ಶ್ರೀ ತುಳಸಿ ಗಿರೀಶ ಪೌಂಡೇಶನ್, ವಿಜಯಪುರರವರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಈ ದೇಶದ ಶಿಕ್ಷಣ ತಜ್ಞರು ಹಾಗೂ ಆದರ್ಶ ಶಿಕ್ಷಕರಾದ ಸರ್ವಪಲ್ಲಿ ರಾಧಾಕೃಷ್ಣನ್ ರವರ ಹೆಸರಿನಿಂದ ಪುರುಷ ಶಿಕ್ಷಕರಿಗೆ ಹಾಗೂ ನಮ್ಮ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಯವರ ಹೆಸರಿನಿಂದ ಮಹಿಳಾ ಶಿಕ್ಷಕಿಯರಿಗೆ ಪ್ರತಿಷ್ಠಿತ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಜಿಲ್ಲೆಯ ಸರ್ಕಾರಿ/ಅನುದಾನಿತ/ಅನುದಾನ ರಹಿತ ಪ್ರಾರ್ಥಮಿಕ,ಪ್ರೌಡ, ಪದವಿ ಪೂರ್ವ ಹಾಗೂ ಪದವಿ, ಶಾಲಾ ಕಾಲೇಜುಗಳ ಶಿಕ್ಷಕ/ಶಿಕ್ಷಕಿ/ಉಪನ್ಯಾಸಕರು ಹಾಗೂ (ಅಥಿತಿ ಉಪನ್ಯಾಸಕರುಗಳಿಗೂ ಸಹಿತ ಅನ್ವಹಿಸುತ್ತದೆ) ಈ ಪ್ರತಿಷ್ಠಿತ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಕಾರಣ ಈ ಪ್ರಶಸ್ತಿಗೆ ಅರ್ಹರಿರುವ ಶಿಕ್ಷಕರು/ಉಪನ್ಯಾಸಕರುಗಳು ಹಾಗೂ ಅಥಿತಿ ಉಪನ್ಯಾಸಕರುಗಳು ಆಯಾ ಶಾಲಾ ಕಾಲೇಜುಗಳ ಮುಖ್ಯ ಗುರುಗಳ/ಪ್ರಾಂಶುಪಾಲರ ಶಿಪಾರಸ್ಸು ಪತ್ರ(ಪ್ರತಿಯೊಂದು ಶಾಲಾ ಕಾಲೇಜಿಗೆ ತಲಾ ಒಬ್ಬ ಶಿಕ್ಷಕರು ಹಾಗೂ ಒಬ್ಬ ಶಿಕ್ಷಕಿಯರಂತೆ ಶಿಪಾರಸ್ಸು ಮಾತ್ರ)
ದಿನಾಂಕ 08/09/23ರ ಸಂಜೆ 8-00 ಘಂಟೆ ಒಳಗಾಗಿ ವಾಟ್ಸ್ ಆ್ಯಪ್, ಇಮೇಲ್, ಅಂಚೆ ಮೂಲಕ ಅಥವಾ ವ್ಯಕ್ತಿಗತವಾಗಿ ನಮಗೆ ತಲುಪಿಸಬೇಕು
ವಿಳಾಸ: ಡಾ||ಬಾಬು ರಾಜೇಂದ್ರ ನಾಯಿಕ
ಶ್ರೀ ತುಳಸಿ ಗಿರೀಶ ಫೌಂಡೇಶನ್, ಗುಡ್ಡೋಡಗಿ ಫಾರ್ಮಾ ಎದುರಿಗೆ,ಗೊಡಬೊಳೆ ಮಾಳ,ವಿಜಯಪುರ,
ವಾಟ್ಸ್ ಆ್ಯಪ್ ನಂಬರ್ ಡಾ||ಬಾಬು ರಾಜೇಂದ್ರ ನಾಯಿಕ 9448102221
ಸುರೇಶ ಬಿಜಾಪುರ 9886076555
ಸಂತೋಷ ನಾಯಿಕ 9731951980.. ಈ ನಂಬರಗಳಿಗೆ ವಾಟ್ಸ್ ಆ್ಯಪ್ ಮಾಡುವದು ಅಥವಾ ಫೋನ್ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಕೋರಿದೆ
ಇಮೇಲ್ ಐಡಿ,
sweetcare77@gmail.com ಅಥವಾ
sureshbjp123@gmail.com
ಈ ಕಾರ್ಯಕ್ರಮವು ನಮ್ಮ ಜಿಲ್ಲೆಯ ಹಲವು ಗಣ್ಯರ ನೇತೃತ್ವದಲ್ಲಿ ದಿನಾಂಕ 10/09/2023ರಂದು ವಿಜಯಪುರ ನಗರದಲ್ಲಿ ಜರುಗಲಿದ್ದು ತಾವು ತಪ್ಪದೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶಸ್ತಿಗೆ ಭಾಜನರಾಗಬೇಕೆಂದು
ಡಾ||ಬಾಬು ರಾಜೇಂದ್ರ
ಅಧ್ಯಕ್ಷರು,ಶ್ರೀ ತುಳಸಿಗಿರೀಶ ಫೌಂಡೇಶನ್,ವಿಜಯಪುರ
ತಮ್ಮಲ್ಲಿ ವಿನಂತಿಸಿಕೊಂಡಿದ್ದಾರೆ.