ಬೆಂಗಳೂರು:ಗಾಂಧಿ ಜಯಂತಿಯ ದಿನ ಬೀದರ್ ನಿಂದ ಹೊರಟ ಯುವಪರಿವರ್ತನ ಯಾತ್ರೆ ಇಂದು ಬೆಂಗಳೂರು ತಲುಪಿದೆ.ಜನಸಾಮಾನ್ಯರ ಬೇಡಿಕೆಗಳ ಹೊತ್ತು ತಂದು ಸರ್ಕಾರದ ಗಮನ ಸೆಳೆಯಲು ಕೈಗೊಂಡ ಈ ಯಾತ್ರೆಯು ಬೀದರ್,ಕಲಬುರಗಿ,ಯಾದಗಿರಿ,ವಿಜಯಪುರ,ಬಾಗಲಕೋಟೆ,ಧಾರವಾಡ,ಹಾವೇರಿ,ದಾವಣಗೆರೆ,ಚಿತ್ರದುರ್ಗ,ತುಮಕೂರು ಜಿಲ್ಲೆಗಳಲ್ಲಿ ಸಂಚರಿಸಿ ಜನತಾಗೃತಿ ಗೊಳಿಸುತ್ತಾ ಇಂದು ಬೆಂಗಳೂರು ತಲುಪಿದೆ.ಜನಸಾಮಾನ್ಯರ ಬೇಡಿಕೆಗಳಹೊತ್ತುತಂದ ಯುವಪರಿವರ್ತನ ಯಾತ್ರೆಯ ಪ್ರಮುಖರು ಸರ್ಕಾರಕ್ಕೆ ಮನವಿ ಅರ್ಪಿಸಲಿದ್ದಾರೆ.
ಜನಸಾಮಾನ್ಯರ ಹಕ್ಕೊತ್ತಾಯಗಳು:1. “ಮೂಲಭೂತ ಸೌಕರ್ಯ ಪ್ರತಿಯೊಂದು ಶಾಲೆಗೆ – ಉತ್ತಮ ಜೀವನ ಪ್ರತಿಯೊಂದು ವಿದ್ಯಾರ್ಥಿಗೆ”, ಸರ್ಕಾರಿ ಶಾಲೆಗಳಲ್ಲಿ ಪೂರ್ಣ ಪ್ರಮಾಣದ ವಿಷಯವಾರು ಶಿಕ್ಷಕರನ್ನು ನೇಮಕ ಮಾಡುವುದು, ಕುಡಿಯುವ ನೀರು-ಶೌಚಾಲಯ-ಲೈಬ್ರರಿ ವಿದ್ಯಾರ್ಥಿಯ ಮೂಲಭೂತ ಹಕ್ಕನ್ನಾಗಿಸುವುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪಿ.ಯು.ಸಿ ಹಂತದಲ್ಲಿಯೇ ಪಠ್ಯ ಕ್ರಮದ ಜೊತೆಗೆ ಮಾದರಿ ಪರೀಕ್ಷೆಗಳು, ಮಾರ್ಗದರ್ಶನ ಶಿಬಿರಗಳು ನಡೆಸಿ, ಸ್ಪರ್ಧಾತ್ಮಕ ಹಾಗೂ ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಸಿ, ತಾಂತ್ರಿಕ ಹಾಗೂ ಭಾಷಾ ತರಬೇತಿ ನೀಡಲು ಹಳ್ಳಿಯ ಭಾಗದಲ್ಲಿ ವಿಶೇಷ ಕೌಶಾಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವುದು.

1.(ಅ) ಶಿಕ್ಷಣ ನಮ್ಮ ಹಕ್ಕು-ವ್ಯವಹಾರವಲ್ಲ. ಸರಕಾರಿ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಅಧ್ಯಾಪಕರು ಹಾಗೂ ಆಧುನಿಕ ಪ್ರಯೋಗಾಲಯ ಸ್ಥಾಪಿಸಿ ಹಳ್ಳಿಯಿಂದ-ಹಾರ್ವಡ್ರ ಮಟ್ಟದ ಅವಕಾಶ ಲಭಿಸಬೇಕು. ಖಾಸಗಿ ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣ ಮಾಡಿ ಸರಕಾರಿ ವಿಶ್ವವಿದ್ಯಾಲಗಳನ್ನು ಉನ್ನತಿಕರಿಸಬೇಕು.

  1. ಯುವಕರ ಕನಸು ಸಮಯಕ್ಕೆ ಸರಿಯಾದ ಉದ್ಯೋಗ!, KPSC ಮತ್ತು ಇಲಾಖಾ ನೇಮಕಾತಿ ಪ್ರಾಧಿಕಾರಗಳು ಸಕಾಲಿಕ ನೇಮಕಾತಿ ಕ್ಯಾಲೆಂಡರ್ ಪ್ರಕಟಿಸಿ, ಪ್ರತಿ ಹಂತಗಳ ನಿಗದಿತ ವೇಳಾಪಟ್ಟಿಯನ್ನು ಮುಂದೂಡದೆ, ಡಿಜಿಟಲ್ ಪಾರದರ್ಶಕತೆ ಅಳವಡಿಸಿಕೊಂಡು ಭ್ರಷ್ಟಾಚಾರ ಮುಕ್ತ ನೇಮಕಾತಿ ಕೈಗೊಳ್ಳಬೇಕು. UPSC ಮಾದರಿಯಲ್ಲಿ KPSC ನ್ನು ಸುಧಾರಿಸಬೇಕು.
  2. “ಕೈಗಾರಿಕೆ ನಮ್ಮಲ್ಲಿದ್ದರೆ – ಕೆಲಸವೂ ನಮ್ಮ ಕೈಯಲ್ಲಿ” ಖಾಸಗಿ ಕೈಗಾರಿಕೆಗಳಲ್ಲಿ ಉದ್ಯೋಗ ಮೀಸಲಾತಿ ಮತ್ತು ಎಲ್ಲಾ ಹುದ್ದೆಗಳಲ್ಲಿ ಸ್ಥಳೀಯವರಿಗೆ ಪ್ರಾಮುಖ್ಯತೆ ಕಲ್ಪಿಸುವುದು.
  3. “ಸರ್ಕಾರಿ ಹುದ್ದೆ ಖಾಲಿ ಬೇಡ – ಯುವಕರಿಗೆ ಉದ್ಯೋಗ ಬೇಕು!” ಖಾಲಿ ಇರುವ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖಾವಾರು ವಾರ್ಷಿಕ ನೇಮಕಾತಿ ಕ್ಯಾಲೆಂಡರ್ ಪ್ರಕಟಿಸಿ. ನಿಗದಿತ ವೇಳೆಯಲ್ಲಿ ಭರ್ತಿ ಮಾಡಬೇಕು.
  4. “ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ, ತಾಲ್ಲೂಕಿಗೆ ಸುಸಜ್ಜಿತ ಆಸ್ಪತ್ರೆ ಆರೋಗ್ಯದಲ್ಲಿ ಸಮಾನತೆ.” ಸರ್ಕಾರಿ ಆಸ್ಪತ್ರೆಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಲ್ಟಿ ಸ್ಪಷಾಲಿಟಿ ಸೌಲಭ್ಯವುಳ್ಳ ಆಸ್ಪತ್ರೆಗಳ ನಿರ್ಮಾಣ. ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳ ನಿರ್ಮಾಣ ಮಾಡಿ ಉಚಿತವಾದ ಆರೋಗ್ಯ ಸೌಲಭ್ಯವನ್ನು ಒದಗಿಸಬೇಕು.
  5. “ರೈತರಿಗೆ ಶಕ್ತಿ ಉಚಿತ-ರಾಜ್ಯಕ್ಕೆ ಪ್ರಗತಿ ನಿಶ್ಚಿತ!” ರೈತರ ಪಂಪ್‌ಸೆಟ್‌ ಗಳಿಗೆ ವಿದ್ಯುತ್ ಸಂಪರ್ಕವನ್ನು ಉಚಿತವಾಗಿ ನೀಡುವುದು. KPTCL ಮತ್ತು ESCOMS ಖಾಸಗಿಕರಣ ಹಂತಗಳನ್ನು ನಿಲ್ಲಿಸುವುದು. ಸರಿಯಾದ ಬೆಲೆ ಮತ್ತು ಕಡಿಮೆ ಮಾಸಿಕ ನಿರ್ವಹಣಾ ವೆಚ್ಚಗಳೊಂದಿಗೆ, ಸ್ಮಾರ್ಟ್ ಮೀಟ‌ರ್ಗಗಳನ್ನು ಒದಗಿಸುವುದು.
  6. “ಕೃಷಿ ಉತ್ಪನ್ನಕ್ಕೆ ಖಾತ್ರಿ ಬೆಲೆ – ರೈತನಿಗೆ ಬದುಕಿನ ನೆಲೆ!” ಸರ್ವ ಕೃಷಿ ಉತ್ಪನ್ನಗಳಿಗೆ ಸರ್ವ ಋತುಗಳಲ್ಲಿ ಖಾತ್ರಿ ಬೆಲೆಯನ್ನು ಒದಗಿಸುವುದು. “ಋತು ಬದಲಾದರೂ ಬೆಲೆ ಬದಲಾಗಬಾರದು

7.(ಅ) ರೈತನಿಗೆ ಬೀಜದ ದಾಸೋಹ-ರಾಜ್ಯಕ್ಕೆ ಅನ್ನದ ಉಡುಗೊರೆ, ಬಡ ರೈತರಿಗೆ (5 ಎಕರೆ ವರೆಗೆ) ಸರ್ಕಾರದಿಂದ ಉಚಿತವಾಗಿ ಪ್ರಮಾಣಿತ ಮತ್ತು ಪರೀಕ್ಷಿತ, ಗುಣಮಟ್ಟದ ಬೆಳೆ ಆಧಾರಿತ ಬೀಜ ಕಿಟ್‌ಗಳನ್ನು ಬಿತ್ತನೆಯ ಸಕಾಲದಲ್ಲಿ ಒದಗಿಸುವುದು.

7.(ಬ) “ತರಬೇತಿ + ಮಾರುಕಟ್ಟೆ = ರೈತನ ನಗುವಿಗೆ ಖಚಿತ ಭವಿಷ್ಯ” ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ವಿಶ್ವವಿದ್ಯಾಲಯ ಹಾಗೂ ಸಂಸ್ಕರಣಾ ಘಟಕಗಳನ್ನು ನಿರ್ಮಿಸಿ, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳಿಂದ ಆಹಾರ ತಯಾರಿಕಾ ತರಬೇತಿ ನೀಡಿ, ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಒದಗಿಸಬೇಕು.

7.(ಕ) “ಸಂತ್ರಸ್ಥರಿಗೆ ನ್ಯಾಯ – ವೈಜ್ಞಾನಿಕ ಪರಿಹಾರ ನಮ್ಮ ಧೈಯ” ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಸಂತ್ರಸ್ಥರಿಗೆ ವೈಜ್ಞಾನಿಕ ಪರಿಹಾರ ಧನವನ್ನು ಒಂದೇ ಹಂತದಲ್ಲಿ ನೀಡಿ ಸಮಗ್ರ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು.

  1. “ಸಾರಿಗೆ ಸರಾಗ – ಹಳ್ಳಿ ನಗರ ಹತ್ತಿರವಾಗ” ಉತ್ತರ ಕರ್ನಾಟಕ ಭಾಗಕ್ಕೆ ಅಗತ್ಯ ರೈಲುಗಳ ಸಂಪರ್ಕ ಕಲ್ಪಿಸಿ, ಉತ್ತಮ ಗುಣಮಟ್ಟದ ಬಸ್ಸುಗಳನ್ನು ಒದಗಿಸುವ ಮೂಲಕ ಗ್ರಾಮೀಣರಿಗೆ ಶಿಕ್ಷಣ, ತಂತ್ರಜ್ಞಾನ ಹಾಗೂ ಮಾರುಕಟ್ಟೆಗಳಿಗೆ ಹತ್ತಿರವಾಗುವಂತಾಗಬೇಕು.
  2. “ಮೀಸಲಾತಿ ಅರ್ಥಾತ್ ಹಕ್ಕು ತೊಂದರೆ ಅಲ್ಲ” ಸರಕಾರಿ ಕಾಮಗಾರಿಗಳ ಗುತ್ತಿಗೆ ಪ್ರಕ್ರಿಯೆಯಲ್ಲಿ SC/ST ಮತ್ತು 2A ಗುತ್ತಿಗೆ ಮೀಸಲಾತಿಯನ್ನು ಜಾರಿಗೆ ತರಬೇಕು. ಮೀಸಲಾತಿ ತಪ್ಪಿಸಲು ಕೆಲಸ ಮತ್ತು ಸೇವಾ ಪ್ಯಾಕೇಜಿಂಗ್‌ನ್ನು ವಿಲೀನಗೊಳಿಸುವುದನ್ನು ನಿಷೇಧಿಸಿ ನ್ಯಾಯ ಸಮ್ಮತ ಅವಕಾಶ ನೀಡಬೇಕು.
  3. “ಸಮಾನತೆ ಇಲ್ಲದೆ ಪ್ರಜಾಪ್ರಭುತ್ವ ಸಂಪೂರ್ಣವಲ್ಲ” ಮಹಿಳೆಯರ ಹಾಗೂ ಹಿಂದೂಳಿದ ವರ್ಗಗಳ ಸಬಲೀಕರಣಕ್ಕಾಗಿ ಪ್ರವರ್ಗಗಳಿಗನುಗುಣವಾಗಿ ಸ್ಥಳೀಯ ಸಭೆಗಳಿಂದ-ಲೋಕ ಸಭೆ ಹಂತದವರೆಗೂ ರಾಜಕೀಯ ಮೀಸಲಾತಿಯನ್ನು ಒದಗಿಸುವುದು

LEAVE A REPLY

Please enter your comment!
Please enter your name here