ಮೂಡಲಗಿ:ಅ,19-ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಕಿತ್ತೂರು ಉತ್ಸವದ ಸಂಭ್ರಮದ “ವೀರ ಜ್ಯೋತಿ” (ತೇರು)ಗೆ ತಾಲೂಕಾಡಳಿತ ಮತ್ತು ಪಟ್ಟಣದ ಎಲ್ಲ ಸಮಾಜ ಬಾಂಧವರು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡರು.
1824-ಅಕ್ಟೋಬರ್, 23ರಂದು ಬ್ರಿಟಿಷರ ವಿರುದ್ಧ ಜಯಗಳಿಸಿದ ನೆನಪಿಗಾಗಿ ಪ್ರತಿ ವರ್ಷವೂ ಅಕ್ಟೋಬರ್,23 ರಿಂದು ಮೂರು ದಿನಗಳು ಅದ್ಧೂರಿಯಾಗಿ ಕಿತ್ತೂರಿನಲ್ಲಿ ಉತ್ಸವ ನಡೆಯುತ್ತದೆ.
ವಿಜಯೋತ್ಸವದ ನೆನಪಿಗಾಗಿ “ವೀರ ಜ್ಯೋತಿ” ಬಹುತೇಕ ನಾಡಿನ ತುಂಬ್ಯಾಲ ಸಂಚರಿಸಿ ಮೂಡಲಗಿ ಪಟ್ಟಣಕ್ಕೆ ಆಗಮಿಸಿತು.
200 ನೆಯ ವಿಜಯೋತ್ಸವದ ವರ್ಷಾಚರಣೆಯ.
ತಾಲೂಕಾ ಪಂಚಮಸಾಲಿ ಅಧ್ಯಕ್ಷ ಬಸವರಾಜ ಪಾಟೀಲ,ನಗರ ಘಟಕದ ಅಧ್ಯಕ್ಷ ಬಸವರಾಜ ರಂಗಾಪೂರ,ಮುಖಂಡರು ಎಸ್.ಆರ್.ಸೋನವಾಲಕರ, ಕೇದರಿ ಭಷ್ಮೆ, ಮಹಾದೇವ ಶಕ್ಕಿ,ಚೇತನ ನಿಶಾನಿಮಠ,ಆರ್.ವಿ.ಯರಗಟ್ಟಿ, ತಹಶಿಲ್ದಾರ ಶಿವಾನಂದ ಬಬಲಿ,ಪುಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ,ಚಿದಾನಂದ ಮುಗಳಖೋಡ ಇನ್ನು ಅನೇಕರು ಅದ್ಧೂರಿಯಾಗಿ ಸ್ವಾಗತಿಸಿ, ಬಿಳ್ಕೊಟ್ಟರು.