ಕೊಪ್ಪಳ: ಕೊಪ್ಪಳ ತಾಲ್ಲೂಕಿನ ಉದ್ದೇಶಿತ ಬಲ್ದೊಟಾ ಉಕ್ಕಿನ ಕಾರ್ಖಾನೆ ಸ್ಥಾಪನೆ ವಿರೋಧಿಸಿ, ಕೊಪ್ಪಳ ಜಿಲ್ಲಾ ಸರ್ವಪಕ್ಷಗಳ ನಿಯೋಗದಿಂದ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರನ್ನು ಹಾಗೂ ಬೃಹತ್ ಕೈಗಾರಿಕೆ ಸಚಿವರಾದ ಶ್ರೀ ಎಂ. ಬಿ ಪಾಟೀಲ್ ರವರನ್ನು ಭೇಟಿಯಾಗಿ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ನೀಡಿದ ಅನುಮತಿಯನ್ನು ರದ್ದುಗೊಳಿಸಿ, ಕೊಪ್ಪಳ ನಗರದ ನಾಗರಿಕರ ಹಿತ ಕಾಪಾಡುವಂತೆ ಮನವಿ ಸಲ್ಲಿಸಲಾಯಿತು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಿವರಾಜ ತಂಗಡಗಿ,
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಶ್ರೀ ಬಸವರಾಜ ರಾಯರೆಡ್ಡಿ, ಮಾಜಿ ಸಂಸದರು ಹಾಗೂ ಹಿರಿಯ ಮುಖಂಡರಾದ ಶ್ರೀ ಸಂಗಣ್ಣ ಕರಡಿ, ಕೊಪ್ಪಳ ಶಾಸಕರಾದ ಶ್ರೀ ಕೆ ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವರಾದ ಶ್ರೀ ಅಮರೇಗೌಡ ಬಯ್ಯಾಪುರ, ಗಂಗಾವತಿ ಶಾಸಕರಾದ ಶ್ರೀ ಗಾಲಿ ಜನಾರ್ಧನರೆಡ್ಡಿ, ಕುಷ್ಟಗಿ ಶಾಸಕರಾದ ಶ್ರೀ ದೊಡ್ಡನಗೌಡ ಪಾಟೀಲ, ವಿಧಾನಪರಿಷತ್ತು ಸದಸ್ಯರಾದ ಶ್ರೀ ಶರಣೆಗೌಡ ಪಾಟೀಲ, ಶ್ರೀ ಬಸನಗೌಡ ಬಾದರ್ಲಿ, ಶ್ರೀಮತಿ ಹೇಮಲತಾ ನಾಯಕ, ಕಾಡಾ ಅಧ್ಯಕ್ಷರಾದ ಶ್ರೀ ಹಸನ್ ಸಾಬ ದೋಟಿಹಾಳ, ಬಿಜೆಪಿ ಮುಖಂಡರಾದ ಶ್ರೀ ಬಸವರಾಜ್ ಕ್ಯಾವಟರ್, ಮಾಜಿ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ, ಮಾಜಿ ವಿಧಾನ ಪರಿಷತ್ತು ಸದಸ್ಯರಾದ ಶ್ರೀ ಕರಿಯಣ್ಣ ಸಂಗಟಿ, ಜೆಡಿಎಸ್ ಮುಖಂಡರಾದ ಶ್ರೀ ಸಿವಿ ಚಂದ್ರಶೇಖರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದು ಒಕ್ಕೊರಲನಿಂದ ಮನವಿ ಸಲ್ಲಿಸಲಾಯಿತು.