ಬೆಂಗಳೂರು:

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾರಥ್ಯವಹಿಸಿ ಪಕ್ಷ ಅಧಿಕಾರ ಸೂತ್ರ ಹಿಡಿಯಲು ಕಾರಣರಾದ ಪಕ್ಷದ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ವರ್ಷದ ವ್ಯಕ್ತಿ ಪ್ರಶಸ್ತಿಗೆ ಪ್ರೆಸ್‌ಕ್ಲಬ್ ಸದಸ್ಯರು ಆಯ್ಕೆ ಮಾಡಿದ್ದಾರೆ.  ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ ಹಿರಿಯ ರಾಜಕಾರಣಿ ಶಾಸಕ ಹಾಗೂ ಮಾಜಿ ಸಚಿವ ಶ್ರೀ ಶಾಮನೂರು ಶಿವಶಂಕರಪ್ಪ ಅವರಿಗೆ ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ.

ಪತ್ರಿಕಾ ವಿತರಕರಿಗೆ ಅಪಘಾತವಿಮೆ ಯೋಜನೆ ಪ್ರಕಟಿಸಿದ ಕಾರ್ಮಿಕ ಸಚಿವ ಶ್ರೀ ಸಂತೊಷ್ ಲಾಡ್ ಹಾಗೂ ಏಷ್ಯಾ ಬ್ಯಾಸ್ಕೇಟ್ ಬಾಲ್ ಫೆಡರೇಷನ್ ಅಧ್ಯಕ್ಷರಾಗಿ ಆಯ್ಕೆಗೊಂಡ ಮೊದಲ ಕನ್ನಡಿಗ ಡಾ. ಕೆ. ಗೋವಿಂದರಾಜು ಅವರಿಗೆ ಪ್ರೆಸ್‌ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.  

ಮಾಧ್ಯಮದಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವ 29 ಮಂದಿಗೆ ಪ್ರೆಸ್‌ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತಿದೆ.

1.            ಸದಾಶಿವ ಶೆಣೈ. ಕೆ          

2.            ಆರ್. ಶಂಕರ್

3.            ಡಾ. ಕೂಡ್ಲಿ ಗುರುರಾಜ್

4.            ಕೆ.ಕೆ ಮೂರ್ತಿ (ಕಂ.ಕ ಮೂರ್ತಿ)

5.            ನಾಗರಾಜ. ಎಂ (ಪ್ರಜಾವಾಣಿ)  

6.            ರೂಪಾ ಆರ್. ರಾವ್

7.            ಸತೀಶ್‌ಕುಮಾರ್ ಬಿ.ಎಸ್

8.            ರಾಕೇಶ್ ಪ್ರಕಾಶ್ (ಟೈಮ್ಸ್ ಆಫ್ ಇಂಡಿಯಾ)

9.            ರಮೇಶ್ ಬಿ.ಎನ್ (ಅಭಿಮನ್ಯು)

10.          ಕಿರಣ್ ಹೆಚ್.ವಿ

11.          ಚನ್ನಕೃಷ್ಣ ಪಿ.ಕೆ

12.          ವಿಜಯ್‌ಕುಮಾರ್ ಮಲಗಿಹಾಳ್

13.          ಮನೋಜ್‌ಕುಮಾರ್

14.          ಮುತ್ತು. ಪಿ

15.          ಶ್ರೀಕಂಠ ಶರ್ಮ. ಆರ್

16.          ಸಿದ್ದೇಶ್‌ಕುಮಾರ್ ಹೆಚ್.ಪಿ

17.          ಅಫ್ಶಾನ್ ಯಾಸ್ಮಿನ್

18.          ಚಂದ್ರಶೇಖರ್. ಎಂ

19.          ಭಾಸ್ಕರ್ ಕೆ.ಎಸ್

20.          ಸುಭಾಷ್ ಹೂಗಾರ್

21.          ಪ್ರಸನ್ನಕುಮಾರ್ ಲೂಯಿಸ್

22.          ಶಂಕರೇಗೌಡ ಹೆಚ್.ಡಿ

23.          ಜನಾರ್ಧನಾಚಾರಿ ಕೆ.ಎಸ್

24.          ಲಿಂಗರಾಜು ಡಿ. ನೊಣವಿನಕೆರೆ

25.          ಮೋಹನ್‌ರಾವ್ ಸಾವಂತ್. ಜಿ

26.          ಅನಂತರಾಮು ಸಂಕ್ಲಾಪುರ್. ಎಲ್

27.          ಕೌಶಿಕ್. ಆರ್ (ಸ್ಪೋರ್ಟ್ಸ್)

28.          ಲಕ್ಷ್ಮಿ ಸಾಗರ ಸ್ವಾಮಿಗೌಡ

29.          ಚಿದಾನಂದ ಪಟೇಲ್

 ಡಿಸೆಂಬರ್ 31 ರಂದು ಬೆಳಗ್ಗೆ 11:30ಕ್ಕೆ ಪ್ರೆಸ್‌ಕ್ಲಬ್ ಆವರಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.  ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.  ವಸತಿ ಸಚಿವ ಜಮೀರ್ ಅಹಮದ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಆರ್.ಶ್ರೀಧರ್ ಮತ್ತು ಪ್ರಧಾನಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here