ಮೂಡಲಗಿ:ಜೂ,25-ಪಟ್ಟಣ ಇಲ್ಲಿಯ 21-06-2024 ರಂದು ಮೂಡಲಗಿ ದಿವಾಣಿ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ಆದೇಶ ನೀಡಿದ್ದು ಇರುತ್ತದೆ. ಪಿರ್ಯಾದಾರ ಸೊಸಾಯಿಟಿ ಶ್ರೀ. ಬಸವೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ., ಸಂಕೇಶ್ವರ ಶಾಖೆ, ಮೂಡಲಗಿ ಇವರು ಆರೋಪಿಯಾದ ಮಿಟ್ಟುಸಾಬ ಕುತ್ಬುಸಾಬ್ ಅತ್ತಾರ ಸಾ|| ಮೂಡಲಗಿ ಇವರು ಪಿರ್ಯಾದಿ ಸೊಸಾಯಿಟಿ ಮೂಡಲಗಿ ಶಾಖೆಯಲ್ಲಿ ಸಾಲ ಪಡೆದಿದ್ದು, ಸಾಲ ಮರುಪಾವತಿಗಾಗಿ ಚೆಕ್ಕನ್ನು ನೀಡಿದ್ದು, ಆರೋಪಿಯು ನೀಡಿದ ಚೆಕ್ ಬೌನ್ಸ್ ಆಗಿದ್ದರ ಸಲುವಾಗಿ ಪಿರ್ಯಾದಿ ಸೊಸಾಯಿಟಿಯವರು ಆರೋಪಿತನ ವಿರುದ್ಧ ನೆಗೋಶಿಯೇಬಲ್ ಇನಸ್ಟುಮೆಂಟ್ ಆ್ಯಕ್ಷ ಕಲಂ 138 ರ ಅಡಿಯಲ್ಲಿ ಪ್ರಕರಣ ದಾಖಲ ಮಾಡಿದ್ದರು. ವಿಚಾರಣೆಯ ನಂತರ ದಿನಾಂಕ : 21/06/2024 ರಂದು ಆರೋಪಿಗೆ ಚೆಕ್ಕನ ಮೊತ್ತ ರೂ.8,05,197/- ಗಳನ್ನು ಪಾವತಿಸುವಂತೆ ಹಾಗೂ ಸರಕಾರಕ್ಕೆ ರೂ.10,000/- ಗಳನ್ನು ದಂಡ ಪಾವತಿ ಮಾಡುವಂತೆ ಆದೇಶವಾಗಿದ್ದು ಇರುತ್ತದೆ. ಒಂದು ವೇಳೆ ಹಣ ಪಾವತಿಸದಿದ್ದಲ್ಲಿ ಒಂದು ವರ್ಷಗಳ ಕಾಲ ಸಾದಾ ಕಾರಾಗೃಹ ವಾಸ ಶಿಕ್ಷೆ ಅನುಭವಿಸುವಂತೆ ಆದೇಶ ಮಾಡಿದ್ದು, ಸದರಿ ಪ್ರಕರಣದ ಆದೇಶವನ್ನು ನ್ಯಾಯಾದೀಶರಾದ ಶ್ರೀಮತಿ. ಜ್ಯೋತಿ ಪಾಟೀಲ ರವರು ನೀಡಿದ್ದು ಇರುತ್ತದೆ. ಪಿರ್ಯಾದಿದಾರ ಸೊಸಾಯಿಟಿಯ ಪರವಾಗಿ ಕಾನೂನು ಸಲಹೆಗಾರರಾದ ಶಿವಬಸು ವಾಯ್. ಹೊಸಟ್ಟಿ ವಕೀಲರು ವಕಾಲತ್ತು ವಹಿಸಿದ್ದರು.

LEAVE A REPLY

Please enter your comment!
Please enter your name here