ತಾಳಿಕೋಟಿ: ತಾಲೂಕಿನ ಸಮೀಪದ ಹಿರೂರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸರಕಾರದ ಆದೇಶದಂತೆ ಜಲದೂತ ಕಾರ್ಯಕ್ರಮ ನೇರವೇರಿತು ಕ್ರಾಯಕ್ರಮದ ಮೊದಲು ಎಲ್ಲಾ ಶಾಲಾ ಮಕ್ಕಳು,ಶಿಕ್ಷಕರು ಹಾಗೂ ಎಸ್, ಡಿ,ಎಮ್ ,ಸಿ ಅಧ್ಯಕ್ಷರು ಸದಸ್ಯರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಮಾಡಿ ಜಲದೂತದ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಜನತೆಗೆ ಜಾಗ್ರತಿ ಮೂಡಿಸಿದರು ನಂತರ ಶಾಲಾ ಆವರಣದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಸಂಗನಗೌಡ ಆಸ್ಕಿ ನೇತ್ರುತ್ವದಲ್ಲಿ ಜಲದೂತ ಕಾರ್ಯಕ್ರಮ ಜರುಗಿತು ಶಿಕ್ಷಕರಾದ ಶ್ರೀ ಡಿ,ಎಚ್ ,ಯರಲಡ್ಡಿ ಅವರು ಮಾತನಾಡಿ ಗಾಳಿ ಎಲ್ಲರಿಗೂ ಎಷ್ಟು ಅವಶ್ಯಕವಾಗಿದೆಯೋ ನೀರು ಕೂಡಾ ಅಷ್ಟೆ ಅವಶ್ಯಕವಾಗಿದೆ ಅದನ್ನು ಮಿತವಾಗಿ ಹಿತವಾಗಿ ಬಳಸಬೇಕೆಂದು ಪ್ರಾಸ್ಥಾವಿಕವಾಗಿ ಮಾತನಾಡಿದರು ನಂತರ ಗುರುಮಾತೆಯರಾದ ಶ್ರೀಮತಿ ಎಮ್, ಜಿ, ಬಿರಾದಾರ ಮಾತನಾಡಿ ನೀರನ್ನು ದುರ್ಬಳಕೆ ಮಾಡಲಾರದೆ ರಸ್ತೆಯ ಮೇಲೆ ನೀರನ್ನು ಹರಿದು ಬಿಡಲಾರದಂತೆ ನೋಡಿಕೊಳ್ಳಬೇಕು ಹಾಗೂ ಹೊಲದಲ್ಲಿ ಕೃಷಿ ಹೊಂಡಗಳನ್ನು ಮನೆಯಲ್ಲಿ ಮಳೆಕೊಯ್ಲುಗಳನ್ನು ನಿರ್ಮಿಸಕೊಳ್ಳಬೇಕೆಂದು ತಿಳಿಹೇಳಿದರು ಕಾರ್ಯಕ್ರಮವನ್ನು ಶ್ರೀ ಎಸ್,ಬಿ ಹಡಪದ ಶಿಕ್ಷಕರು ನಿರೂಪಿಸಿ ವಂದಿಸಿದರು ಮುಖ್ಯಗುರುಗಳಾದ ಶ್ರೀ ಪಿ,ವಾಯ್, ಚಲವಾದಿ ಶಿಕ್ಷಕರಾದ ಶ್ರೀ ಎಚ್, ಡಿ ಸಿಂದಗೀರಿ ,ಶ್ರೀ ಆರ್, ಬಿ ಮಂಗ್ಯಾಳ ಎನ್, ಎಸ್ ನೀರಲಗಿ,ಎಸ್,ಆರ್,ಬಿರಾದಾರ ಶ್ರೀಮತಿ ಜಿ,ಎಸ್ , ಮದ್ದರಕಿ ಹಾಗೂ ಕುಮಾರಿ ಸಾವಿತ್ರಿ ಬಡಿಗೇರ ಶಿಕ್ಷಕರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here