ದೇವದುರ್ಗ: ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ದೇವದುರ್ಗ ಹಾಗೂ ರೈತ ಸಂಘ ದೇವದುರ್ಗ ಇವರ ನೇತೃತ್ವದಲ್ಲಿ 2024-25 ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.ಈ ಸಭೆಯಲ್ಲಿ ದೇವದುರ್ಗ ತಾಲೂಕಿನ 145 ರಸಗೊಬ್ಬರ ಹಾಗೂ ಕೀಟನಾಶಕ ಅಂಗಡಿಗಳ ಮಾಲೀಕರು ಕಳಪೆ ಬೀಜ,ಕಳಪೆ ರಸಗೊಬ್ಬರ ರೈತರಿಗೆ ಕೊಡಬಾರದು ಹಾಗೂ ಕಂಪನಿ ನಿಗದಿ ಮಾಡಿದ ಬೆಲೆಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಹೇಳಲಾಯಿತು .
ಈ ಸಭೆಯಲ್ಲಿ ರೈತರ ಸಮಸ್ಯೆಗಳು, ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಎಣ್ಣೆಗಳು ವಿತರಿಸುವಾಗ ರೈತರಿಗೆ ಕಡ್ಡಾಯವಾಗಿ ರಸಿದಿಯನ್ನು ಕೊಡಬೇಕು ಎಂದು ತಿಳಿಸಲಾಯಿತು.ಹಾಗೂ ಮಾನ್ಯ ಜಂಟಿ ನಿರ್ದೇಶಕರು ರಾಯಚೂರು ಇವರು ಅಂಗಡಿ ಮಾಲೀಕರಿಗೆ ಕಡ್ಡಾಯವಾಗಿ ರಸೀದಿಯನ್ನು ನೀಡಬೇಕು ಒಂದು ವೇಳೆ ನೀಡದೇ ಇದ್ದರೆ. ನಿಮ್ಮ ಅಂಗಡಿಯ ಪರವಾಗಿಯನ್ನು ರದ್ದು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ತಸಿಲ್ದಾರರು,AD, ADLR, JD,ಯವರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಪದಾಧಿಕಾರಿಗಳು,ನಗರ ಘಟಕ ಪದಾಧಿಕಾರಿಗಳು, ಗ್ರಾಮ ಘಟಕ ಪದಾಧಿಕಾರಿಗಳು ಉಪಸ್ಥಿತರಿದ್ದರು.