ಮೂಡಲಗಿ: ಜು,19-ತಾಲೂಕಿನ ಕುಲಗೋಡ ಗ್ರಾಮದಲ್ಲಿ ಹಳೆಯ ಬಂಗಾರ ಹಾಗೂ ಬೆಳ್ಳಿ ಹೊಸದರಂತೆ/ಹೊಳಪು ಬರುವಂತೆ ಮಾಡಿಕೊಡುತ್ತೇನೆಂದು ಹೇಳಿ ಮೋಸ ಮಾಡಿ ಕಲ್ಲು ಕೊಟ್ಟು ಪರಾರಿಯಾದ ಘಟನೆ ನಡೆದಿರುವುದು.
ಕುಲಗೋಡ ಗ್ರಾಮದ ಜನತಾ ಪ್ಲಾಟಿನಿ ನಿವಾಸಿ,ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕ ಲಕ್ಕಪ್ಪ ಪೂಜೇರಿ ಎಂಬುವವರ ಮನೆಯಲ್ಲಿ ನಡೆದಿದೆ.
ನಿನ್ನೆ ಮುಂಜಾನೆ ಸವಿತಾ ಲಕ್ಕಪ್ಪ ಪೂಜೇರಿಯವರ ಮನೆಗೆ 12 ಗಂಟೆ ಸುಮಾರಿಗೆ ಬೈಕ್ ಮೇಲೆ ಬಂದ ವ್ಯಕ್ತಿಯೊಬ್ಬ ಹಳೆಯ ತಾಮ್ರ,ಬೆಳ್ಳಿ ಮತ್ತು ಬಂಗಾರ ಆಭರಣ ಹೊಳೆಯುವ/ಹೊಸದರಂತೆ ಮಾಡಿಕೊಡುತ್ತೇನೆ ಎಂದು ಹೇಳಿದ್ದಾನೆ.ಸವಿತಾ ಲ.ಪೂಜೇರಿ ಅವರು ಮೊದಲಿಗೆ ತಾಮ್ರದ ಹಳೆಯ ಗ್ಲಾಸ್ ಕೊಟ್ಟು ತೊಳೆದು ತೋರಿಸುವಂತೆ ಕೇಳಿದ್ದಾಳೆ.ಆ ಗ್ಲಾಸ್ ಅನ್ನು ಹೊಳೆಯುವಹಾಗೆ ಮಾಡಿ ಕೊಟ್ಟು ಐನಾತಿ ಖದೀಮ.ಅವನನ್ನು ನಂಬಿ ಕೊರಳಲಿದ್ದ 1( ಒಂದು)ತೊಲೆಯ ಮಂಗಳ ಸೂತ್ರ,3 (ಮೂರು)ತೊಲೆ ಅವಲಕ್ಕಿ ಸರ ಕೊಟ್ಟಿದ್ದಾಳೆ.ಖದೀಮ ತಾನೇ ತಂದಿದ್ದ ಗ್ಲಾಸನಲ್ಲಿ ಕೆಂಪು ದ್ರಾವಣದಲ್ಲಿ ಆಭರಣ ತೊಳೆದು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿಕೊಟ್ಟು ಹೋಗಿದ್ದಾನೆ. 20 ನಿಮಿಷದ ನಂತರ ಪ್ಲಾಸ್ಟಿಕ್ ತೆಗೆದು ನೋಡಿದಾಗ ಪ್ಲಾಸ್ಟಿಕನಲ್ಲಿ ಕಲ್ಲು ಇರುವುದು ಗೊತ್ತಾಗಿ ಮಹಿಳೆ 2.40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾಳೆ.ಕುಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.