ಮೂಡಲಗಿ:ಅ,07-ತಾಲೂಕಿನ ಯಾದವಾಡದಲ್ಲಿ ಮೂಡಲಗಿ ಪ್ರಧಾನ ಕಚೇರಿಯ ಶಾಖೆಯಾದ ಜ್ಯೋತಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ದಶಮಾನ ಉತ್ಸವ(10) ಸಮಾರಂಭ ಜರುಗಿತು.
ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಬಹಳ ಮಹತ್ವವಾಗಿದೆ.ಕರ್ನಾಟಕ ರಾಜ್ಯದ ಸಹಕಾರಿ ಸಂಘಗಳ ಬೆಳವಣಿಗೆಯು ದೇಶಕ್ಕೆ ಮಾದರಿಯಾಗಿವೆ.
ಸಮಾರಂಭದ ಅವರು ಜನರು ಆರ್ಥಿಕ ಸದೃಢತೆಯಲ್ಲಿ ಸಹಕಾರಿ ಸಂಘ,ಸಂಸ್ಥೆಗಳು ಬಹಳಷ್ಟು ಉಪಯುಕ್ತವಾಗಿವೆ ಎಂದರು.ಸಮಾಜದಲ್ಲಿ ಮನುಷ್ಯನಿಗೆ ಅನ್ನ,ಆರೋಗ್ಯ, ಶಿಕ್ಷಣ,ಆಶ್ರಯದೊಂದಿಗೆ ಹಣದ ಅವಶ್ಯಕತೆ ಇದ್ದು ಇವು ಇದ್ದರೆ ಆತನ ಜೀವನ ಯಶಸ್ವಿಯಾಗುತ್ತದೆ.ಗ್ರಾಮೀಣ ಭಾಗದ ಅದರಲ್ಲೂ ರೈತಾಪಿ ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಸಹಕಾರ ಚಳವಳಿಯು ಬಹಳಷ್ಟು ಉಪಯುಕ್ತವಾಗಿದೆ ಎಂದು ಅಭಿಪ್ರಾಯ ಪಟ್ಟರು. ಮೂಡಲಗಿಯಲ್ಲಿ ಜ್ಯೋತಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಕೇವಲ18 ವರ್ಷಗಳಲ್ಲಿ ನಾಲ್ಕು(4) ಶಾಖೆಗಳೊಂದಿಗೆ 99.84 ಕೋಟಿ ರೂಪಾಯಿ ವ್ಯವಹಾರದೊಂದಿಗೆ 41.95 ಕೋಟಿ ರೂಪಾಯಿ ದುಡಿವಯುವ ಬಂಡವಾಳವನ್ನು ಹೊಂದಿರುವುದು ಶ್ಲಾಘನೀಯವಾಗಿದೆ.ಸೊಸಾಯಿಟಿಯಲ್ಲಿ ಒಗ್ಗಟ್ಟು ಇಚ್ಛಾಶಕ್ತಿ ಮುಖ್ಯ ಕಾರಣವಾಗಿದೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ ಹೇಳಿದರು.ಸಹಕಾರ ಚಳವಳಿಯ ಕುರಿತು ಸಾಹಿತಿ ಬಾಲಶೇಖರ ಬಂದಿ ಉಪನ್ಯಾಸ ನೀಡಿದರು.
ಮೂಡಲಗಿಯಲ್ಲಿ 2005 ರಲ್ಲಿ ಸ್ಥಾಪನೆಯಾಗಿ ನಂತರ ದಿನಗಳಲ್ಲಿ ನಾಲ್ಕು ಶಾಖೆ ಹೊಂದಿದೆ.ಈ ವರ್ಷ ಮೂಡಲಗಿ ಜ್ಯೋತಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಪ್ರಸಕ್ತ ಸಾಲಿನ 83 ಲಕ್ಷ ಲಾಭಗಳಿಸಿದೆ ಮತ್ತು ಯಾದವಾಡ ಶಾಖೆಯು 60 ಲಕ್ಷ ಲಾಭ ಗಳಿಸಿದೆ.ಈ ಪ್ರಗತಿಯ ಮುಖ್ಯ ಕಾರಣ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸರಿಯಾದ ಸಮಯಕ್ಕೆ ಸಾಲ ಮರು ಕಟ್ಟಿದ ಸದಸ್ಯರುಗಳಿಗೆ ಸಲ್ಲುತ್ತದೆ.ಇನ್ಮುಂದು ಇದೆ ರೀತಿಯಾಗಿ ಎಲ್ಲರ ಸಹಕಾರ ಇರಲಿ ಸದಾ ಜ್ಯೋತಿಯು ಪ್ರಕಾಶ ಮಾನವಾಗಿ ಬೆಳಗಲಿ ಸೊಸಾಯಿಟಿಯು ಎಂದು ಸೊಸಾಯಿಟಿಯ ಪ್ರಧಾನ ಕಚೇರಿಯ ಅಧ್ಯಕ್ಷರಾದ ಮಲ್ಲಪ ಮಧುಗುಣಕಿ ಸಂತಸ ವ್ಯಕ್ತಪಡಿಸಿದರು. ಶರಣ ಶ್ರೀಚನ್ನಬಸಪ್ಪಮುತ್ತಾ ಹುಬ್ಬಳ್ಳಿ, ಸೊಸಾಯಿಟಿಯ ಉಪಾಧ್ಯಕ್ಷರಾದ ಶ್ರೀಶೈಲ ಗಾಣಿಗೇರ, ಯಾದವಾಡ ಶಾಖೆಯ ಅಧ್ಯಕ್ಷ ಅಶೋಕ ರೂಡಗಿ,ಕಲ್ಮೇಶ ಗಾಣಿಗ,ಶಿವಪ್ಪ ನೇಮಗೌಡರ,ಕಿರಣ ಶೆರೆಗಾರ,ಶಿವಲಿಂಗ ನಾವಲಗಿ,ಮಹಾಬಲೇಶ್ವರ ಕತ್ತಿ,ಮಲ್ಲಪ್ಪ ಚಿಕ್ಕನ್ನವರ,ರಾಜಶೇಖರ ಕಲ್ಯಾಣಿ,ಎಸ್.ವಾಯ್.ಹೊಸಟ್ಟಿ,ಬಸವರಾಜ ಕಲ್ಯಾಣಿ,ಪ್ರಲ್ಹಾದ ದೇಶಪಾಂಡೆ, ಆಡಳಿತ ಮಂಡಳಿಯ ಸದಸ್ಯರು,ಹಾಗೂ ಯಾದವಾಡ ಶಾಖಾ ಸಲಹಾ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿಯವರು ಉಪಯುಕ್ತ.