ದಾವಣಗೆರೆ:ಲೋಕಸಭೆ-2024, ದಾವಣಗೆರೆ ಕ್ಷೇತ್ರ ಇಡೀ ಭಾರತದ ಗಮನಸೆಳೆದ ಕಾಲೊಂದಿತ್ತು.ಅಂದು ದಾವಣಗೆರೆ ಲೋಕಸಭೆ ಚುನಾವಣಾ ಸ್ಪರ್ಧಾಳುಗಳಾಗಿದ್ದ ಚನ್ನಯ್ಯ ಒಡೆಯರ್ ಕಾಂಗ್ರೆಸ್. ರವೀಂದ್ರನಾಥ್ ಭಾರತೀಯಜನತಾಪಕ್ಷ ಇವರಿಬ್ಬರ ಚುನಾವಣೆ ಈಗಿನ ಚುನಾವಣೆಯಹಾಗೆ ಜಾತಿ,ಧರ್ಮ,ಹಾಗೂ ದ್ವೇಶದ ರಾಜಕಾರಣವಾಗಿರಲಿಲ್ಲಾ.ಪಕ್ಷ ನಿಷ್ಠೆ, ತತ್ವಸಿದ್ಧಾಂತ ಮತ್ತು ಅಭ್ಯರ್ಥಿ ಗಳ ನಡೆನುಡಿ ಸರಳತೆ ಜನಾನುರಾಗಿಗಳ ಆಧಾರದ ಮೇಲೆ ನಡೆದು ಇಬ್ಬರೂ ಅಭ್ಯರ್ಥಿಗಳು ಜನಮನ್ನನೆ ಪಡೆದು ಸ್ವಲ್ಪ ಹೆಚ್ಚುಕಮ್ಮಿ ಅಂತರದಲ್ಲಿ ಸಮಾನಾಂತರದ ಆಸುಪಾಸು ಜನಮನ್ನನೆ ಗಳಿಸಿದ್ದರು.ಆಗ ಅವರಿಬ್ಬರ ಜನಮತ ಅಧಿಕಾರಿಗಳ ತಲೆ ಬಿಸಿ ಮಾಡಿತು ಕೊನೆಗೆ ಅಂದಿನ ಕೇಂದ್ರ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್ ರವರೇ ಸ್ವತಃ ಬಂದು ಪುನರ್ ಮತ ಎಣಿಕೆ ಮಾಡಿ ಅದರಲ್ಲಿ ಹೆಚ್ಚುಮತಪಡೆದ ಶ್ರೀ ಚನ್ನಯ್ಯ ಒಡೆಯರ್ ರವರ ಆಯ್ಕೆಯನ್ನು ಘೋಷಣೆ ಮಾಡಲಾಗಿತ್ತು.ಅಂದಿನ ಸಂಧರ್ಬ ಇಡೀ ದೇಶದ ಗಮನವನ್ನು ದಾವಣಗೆರೆ ಕ್ಷೇತ್ರ ಸೆಳೆದಿತ್ತು.
ತದನಂತರ ರಾಜಕೀಯ ಲೆಕ್ಕಾಚಾರಗಳು ಸ್ವಹಿತಕ್ಕಾಗಿ,ಜಾತಿಕಾರಣಕ್ಕಾಗಿ ಹಣವಂತರ ಪ್ರಭಾವದಿಂದಾಗಿ ಹಲವು ವಿಧಗಳಲ್ಲಿ ಪಕ್ಷನಿಷ್ಠೆ,ತತ್ವಸಿದ್ದಾಂತಗಳಿಗೆ ತಿಲಾಂಜಲಿ ಇಟ್ಟು ಒಳ ಒಪ್ಪಂದಗಳು ಪರಸ್ಪರ ಜಯ ಅಪಜಯಗಳ ನಾಟಕಗಳು ಸುರುವಾಗಿ ಜನರಿಗೆ ಬಹಿರಂಗವಾಗಿಯೇ ಪ್ರದರ್ಶನ ಕಂಡವು.
ಆದರೆ ಇಲ್ಲಿಯ ಪರಿಸ್ಥಿತಿ ಗನುಗುಣವಾಗಿ ಬದುಸಾಗಿಸುವ ಅನಿವಾರ್ಯತೆಯ ಕಾರಣದಿಂದಾಗಿ ಕೋಣ ಮರಿ ಹಾಕಿದೆ ಎಂದರೂ ಹೌದು ಎನ್ನುವ ಪರಿಸ್ಥಿತಿ ಉಂಟಾದಕಾರಣ ಯಾರೂ ಅಲ್ಲಗಳೆಯದೇ ಪ್ರಜ್ಞಾವಂತರು ಮೌನಗೈದರು.
ಅಲ್ಲಿಯಿಂದ ಇಲ್ಲಿಯ ವರೆಗೆ ಜಾತಿ,ಧರ್ಮ,ಸಂಭಂದ,ಹಣ,ದರ್ಪಗಳ ಅಡಿಯಲ್ಲಿ ರಾಜಕೀಯವಾಗಿಏನು ನಡೆದುಹೋಗಿದೆ ಎಂಬ ವಿಚಾರ ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ.ಆದರೆ ಪರ್ಯಾಯ ರಾಜಕೀಯಶಕ್ತಿಯನ್ನು ಪ್ರಜ್ಞಾವಂತರು ಬಯಸುತಿದ್ದರಾದರೂ ಅಂಥಾ ವ್ಯಕ್ತಿಗಳ ಹುಡುಕಾಟ ಕಳೆದ ಹದಿನೈದು ವರ್ಷಗಳಿಂದ ಅನ್ವೇಷಣೆಯಲ್ಲಿ ಮತದಾರ ಇದ್ದರೂ ಸಹ ಅಂಥ ಶಕ್ತಿಯ ಸುಳಿವು ಸಿಕ್ಕ ಹತ್ತಿರ ಹೋಗಿ ಕರೆದಾಗ ಬಹುತೇಕರು ತಮ್ಮ ಹಲವಾರು ಅಸಹಾಯಕತೆಯನ್ನು ಹೇಳಿ ಹಿಂದೆಸರಿದರು.ಧೈರ್ಯವಾಗಿ ಯಾರೂ ಮುಂದೆ ಬರಲಿಲ್ಲಾ.
ಆದರೆ ಎಲ್ಲದಕ್ಕೂ ಕಾಲಕೂಡಿಬರಬೇಕಲ್ಲಾ ಎನ್ನುವ ಮಾತಿನಂತೆ ಈಗ ಕಾಲ ತಾನಾಗಿಯೇ ಕೂಡಿಬಂದಿದೆ.
ಯಾರೂ ಊಹೆ ಮಾಡದಿರುವಂಥ ಯುವ ಶಕ್ತಿ,ನವಚೈತನ್ಯ,ನವೋಲ್ಲಾಸ,ವಿದ್ಯಾವಂತ,ಪ್ರಗತಿಪರ ಚಿಂತಕ,ಅಭಿವೃದ್ಧಿಯ ಕನಸುಗಾರ,ಯುವಜನರ ಆಶಾಕಿರಣ,ಬಡತನ ಸಿರಿತನದ ಅನುಭವ ಏಸಿ ರೂಮು ಸೈ ಬಿಸಿಗಾಳಿಗೂ ಸೈ ಎನ್ನುವ ಜನಮಾನಸದ ಆಶಾಕಿರಣವೊಂದು ಕಳೆದ ಹತ್ತು ತಿಂಗಳುಗಳಿಂದ ಕ್ಷೇತ್ರದಾದ್ಯಂತ ಮಿಂಚಿನಸಂಚಾರ ನಡೆಸಿ ಬರೀ ಕ್ಷೇತ್ರವಷ್ಟೇ ಅಲ್ಲಾ ಇಡೀ ರಾಜ್ಯದ ಮನೆಮಾತಾದ ದೃವ ತಾರೆಯೊಂದು ದಾವಣಗೆರೆ ಲೋಕಸಭೆಯ ಕ್ಷೇತ್ರದಲ್ಲಿ ಮಿಂಚುತ್ತಿದೆ.
ಹಾಗಾಗಿ ಕ್ಷೇತ್ರದ ಮತದಾರ ಬಯಸಿದ್ದು ಈಗ ಸಿಕ್ಕಿದೆ ಅದನ್ನು ಕಳೆದುಕೊಳ್ಳಲು ಪ್ರಜ್ಞಾವಂತರು ಇಷ್ಟಪಡುತ್ತಿಲ್ಲಾ. ಮತದಾರ ಕೇಳುತ್ತಿರುವುದು ಒಂದೇ ದಾವಣಗೆರೆ ಜಿಲ್ಲೆಯಲ್ಲಿ ಅಷ್ಟೇ ಅಲ್ಲಾ ಇಡೀದೇಶ ಮತ್ತು ರಾಜ್ಯದಲ್ಲಿ ರಾಜಕೀಯ ಕೆಲವೇ ಕೆಲವು ಜಾತಿ,ಕುಟುಂಬ,ಸಂಭಂದಗಳ ಕಪಿಮುಷ್ಠಿಯಲ್ಲಿ ಸಿಕ್ಕು ನಿಂತ ನೀರಿನಂತಾಗಿದೆ.ಆ ನಿಂತನೀರು ಕೊಚ್ಚೆ ನೀರಾಗಿ ಕೊಳೆತು ನಾರುತ್ತಿದೆ.ಆ ಕೊಳೆತ ಕೊಚ್ಚೆನೀರಲ್ಲಿ ಹಲವಾರು ವಿಷಜಂತುಗಳು ಹುಟ್ಟಿಕೊಂಡು ಸಾಮಾಜಿಕ ಅಂಟು ಸಾಂಕ್ರಾಮಿಕ ಕಾಯಿಲೆಗಳನ್ನು ಉಂಟುಮಾಡಿ ಜನರ ನೆಮ್ಮದಿ,ಶಾತಿ ಭಂಗಮಾಡಿ ಸಾಮಾನ್ಯರ ಬದುಕೇ ಒಂದು ರೀತಿಯ ಭಯದಂತಿದೆ.ಹಾಗಿರುವಾಗ ರಾಜಕೀಯ ಸೋಲು ಗೆಲುವುಗಳೇನೇ ಇರಲಿ ನಿಂತನೀರು ಕೊಚ್ಚೆಯಾಗಿದ್ದು ಅದರಲ್ಲಿಯ ವಿಷಜಂತುಗಳಿಂದ ಸಮಾಜದಮೇಲಾಗುವ ದುಷ್ಪರಿಣಾಮ ಗಳ ತಡೆಗಾಗಿ ಆ ನೀರನ್ನು ಶುಚಿಗೊಳಿಸಬೇಕಾಗಿರುವುದು ಪ್ರಜ್ಞಾವಂತರ ಪ್ರಥಮ ಆದ್ಯತೆ ಹಾಗಾಗಿ.ಈಗ ಕ್ಷೇತ್ರದ ಪ್ರಜ್ಞಾವಂತರು ಕೊಚ್ಚೆ ನೀರನ್ನು ತೊಡೆದುಹಾಕಿ ಶುದ್ಧೀಕರಿಸಿ ರಾಜಕೀಯ ಶುದ್ಧೀಕರಣಕ್ಕೆ ಇದು ಸೂಕ್ತವಾದ ಸುಸಮಯ.ಆದ್ದರಿಂದ ನೀವು ರಾಜಕೀಯ ಲಾಭಪಡೆಯದಿದ್ದರೂ ಚಿಂತೆಯಿಲ್ಲಾ.ಕೊಚ್ಚೆನೀರು ತೊಲಗಿಸಿ ಶುದ್ಧೀಗೊಳಿಸಿ ಸಮಾಜದ ಸೇವೆಗೆ ಬದ್ದರಾಗಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತಿದ್ದೇವೆ ಎಂದು ಜನಮಾನಸದಿಂದ ಹೊರಹೊಮ್ಮುತಿದೆ.ನಿಮಗಾಗಿಅಲ್ಲದಿದ್ದರೂ ಸಾಮಾನ್ಯ ಜನರಪರವಾಗಿ ಒಂದು ಗಟ್ಟಿ ದ್ವನಿ ಜಿಲ್ಲೆಯಲ್ಲಿ ಅನಿವಾರ್ಯತೆ ಇದೆ ಅದನ್ನು ನೀಗಿಸು ಶಕ್ತಿ ಹಾಗೂ ಜವಾಬ್ದಾರಿ ನಿಮ್ಮಮೇಲಿದೆ.ನಾವು ಇಷ್ಟುದಿವಸ ನಿಮ್ಮಬೆಂಬಲಕ್ಕೆ ನಿಂತಿರುವುದು ಯಾಕಂದರೆ ನಾವು ಜಾತಿ,ಧರ್ಮ,ಹಣ,ಯಾವುದನ್ನೂ ನೋಡಿಯಲ್ಲಾ ನಿಮ್ಮ ಹೈಕಮಾಂಡ್ ನೋಡಿಯೂ ಅಲ್ಲಾ. ನಿಮ್ಮಲ್ಲಿರುವ ಸರ್ವಜನಸಮೂಹದ ಏಳ್ಗೆಯ ಮನಸ್ಸನ್ನು ಗಮನಿಸಿ ಯುವಜನತೆಗೆ ಹೊಸ ಬದುಕು ನಿರ್ಮಿಸಿಕೊಡುವ ಅಚಲವಿಸ್ವಾಸ ನಮಗೆ ಕಂಡುಬಂದಿದೆ.ಆದ್ದರಿಂದ ಜಿಲ್ಲೆಯ ರಾಜಕೀಯ ಶದ್ಧೀಕರಣಕ್ಕಾಗಿ ತಮ್ಮ ಸ್ಪರ್ಧೆ ಖಚಿತವಾಗಲಿ ಜನರಾಭಿಪ್ರಾದಂತೆ ವಿಜಯಶಾಲಿಯಾಗಿ ಮತ್ತೊಮ್ಮೆ ದಾವಣಗೆರೆ ಲೋಕಸಭೆಯ ಚುನಾವಣೆಯ ಸದ್ದು ಭಾರತದಾದ್ಯಂತ ಶಬ್ದಮಾಡುವುದರಜೊತೆಗೆ ದೇಹಲಿಯ ತಲುಪಲಿ ಎಂದು ಬಯಸುವ ನಿಸ್ವಾರ್ಥ ರಾಜಕೀಯ ಶದ್ದೀಕರಣ ನಿರೀಕ್ಷಕರುಗಳ ಒತ್ತಾಶೆಯಾಗಿದೆ.