ದಾವಣಗೆರೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಮಾನಸಧಾರ-ಸಮುದಾಯ ಮಾನಸಿಕ ಆರೋಗ್ಯ ಕೇಂದ್ರದ ೨೦೨೩ನೇ ಸಾಲಿನ ತೈಮಾಸಿಕ ಸಭೆಯ ಮೇಲುಸ್ತುವಾರಿ ಸಮಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗರಾಜ್ ರವರ ಅಧ್ಯಕ್ಷತೆಯಲ್ಲಿ ಮಾನಸಧಾರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ|| ಮುರುಳಿಧರ ಪಿ.ಡಿ. ರವರು ಮಾತನಾಡಿ ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮತ್ತು ಮನೋವೈದ್ಯಕೀಯ ವಿಭಾಗ, ಸೇರಿದಂತೆ ವಿವಿಧ ಮನೋವೈದ್ಯಕೀಯ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುಣಮುಖರಾದ ಮನೋರೋಗಿಗಳ ಪುನರ್ ವಸತಿಗಾಗಿ ಈ ಮಾನಸಧಾರ ಹಗಲು ಆರೈಕೆ ಕೇಂದ್ರವು ಪ್ರಾರಂಭವಾಗಿ ೧೧ ತಿಂಗಳು ಆಗಿದೆ. ಪ್ರತಿ ೩ ತಿಂಗಳಿಗೊಮ್ಮೆ ಒಂದು ಬ್ಯಾಚ್‌ನಂತೆ ಹೊಸ ಹೊಸ ತಂಡದವರಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ, ಇಲ್ಲಿಗೆ ೧೫೭ ಜನರು ಈ ಕೇಂದ್ರದಲ್ಲಿ ಯೋಗ, ಧ್ಯಾನ, ದೈಹಿಕ ವ್ಯಾಯಾಮ, ಮನರಂಜನಾತ್ಮಕ ಚಟುವಟಿಕೆಗಳನ್ನು ಸೇರಿದಂತೆ ಕಂಪ್ಯೂಟರ್, ಅಗರ್ ಬತ್ತಿ, ಫ್ಲವರ್ ಮೇಕಿಂಗ್, ಹೊಲಿಗೆ ತರಬೇತಿ, ಸೇರಿದಂತೆ ಇನ್ನಿತರ ವೃತ್ತಿಪರ ತರಬೇತಿ ಪಡೆದು ಮುಖ್ಯವಾಹಿನಿಗೆ ಬಂದಿದ್ದಾರೆ ಎಂದರು. ಈ ಕೇಂದ್ರದಲ್ಲಿ ವೃತ್ತಿಪರ ತರಬೇತಿ ನೀಡಲು ಮತ್ತು ನಿವಾಸಿಗಳನ್ನು ಅನುಸರಿಸಲು ಮನೋವೈದ್ಯಕೀಯ ಸೋಶಿಯಲ್ ವರ್ಕರ್, ವೃತ್ತಿಪರ ತರಬೇತುದಾರರು ಮತ್ತು ಸ್ಟಾಫ್ ನರ್ಸ್ ಮತ್ತು ಆಯಾ, ಕಾವಲುಗಾರರು ಇದ್ದು ನಿವಾಸಿಗಳಿಗೆ ಆರೈಕೆ ಮತ್ತು ತರಬೇತಿ ನೀಡುತ್ತಿದ್ದಾರೆ. ಎಂದರು, ಸಂಸ್ಥೆಯೂ ಕೂಡ ಈಗಾಗಲೇ ಸಮುದಯದಲ್ಲಿ ಜಾಗೃತಿ ಮೂಡಿಸುತ್ತಿದ್ದು. ಇನ್ನು ಹೆಚ್ಚಿನದಾಗಿ ಸಮುದಾಯದಲ್ಲಿ ಸಂಘ ಸಂಸ್ಥೆಯ ಸಹಯೋಗದೊಂದಿಗೆ ಅರಿವನ್ನು ಮೂಡಿಸುವುದರ ಮೂಲಕ ಗುಣಮುಖರಾದ ಮನೋರೋಗಿಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ ಮುಖ್ಯವಾಹಿನಿಗೆ ತರಬೇಕೆಂದು ಸೂಚಿಸಿದರು. ನಂತರ ಮಾತನಾಡಿದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ದಾವಣಗೆರೆ ಜಿಲ್ಲೆಯಲ್ಲಿ ಗುಣಮುಖರಾದ ಮನೋರೋಗಿಗಳಿಗೆÀ ಮಾನಸಧಾರ ಸಂಸ್ಥೆಯೂ ಉತ್ತಮವಾದ ತರಬೇತಿಯನ್ನು ನೀಡುತ್ತಿದ್ದು. ಈ ಕೇಂದ್ರದಲ್ಲಿರುವ ತರಬೇತಿಯನ್ನು ಎಲ್ಲಾ ಗುಣಮುಖರಾದ ಮನೋರೋಗಿಗಳು ಸದುಪಯೋಗವನ್ನು ಪಡಿಸಿಕೊಳ್ಳಬೇಕು ಮತ್ತು ಅವರ ಮನೆಯವರು ಕೂಡ ಇಲ್ಲಿಗೆ ಕರೆ ತಂದು ಸೇರಿಸಿ ತರಬೇತಿಯಲ್ಲಿ ಪಾಲ್ಗೊಳ್ಳಿಸಿದಾಗ ಮಾತ್ರ ಈ ಯೋಜನೆಯೂ ಕಾರ್ಯವೈಖರಿಗೆ ಬರುವುದು. ಮತ್ತು ಇಲ್ಲಿ ತರಬೇತಿ ಪಡೆಯುವವರಲ್ಲಿ ಆತ್ಮಸ್ಥೆöÊರ್ಯ ವೃದ್ದಿಯಾಗುವುದು. ಮತ್ತು ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಪಲ್ಗೊಳ್ಳುವಿಕೆಗೆ ಸಹಕಾರಿ ಎಂದರು. ಈ ಸಂಸ್ಥೆಯಲ್ಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೂ ಕೂಡ ಮನೆಭೇಟಿ ನೀಡಿ ಯೋಜನೆಯ ಬಗ್ಗೆ ತಿಳುಹಿಸಿ ನಮ್ಮ ಇಲಾಖೆಯೂ ಕೂಡ ಕೈ ಜೋಡಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ೩ನೇ ತ್ರೈಮಾಸಿಕದಲ್ಲಿ ತರಬೇತಿಯನ್ನು ಪಡೆದ ನಿವಾಸಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಜಿಲ್ಲಾಸ್ಪತ್ರೆ ಜಿಲ್ಲಾ ಮನೋವೈದ್ಯರಾದ ಡಾ|| ಮರುಳಸಿದ್ದಪ್ಪ, ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ(ರಿ) ಸಂಸ್ಥೆಯ ಅಧ್ಯಕ್ಷರಾದ ಎನ್.ಮಲ್ಲೇಶ್, ನಿವಾಸಿಗಳ ಪೋಷಕರು, ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ ಡಾ|| ಸಂದೀಪ್ ಹಾಗೂ ಸಂಸ್ಥೆಯ ಕಾರ್ಯದರ್ಶಿ ಜಯಲಕ್ಷಿö್ಮ, ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎನ್.ಮಲ್ಲೇಶ್‌ರವರು ಸ್ವಾಗತಿಸಿದರು ಮತ್ತು ಸ್ಟಾಫ್ ನರ್ಸ್ ಲತಾ ರವರು ವಂದಿಸಿದರು