ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿಯ ಕೇಂದ್ರ ಕಾರ್ಯಾಲಯದಲ್ಲಿ 2024ರ ನೂತನ ದಿನದರ್ಶಿಕೆಯನ್ನು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಬಿ.ವಿ.ಮಲ್ಲಿಕಾರ್ಜುನಯ್ಯನವರು ಬಿಡುಗಡೆಮಾಡಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿ(ಅತ್ಯುತ್ತಮ ಸಿನಿಮಾ ವಿಮರ್ಶಕ)ಪುರಸ್ಕೃತರಾದ ಶ್ರೀ ಬಾ.ನಾ.ಸುಬ್ರಹ್ಮಣ್ಯ ರವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯ ಸಂಘವು ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಶ್ರೀ ಎನ್.ಆರ್.ನಂಜುಂಡೇಗೌಡರಿಂದ ಸನ್ಮಾನಿಸಲಾಯಿತು.

ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ತಗಡೂರ್ ವಹಿಸಿದ್ದರು.ಮುಖ್ಯಾತಿಥಿಗಳಾಗಿ ಹಿರಿಯ ಚಲನಚಿತ್ರ ಪತ್ರಕರ್ತರಾದ ಶ್ರೀ ಚೇತನ್ ನಾಡಿಗೇರ್ ರವರು ವಹಿಸಿದ್ದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿಯವರಾದ ಶ್ರೀ ಜಿ.ಸಿ.ಲೋಕೇಶ್ ರವರು ಸ್ವಾಗತಿಸಿದರು ಖಜಾಂಚಿ ಶ್ರೀ ವಾಸುದೇವ್ ಹೊಳ್ಳ ವಂದನಾರ್ಪಣೆ ಮಾಡಿದರು.ಈ ಸಮಾರಂಭಕ್ಕೆ ಅನೇಕ ಹಿರಿಯ ಪತ್ರಕರ್ತರು,ಚಲನಚಿತ್ರ ಪ್ರಕರ್ತರು,ಮಹಿಳಾ ಪತ್ರಕರ್ತರು ಮತ್ತು ಬಾ.ನಾ.ಸುಬ್ರಹ್ಮಣ್ಯ ರವರ ಅಭಿಮಾನಿಗಳು ಭಾಗವಹಿಸಿದ್ದರು.