ದಾವಣಗೆರೆ:ಕೆಲ ರಾಜಕಾರಣಿಗಳಿಗೇ ಸಿದ್ದಾಂತ, ಬದ್ದತೆ ಪ್ರಾಮಾಣಿಕತೆ ಇರುವುದಿಲ್ಲ ಕೇವಲ ಬಿಟ್ಟಿ ಪ್ರಚಾರಕ್ಕಾಗಿ ಶೋಷಿತರನ್ನು ದಾಳವಾಗಿ ಉಪಯೋಗಿಸಿಕೊಳ್ಳುವ ಕೆಟ್ಟ ಸಂಸ್ಕೃತಿ ಬಿಂಬಿಸುವ ವಾತಾವರಣ ಸೃಷ್ಟಿ ಯಾಗಿರುವ ಹಿನ್ನೆಲೆಯಲ್ಲಿ ಜನರಿಗೆ ಪ್ರಬುದ್ಧತೆ ಪಕ್ವತೆ ಅನುಭವದ ಹಿರಿತನ ಗೌರವ ಮಾನ್ಯತೆ ಸಿಗುವಂತಾಗಬೇಕು ಎಂದು ದಾರವಾಡ ಮನಸೂರ ಶ್ರಿ ರೇವಣಸಿದ್ಧೇಶ್ವರ ಮಠದ ಶ್ರೀ ಡಾ ಬಸವರಾಜ ದೇವರು ಸ್ವಾಮೀಜಿ ಹೇಳಿದರು. ಈ ದೇಶದ ಮೂಲೆ ಮೂಲೆಗಳಲ್ಲಿ ಪ್ರತಿಷ್ಠಿತ ಇನ್ ಸೈಟ್ಸ್ ಚಿರಪರಿಚಿತ ಎಂದು ಶ್ಲಾಘಿಸಿದರು.
ಆಟೋ ಟ್ಯಾಕ್ಸಿ ಲಾರಿ ಚಾಲಕರಿಗೆ ಸಮವಸ್ತ್ರ ವಿತರಣೆ ಗೌರವ ಸನ್ಮಾನ ಮಾಡಿ ಅವರ ಮಕ್ಕಳಿಗೆ ಶೈಕ್ಷಣಿಕ ಪ್ರಗತಿ ಬಗ್ಗೆ ಮಾಹಿತಿ ಪಡೆದು ಪ್ರಭುತ್ವದ ಅಡಿಯಲ್ಲಿ ಅವರ ಪ್ರತಿಭಾವಂತ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಧರ್ಮ , ಧರ್ಮಗಳ ನಡುವಿನ ಒಡಕು ಅಧ್ಬುತ ಕುತೂಹಲ, ಯಾವುದೇ ದಾನ ಮಾಡಿದ ಕಾರ್ಯ ಸಾಧನೆ, ಪ್ರಚಾರ ಹಮ್ಮು ಬಿಮ್ಮು ಇಲ್ಲದ ಸಾದಾ ಸೀಧಾ ವ್ಯಕ್ತಿ ವಿನಯ್ ಕುಮಾರ್ ರವರದು ಎಂದು ಶ್ಲಾಘಿಸಿದರು.

ಕಡು ಬಡವರ ಕೃಷಿ ಕುಟುಂಬದ ಹಿನ್ನೆಲೆ ಇರುವ ವಿನಯ್ ಕುಮಾರ್ ಕಷ್ಟ ಗಳ ಅನುಭವಿಸಿ ಓದಿ ಈ ಮಟ್ಟಕ್ಕೆ ಬಂದವರು ಇವತ್ತು ದಲಿತ ಹಿಂದುಳಿದ ಅಲ್ಪಸಂಖ್ಯಾತರ ಶೋಷಿತ ಸಮುದಾಯಗಳ ಪರವಾಗಿ ದೆಹಲಿ ಸಂಸತ್ ಭವನದಲ್ಲಿ ಧ್ವನಿ ಎತ್ತುವ
ಅವರ ಪರವಾಗಿ ಮಾತನಾಡುವ, ಹೋರಾಟ ಮಾಡುವ
ಎಲ್ಲ ಅರ್ಹತೆ ಇದೆ ಎಂದ ಅವರ ಈ ಭಾರಿ ಸಂಸತ್ ನಲ್ಲಿ ಕಂಬಳಿ ಬೀಸುವುದು ಹಗಲಿನ ಸೂರ್ಯ ನಷ್ಟೆ ಸತ್ಯ ಎಂದು ಘಂಟಾಘೋಷವಾಗಿ ಹೇಳಿದ ಬಸವಾಜ ದೇವರು ಸಾಮಾಜಿಕ ನ್ಯಾಯ ಹರಿಕಾರ ಅನ್ನ ನೀಡುವ ಮೂಲಕ ಲಕ್ಷಾಂತರ ಬಡವರಿಗೆ ಅನ್ನರಾಮಯ್ಯ .. ಆದಂತೆ ಸಿದ್ದರಾಮಯ್ಯ ರವರ ಹಾದಿಯಲ್ಲಿ ಸಾಗುತ್ತಿರುವ ವಿನಯ್ ನಾಡೀನ ಹೆಮ್ಮೆಯ ಮತ್ತೋರ್ವ ಸಿದ್ದರಾಮಯ್ಯ ಆಗಲಿದ್ದಾರೆ ಎಂದು ಬಸವರಾಜ್ ದೇವರರು ಸ್ವಾಮೀಜಿ ಹೇಳಿದರು
ಅವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಧ್ಭುತ ಆಶಿರ್ವಚನ ನಂತರ
ಜಡೆಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿ, ಶ್ರೀ ವಿದ್ಯಾರಣ್ಯ ಪರಮಹಂಸ ಮುರುಳಿದರ ಸ್ವಾಮಿ ಯಲವಟ್ಟಿ ಬಸವಾಫನಂದ ಸ್ವಾಮಿ. ಇನ್ ಸೈಟ್ಸ್ ಐಎಎಸ್ ಸಂಸ್ಥಾಪಕ ದಾವಣಗೆರೆ ಲೋಕಸಭಾ ಚುನಾವಣೆ ಟಿಕೆಟ್ ಪ್ರಬಲ ಆಕಾಂಕ್ಷಿ ವಿನಯ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಟೋ ಟ್ಯಾಕ್ಸಿ ಗೂಡ್ಸ್ ಲಾರಿ ಚಾಲಕರಿಗೆ ಸಮವಸ್ತ್ರ ಶಾಲು ಹೊದಿಸಿ ಗೌರವಿಸಿ,ಶೇ 70 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಚಲನಚಿತ್ರ ಕಿರುತೆರೆ ಗಾಯಕ ಕಾಸಿಂ ಅಲಿ, ಯುವರಾಜ್ ಸೌಮ್ಯಾ ನಾಡು ನುಡಿ ಸಂಸ್ಕೃತಿ ಬಿಂಬಿಸುವ ಕಲಾಪ್ರೌಡಿಮೆ
ಸ್ಪೂರ್ತಿ ಅವರಿಂದ ಗೀತೆಗಳ ಗಾಯನ ಸಂಗೀತ ನಡೆದವು

LEAVE A REPLY

Please enter your comment!
Please enter your name here