ಕಲಬುರಗಿ,ಫೆ.೮; ಕಲಬುರಗಿ ಜಿಲ್ಲೆಯಾದ್ಯಂತ ಸಂವಿದಾನ ಕುರಿತು ಜಾಗೃತಿ ಮೂಡಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಗುರುವಾರ ಶಿರೊಳ್ಳಿ ಗ್ರಾಮದ ಮೂಲಕ ಚಿಂಚೋಳಿ ತಾಲೂಕಿಗೆ ಪ್ರವೇಶಿಸಿತು.
ಶಿರೋಳ್ಳಿ ಗ್ರಾಮದ ಯಲ್ಲಮ್ಮ ಗೇಟ್ ಬಳಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ (ಗ್ರಾ.ಕೈ) ಉಪನರ‍್ದೇಶಕ ಮತ್ತು ಜಾಗೃತಿ ಜಾಥದ ತಾಲೂಕಿನ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ತಾಲೂಕು ಪಂಚಾಯತ್ ಇ.ಓ ಶಂಕರ ರಾಠೋಡ ಸೇರಿದಂತೆ ಅನೇಕ ಅಧಿಕಾರಿಗಳು ಡೊಳ್ಳು ಬಾರಿಸಿ ಸಂಭ್ರಮದಿಂದ ತಾಲೂಕಿಗೆ ಬರಮಾಡಿಕೊಂಡರು.
ನಂತರ ಜಾಥಾವು ತಾಲೂಕಿನ ಜಟ್ಟೂರ, ರ‍್ಚಖೇಡ, ನಿಡಗುಂದ ಗ್ರಾಮಗಳಲ್ಲಿ ಸಂಚರಿಸಿ ಸಂವಿಧಾನ ಮತ್ತು ಬಸವಣ್ಣನವರ ಸಮಾನತೆ ಸಂದೇಶ ಜನರಿಗೆ ತಿಳಿಸಿತು. ಎಂದಿನಂತೆ ಗ್ರಾಮಕ್ಕೆ ಅಗಮಿಸಿದ ಜಾಥಕ್ಕೆ ಮಹಿಳೆಯರು ಆರತಿ ಬೆಳಗಿ, ಕುಂಭ ಕಳಸದೊಂದಿಗೆ ಪವಿತ್ರ ಸಂವಿಧಾನ ಕುರಿತು ಪ್ರತಿಯೊಬ್ಬರಲ್ಲು ಅರಿವು ಮೂಡಿಸಲು ಬಂದ ಸ್ಥಬ್ದಚಿತ್ರಕ್ಕೆ ರ‍್ಜರಿ ಸ್ವಾಗತ ಕೋರಿದರು.
ಇನ್ನೊಂದೆಡೆ ಆಳಂದ ತಾಲೂಕಿನ ಸಾವಳೇಶ್ವರ, ಜಿಡಗಾ, ಮೋಘಾ( ಕೆ) ರ‍್ಗಾಶಿರೂರ ಹಾಗೂ ಮಾದನಹಿಪ್ಪರಗಾ ಗ್ರಾಮಗಳಲ್ಲಿ ಸ್ಥಬ್ದಚಿತ್ರ ಸಂಚರಿಸಿತು. ರ‍್ಗಾಶಿರೂರ ಗ್ರಾಮದಲ್ಲಿ ನಡೆದ ಕರ‍್ಯಕ್ರಮದಲ್ಲಿ ಒಂದನೇ ತರಗತಿ ವಿದ್ಯರ‍್ಥಿ ಶಾಂತಲಿಂಗ ಶಿವಲಿಂಗಪ್ಪ ಭಟ್ಟರಕಿ ಸಂವಿಧಾನ ಪ್ರಸ್ತಾವನೆ ಓದಿ ಎಲ್ಲರ ಪ್ರೀತಿಗೆ ಪಾತ್ರರಾದರು.
ಇದೇ ಸಂರ‍್ಭದಲ್ಲಿ ಸಂವಿಧಾನ ಕುರಿತು ರಸಪ್ರಶ್ನೆ, ಪ್ರಬಂಧ, ಭಾಷಣ ಸ್ರ‍್ಧೆ ವಿಭಾಗದಲ್ಲಿ ವಿಜೇತರಾದ ಮಕ್ಕಳಿಗೆ ಸಂವಿಧಾನ ಪೀಠಿಕೆ, ಸಂವಿಧಾನ ಓದು ಪುಸ್ತಕ ಹಾಗೂ ಮೂಲಭೂತ ರ‍್ತವ್ಯಗಳ ಪುಸ್ತಕ ವಿತರಣೆ ಮಾಡಲಾಯಿತು. ಸಂವಿಧಾನ ಪೀಠಿಕೆ ಬೋಧಿಸಲಾಯಿತು.