ರಾಯಚೂರು: ಈಗಾಗಲೇ ದಿನಾಂಕ ೦೩-೦೧-೨೦೨೪ ರಂದು ಸನ್ಮಾನ್ಯ ಶ್ರೀ ಶಿವಾನಂದ ಪಾಟೀಲ್, ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವರು, ಕರ್ನಾಟಕ ಸರ್ಕಾರ ವಿಧಾನಸೌಧ, ಬೆಂಗಳೂರು. ಕ್ಯಾಂಪ್ : ರಾಯಚೂರು ಹಾಗೂ ದಿನಾಂಕ ೨೩-೦೧-೨೦೨೪ ರಂದು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ರಾಯಚೂರು ರವರಿಗೆ ಮನವಿ ಪತ್ರ ನೀಡಲಾಗಿದ್ದು ಇರುತ್ತದೆ.
ರಾಯಚೂರು ನಗರದ ತೀನ್ ಕಂದಿಲ್ ಹತ್ತಿರದ ಮಚ್ಚಿ ಬಜಾರ್‌ನಲ್ಲಿ ಹಲವಾರು ಹಣ್ಣಿನ ಮಂಡಿಗಳು ಇದ್ದು, ತೀನ್‌ಕಂದಿಲ್ ರಾಯಚೂರು ಹೃದಯಭಾಗವಾಗಿದ್ದು ನಿರಂತರ ಜನ ಜಂಗುಳಿಯಿಂದ ಕೂಡಿದ ಪ್ರದೇಶವಾಗಿರುತ್ತದೆ. ಈ ಹಣ್ಣಿನ ಮಂಡಿಗಳಿಗೆ ಈಗಾಗಲೇ ದಿನಾಂಕ ೨೯-೦೧-೨೦೨೩ ರಂದು ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಹಣ್ಣಿನ ಮಂಡಿಗಳಿಗಾಗಿಯೇ ಪ್ರತ್ಯೇಕವಾಗಿ ೧೬ ಮಳಿಗೆಗಳನ್ನು ನೀಡಿ, ಎ.ಪಿ.ಎಂ.ಸಿ. ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಮಾನ್ಯ ಶಾಸಕರು ರಾಯಚೂರು ನಗರ ಹಾಗೂ ಜನಪ್ರತಿನಿಧಿಗಳು, ಹಣ್ಣಿನ ಮಂಡಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಎ.ಪಿ.ಎಂ.ಸಿ. ನಿಗಧಿಪಡಿಸಿದ ಬ್ಲಾಕ್ ನಂ-ಡಿ ಹತ್ತಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಳಿಗೆಗಳನ್ನು ಉದ್ಘಾಟನೆ ಮಾಡಲಾಗಿರುತ್ತದೆ ಹಾಗೂ ಹಣ್ಣಿನ ಮಂಡಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ವ-ಇಚ್ಛೆಯಿಂದ ಹಣ್ಣಿನ ಮಂಡಿಗಳನ್ನು ಸ್ಥಳಾಂತರ ಮಾಡಲು ಒಪ್ಪಿಕೊಂಡಿರುತ್ತಾರೆ.
ಆದರೆ ಇಂದಿನವರೆಗೂ ಮಂಡಿಗಳು ಸ್ಥಳಾಂತರ ಆಗಿರುವುದಿಲ್ಲ. ಈ ಮಂಡಿಗಳು ಸ್ಥಳಾಂತರ ಆಗದೇ ಇರುವ ಕಾರಣ ಅಂಬುಲೆನ್ಸ್ ಹಾಗೂ ಆಸ್ಪತ್ರೆಗಳಿಗೆ ಸಾರ್ವಜನಿಕರು ತಿರುಗಾಡಲು, ವಿದ್ಯಾರ್ಥಿಗಳಿಗೆ ತಿರುಗಾಡಲು, ಸಿಟಿ ಬಸ್‌ಗಳು ಈ ಮಾರ್ಗದಿಂದ ತಿರುಗಾಡುವುದಕ್ಕೆ ತುಂಬಾ ತೊಂದರೆ ಉಂಟಾಗಿರುತ್ತದೆ.
ಶಾಲಾ ಕಾಲೇಜುಗಳ ಸಮಯದಲ್ಲಿ ಹಣ್ಣಿನ ಲಾರಿಗಳು ಹಣ್ಣು ಅನ್‌ಲೋಡ್‌ಮಾಡುವುದಿರಿಂದ ಟ್ರಾಫಿಕ್ ಜಾಮ್ ಸಮಸ್ಯೆಯಾಗಿರುತ್ತದೆ ಹಾಗೂ ಬಹುಮುಖ್ಯವಾಗಿ ಈ ಮಂಡಿಗಳ ಮಾಲೀಕರು ಕೊಳೆತು ಹೋದ ಹಣ್ಣುಗಳು ರಸ್ತೆಯಲ್ಲಿ ಮತ್ತು ಕಾಲುವೆಗಳಲ್ಲಿ ಹಾಕುತ್ತಿರುವುದರಿಂದ ಕಾಲುವೆಗಳು ಮುಚ್ಚಿಹೋಗಿ ಅದರ ದುರವಾಸನೆ ಹಾಗೂ ಕ್ರಿಮಿ ಕೀಟಗಳು ಹಾಗೂ ಸೊಳೆಗಳಿಂದ ಅಲ್ಲಿನ ನಿವಾಸಿಗಳಿಗೆ ಸಾಂಕ್ರಮಿಕ ರೋಗಗಳು ಬರುತ್ತಿದೆ. ಸದರಿ ಮೇಲಿ ತಿಳಿಸಿದ ಹಣ್ಣಿನ ಮಂಡಿ ಹಾಗೂ ಹಣ್ಣು ವ್ಯಾಪಾರಿಗಳು ಸಾರ್ವಜನಿಕ ರಸ್ತೆಗಳಲ್ಲಿ ಅತಿಕ್ರಮಣ ಮಾಡಿಕೊಂಡ ಬಗ್ಗೆ ತೋರಿಸಲು ಸ್ಥಳದಲ್ಲಿನ ಭಾವಚಿತ್ರಗಳು ಈ ಮನವಿ ಪತ್ರದ ಜೊತೆ ಲಗತ್ತಿಸಲಾಗಿದೆ.
ಈ ವಿಷಯದ ಬಗ್ಗೆ ಹಲವಾರು ಸಾರಿ ನಗರಸಭೆ, ಜಿಲ್ಲಾ ಪೊಲೀಸ್ ಇಲಾಖೆಗೆ ಹಾಗೂ ಮಾನ್ಯ ಸಚಿವರಿಗೂ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದೇ ಹಣ ್ಣನ ಮಂಡಿಗಳನ್ನು ಸ್ಥಳಾಂತರಿಸಲು ದೂರು ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ವಹಿಸದಿರುವ ಕಾರಣ ಸಾರ್ವಜನಕರು ನಮ್ಮ ಸಂಘಟನೆಯ ಗಮನಕ್ಕೆ ತಂದಿದ್ದರಿAದ ಮಾನ್ಯರಾದ ತಾವುಗಳು ಈ ನಮ್ಮ ದೂರನ್ನು ಗಂಭೀರವಾಗಿ ಪರಿಗಣ ಸಿ, ಈಗಾಗಲೇ ಮಂಡಿಗಳ ವರ್ತಕರನ್ನು ಹಾಗೂ ಮಾಲೀಕರನ್ನು ಕರೆದು ಸಭೆ ನಡೆಸಿ ಸದರಿ ಹಣ ್ಣನ ಎಲ್ಲಾ ಮಂಡಿಗಳನ್ನು ಸ್ಥಳಾಂತರಿಸಲು ಎ.ಪಿ.ಎಂ.ಸಿ.ಯಲ್ಲಿ ಬ್ಲಾಕ್ ನಂ. ಡಿ ಹತ್ತಿ ಮಾರುಕಟ್ಟೆ ಪ್ರಾಂಗಣದಲ್ಲಿ ಈಗಾಗಲೇ ಸುಮಾರು ೧೬ ಮಳಿಗೆಗಳನ್ನು ಅವರವರ ಹೆಸರಿನಲ್ಲಿ ವರ್ಗಾವಣೆ ಮಾಡಲಾಗಿದ್ದು ಇರುತ್ತದೆ. ಆದರೂ ಕೂಡ ಈ ಹಣ ್ಣನ ಮಂಡಿಗಳ ಮಾಲೀಕರು ಜಿಲ್ಲಾಧಿಕಾರಿಗಳ ಆದೇಶಕ್ಕಾಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶಕ್ಕಾಗಿ ನಯಾ ಪೈಸೆ ಕಿಮ್ಮತ್ತು ಇಲ್ಲದೇ ಅದೇ ತೀನ್‌ಕಂದಿಲ್ ಹತ್ತಿರದ ಮೀನುಬಜಾರು (ಮಚ್ಚಿಬಜಾರ) ರಸ್ತೆಯಲ್ಲಿಯೇ ನಿರಂತರವಾಗಿ ಹಗಲು ರಾತ್ರಿ ಹಣ್ಣಿನ ದೊಡ್ಡ ದೊಡ್ಡ ಸರಬರಾಜು ವಾಹನಗಳನ್ನು ಅಡ್ಡಗಟ್ಟಿ ಸಾರ್ವಜನಿಕರಿಗೆ ಹಾಗೂ ನಿವಾಸಿಗಳಿಗೆ ತುಂಬಾ ತೊಂದರೆ ಉಂಟು ಮಾಡುತ್ತಿದ್ದಾರೆ.
ಹಾಗಾಗಿ ಈಗಲಾದರೂ ದಯಾಳುಗಳಾದ ತಾವುಗಳು ಈ ನನ್ನ ದೂರನ್ನು ಗಂಭೀರವಾಗಿ ಪರಿಗಣ ಸಿ ತಕ್ಷಣವೇ ಎಲ್ಲಾ ಮಂಡಿಗಳನ್ನು ಸ್ಥಳಾಂತರಿಸಲು ಖಡಕ್ ಆದೇಶ ಹೊರಡಿಸಲು ತಮ್ಮಲ್ಲಿ ಈ ನನ್ನ ಮೂರನೇ ಬಾರಿಯ ಪತ್ರದ ಮೂಲಕ ದೂರು ಸಲ್ಲಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಮುಖಂಡರು ಅಂಬಾಜಿ ರಾವ್ ಮೃದರ್‌ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here