ಬೆಂಗಳೂರು: ಬೆಂಗಳೂರಿನ ಚಂದ್ರಾಲೇಔಟ್ ನಲ್ಲಿರುವ ಶ್ರೀ ಕನಕ ಭವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಕನಕ ಇಂಜಿನೀಯರ್ಸ್ ಸೊಸೈಟಿ(ರಿ)ಬೆಂಗಳೂರು ವತಿಯಿಂದ ಸಮಾಜದ ವಿವಿಧ ವಿಭಾಗಗಳಲ್ಲಿ ಗಣನೀಯ ಸೇವೆಸಲ್ಲಿಸುತ್ತಿರುವ ಮತ್ತು ಸೇವೆಸಲ್ಲಿಸಿ ನಿವೃತ್ತರಾದವರನ್ನು ಮತ್ತು ಐಐಎಮ್,ಐಎಎಸ್,ಬಿಬಿಎಮ್,ಎಂಬಿಎ,ಡಿಗ್ರಿ,ಹೀಗೆ ಹಲವು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸಿ ಉತ್ತೀರ್ಣರಾದ ಪ್ರತಿಭಾವಂತರನ್ನು ಗುರುತಿಸಿ ಅಭಿನಂದನಾ ಮತ್ತು ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶ್ರೀ ಕಾಳಿದಾಸ ಸಂಸ್ಕೃತಿಕ ವೇದಿಕೆಯ ಸಂಘಟಕರೂ ಅತ್ಯುತ್ಸಾದಿಂದ ಭಾಗವಹಿಸಿದ್ದರು ಕಾರ್ಯಕ್ರಮ ನಿರ್ವಹಿಸಿದರು.
ಸಮಾಜದ ಬಂಧುಗಳು ಬರೀ ರಾಜಕೀದಲ್ಲೇ ಬೆಳೆಯಬೇಕೆಂಬುದಲ್ಲಾ ಎಲ್ಲಕ್ಷೇತ್ರಗಳಲ್ಲೂ ಬೆಳೆಯಲು ಅವಕಾಶಗಳಿವೆ.ತಮಗೆ ಸಿಕ್ಕಿದ ಕ್ಷೇತ್ರದಲ್ಲೇ ಉತ್ತಮ ಸಾಧನೆ ಮಾಡಿ ಇತೃಇಗೆ ಮಾದರಿಯಾಗಬೇಕೆಂದು ಕರೆಕೊಟ್ಟರು.
ನಮಗೆ ಸಿಕ್ಕ ಉನ್ನತ ಸ್ಥಾನಮಾನಗಳು ತಮ್ಮ ಸ್ವಂತಕ್ಕೆ ಬಳಸಿಕೊಳ್ಳದೇ ಸಮಾಜದ ಒಳತಿಗಾಗಿ ಇತರರಿಗೆ ಸಹಕಾರಮಾಡುತ್ತಾ ಸಮಾಜದವರಿಗೆ ಬೆಳಕಾಗು ಬಳಸಬೇಕು.
ಸಮಾಜ ಮೊದಲು ಸಮಾಜದಿಂದ ನಾವು ಬೆಳೆದು ಸಮಾಜಕ್ಕೇ ನಮ್ಮ ಕೊಡುಗೆ ಸಿಂಹಪಾಲಾಗಿರಬೇಕೆಂದು ಹೇಳಿದರು.(ಎಲ್ಲ ಪುರಸ್ಕೃತರ ವಿವರ ಭಾವಚಿತ್ರದೊಂದಿಗೆ ಮುಂದೆ ಪ್ರಕಟಿಸಲಾಗುವುದು)