ದಾವಣಗೆರೆ: ಆರ್ಥಾ ಇನ್ಫಿನಿಟಿ ಮತ್ತು ದಾವಣಗೆರೆ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಸಹಯೋಗದಲ್ಲಿ “ಟ್ಯಾಲಿ ಪ್ರೈಮ್ 5.0 ಮೂಲಕ ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆ ಮತ್ತು ಸಮನ್ವಯ” ಕುರಿತು ಪ್ರಾಯೋಗಿಕ ಅಧಿವೇಶನವು 25 ಅಕ್ಟೋಬರ್ 2024ರಂದು ವಿಶಿಷ್ಟ ಶಿಕ್ಷಣ ಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ .ಸಹಾಯಕ ಪ್ರಾಧ್ಯಾಪಕ, ಡಾ. ವೆಂಕಟೇಶ್ ಬಾಬು ತಮ್ಮ ಭಾಷಣದಲ್ಲಿ, “ಟ್ಯಾಲಿ 5.0 ನಂತಹ ಸಾಫ್ಟ್‌ವೇರ್‌ಗಳು ಲೆಕ್ಕ ಪರಿಶೀಲನೆ, ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆ ಮತ್ತು ಟಿಡಿಎಸ್ ಫೈಲಿಂಗ್‌ನ್ನು ಹೆಚ್ಚು ಸುಗಮಗೊಳಿಸುತ್ತಿವೆ. ಇಂತಹ ಕಾರ್ಯಕ್ಷಮ ತಂತ್ರಾಂಶಗಳು ವ್ಯಾಪಾರಸ್ಥರು ಮತ್ತು ಲೆಕ್ಕದಾರರಿಗೆ ಸಮಯ ಉಳಿಸಿ, ದೋಷ ಮುಕ್ತ ಲೆಕ್ಕ ಚಲನೆಯನ್ನು ನಿರ್ವಹಿಸಲು ಸಹಕಾರಿಯಾಗುತ್ತವೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿ ಆಗಮಿಸಿದ ದಾವಣಗೆರೆ ಜಿಲ್ಲಾ ತೆರಿಗೆ ತಜ್ಞರ ಸಂಘದ ಅಧ್ಯಕ್ಷರಾದ ಎಚ್.ಟಿ. ಸುಧೀಂದ್ರ ರಾವ್, “ಜಿಎಸ್ಟಿ ಮತ್ತು ಟಿಡಿಎಸ್ ನಿಯಮಾವಳಿ ಅರಿವು ಹೆಚ್ಚಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ” ಎಂದರು.

ಅತಿಥಿಯಾಗಿ ಆಗಮಿಸಿದ್ದ ಟ್ಯಾಲಿ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ ಪುಗಲ್ ಟಿ ಅವರು, ಟ್ಯಾಲಿ 5.0 ತಂತ್ರಾಂಶದ ವಿವಿಧ ಆಯಾಮಗಳನ್ನು ವಿವರಿಸಿದರು ಮತ್ತು ಅದರ ಪ್ರಾಯೋಗಿಕ ಬಳಕೆ ಕುರಿತು ಮಾಹಿತಿ ನೀಡಿದರು.

ಸಮಾರಂಭದಲ್ಲಿ ದಾವಣಗೆರೆ ನಗರದ ತೆರಿಗೆ ಸಲಹೆಗಾರರು ವ್ಯಾಪಾರಸ್ಥರು ಈ ತಂತ್ರಜ್ಞಾನದಿಂದ ಲಾಭ ಹೊಂದಲು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ತೆರಿಗೆ ತಜ್ಞರ ಸಂಘದ ಗೌರವಾಧ್ಯಕ್ಷರಾದ ಡಿ.ಆರ್. ಶಂಕರ್ ವಿಶಿಷ್ಠ ಕಂಪ್ಯೂಟರ್ಸ್ ನ ಅರುಣ್ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here