನಮ್ಮ ಮನೆಗೆ ನಮ್ಮ ಮನೆಗೆ ಬಂದಿಲ್ಲ ಎಂದು ಹೇಳುತ್ತೀರಿ, ಈಗಾಗಲೇ ಬೆಂಗಳೂರಿಗೆ ಬಂದು ದುಡಿದು ಒಳ್ಳೆಯ ಪದವಿ, ವ್ಯಾಸಾಂಗ, ನೌಕರಿ ಮತ್ತು ಮನೆ-ಮಠ ಮಾಡಿಕೊಂಡಿರವವರು ಎಲ್ಲಾ ಸಮುದಾಯದವರು ಇದ್ದಾರೆ. ಹಾಗೇ ಎಲ್ಲಾ Well settled ಆದ ಸಮುದಾಯದವರನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಒಳಪಡಿಸಿದ್ದಲ್ಲಿ ಸಿಗುವ ಲಾಭವೇನು?. ಸಮೀಕ್ಷೆಯಲ್ಲಿ ಎಲ್ಲಾ ಸಮುದಾಯದವರನ್ನು ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಇರುವವರಿಗೆ ಎಲ್ಲಾ ಅನುಕೂಲ ಇರುವಾಗ ನಿಮ್ಮ ಸಮೀಕ್ಷೆ ಮಾಡಿದ್ದಲ್ಲಿ ನಿಮ್ಮ ಪರವಾಗಿ ಜಾತಿ ಸಂಖ್ಯೆ ಬರುತ್ತದೆ ವಿನಃ ನಿಮ್ಮ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯಲ್ಲಿ ಇನ್ನೂ ಉತ್ತಮರಾಗಿದ್ದೀರಾ ಎಂದು ವರದಿ ಬರುತ್ತದೆ. ಆಗ ನೈಜ್ಯ ವರದಿ ಎಂದು ತಿಳಿಯಬಹುದು. ವ್ಯತಿರಿಕ್ತವಾಗಿ ಬಂದಲ್ಲಿ ವರದಿಯ ನೈಜ್ಯತೆಯ ಬಗ್ಗೆ ಈಗಾಗಲೇ ಪ್ರಶ್ನೆ ಮಾಡುವ ಹಕ್ಕು ಎಲ್ಲಾ ಸಮುದಾಯದವರಿಗೆ ಬರಬೇಕು.(ದೀಪ್ತಿ ಎಂ.ಎನ್.LLM MBA.ಬೆಂಗಳೂರು)

LEAVE A REPLY

Please enter your comment!
Please enter your name here