ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಶಾಂತಿಗುಡ್ಡೆ ,ಕೊಂಚಾರ್ ಬಳಿ MSEZ ನಿರ್ಮಿಸಿದ ನಿರ್ವಸತರ ಕಾಲನಿ ಯಲ್ಲಿ ಗುಡ್ಡ ಜರಿದುಬಿದ್ದು 8 ಮನೆಗಳಿಗೆ ಹಾನಿಯಾಗಿ,ಎರಡು ರಿಕ್ಷಾ ಮತ್ತು ಒಂದು ಕಾರು ಸಂಪೂರ್ಣವಾಗಿ ಮಣ್ಣಿನಡಿಯಲ್ಲಿ ಹೂತುಹೋಗಿದೆ.
ಮನೆಯಲ್ಲಿ ವಾಸಿಸುವ ನಾಗರಿಕರು ಪವಾಡ ಸದೃಶ ಪಾರಾಗಿದ್ದು ,ಜನರ ಆಕ್ರೋಶಕ್ಕೆ ಕಾರಣವಾಗಿದೆ .ಈ ಒಂದು ಘಟನೆಗೆ ಕಾಲೋನಿ ನಿರ್ಮಿಸಿದ MSEZ ನೇರ ಕಾರಣ ಎಂದು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಗಂಭೀರ ಆರೋಪ ಮಾಡಿದೆ .ನಿರಂತರ ಮಳೆ ಬರುತ್ತಿರುವುದು ಇಲ್ಲಿರುವ ಜನರು ಆತಂಕದ ವಾತಾವರಣದಲ್ಲಿ ಬದುಕು ಸಾಗಿಸುವಂತಾಗಿದೆ .ಲೇ ಔಟ್
ಮಾಡುವಾಗ ಯಾವುದೇ ಮೂಲಭೂತ ಸೌಕರ್ಯ ನಿರ್ಮಿಸದ MSEZ ಸರಿಯಾದ ತಡೆಗೋಡೆ ಮಾಡದೇ ಇರುವುದರಿಂದ ಈ ಅನಾಹುತಕ್ಕೆ ಕಾರಣ ಎಂದು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ ಆಕ್ರೋಶ ವ್ಯಕ್ತಪಡಿಸಿದ್ದಾರೆ .ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಹ ಸಂಚಾಲಕರಾದ ಇಸ್ಮಾಯಿಲ್ ಇಂಜಿನಿಯರ್ ,ಸಾಮಾಜಿಕ ಕಾರ್ಯಕರ್ತ ನಿಸಾರ್ ಕರಾವಳಿ ,ವಸಂತ್ ,ಗ್ರಾ ಮಾಜಿ ಸದಸ್ಯರಾದ ನಜೀರ್ ,ನಾಗೇಶ್ ಅಫೀಜ್ ಕೊಳಂಬೆ ,ಅಜ್ಮಲ್ ಮತ್ತು ಒಕ್ಕೂಟದ ಸದಸ್ಯರು ಮತ್ತು ನಾಗರಿಕರು ಉಪಸ್ಥಿತರಿದ್ದರು .