ದಾವಣಗೆರೆ : ಮಹಾನಗರ ಪಾಲಿಕೆ ಕನ್ನಡಪರ ಸಂಘ ಸಂಸ್ಥೆಗಳು ಮತ್ತು ಪತ್ರಕರ್ತರ ಸಂಯುಕ್ತ ಆಶ್ರಯದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭವು 25.26.27.ಮೂರು ದಿನಗಳ ಕಾಲ ಅದ್ದೂರಿಯಾಗಿ ಜರುಗಿತು. ಪ್ರತಿದಿನ ಸಾಂಸ್ಕತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸನ್ಮಾನ್ರಿಯರಿಗೆ ಸನ್ಮಾನ ಜರುಗಿದವು.
27 ರಂದು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸನ್ಮಾನ ಕಾರ್ಯಕ್ರಮದಲ್ಲಿ ಸುಭಾಷಿತ ಕನ್ನಡ ದಿನಪತ್ರಿಕೆ ಸಂಪಾದಕರು ಗೌರವ ಡಾಕ್ಟರೇಟ್ ಪುರಸ್ಕೃತರಾದ ಹಾಗೂ ಅಂತರಾಷ್ಟ್ರೀಯ ಯೋಗ ಪಟು ಕೆ. ಜೈಮುನಿ ಇವರಿಗೆ ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನವನ್ನು ಪೂಜ್ಯ ಮಹಾಪೌರರಾದ ವಿನಾಯಕ್ ಬಿ.ಹೆಚ್ ಪೈಲ್ವಾನ್, ಇವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಎಂ.ವಿ ವೆಂಕಟೇಶ್ ಅಯುಕ್ತರಾದ ಶ್ರೀಮತಿ ರೇಣುಕಾ, ಸಾಹಿತಿಗಳಾದ ಡಾ. ರಂಜಾನ್ ದರ್ಗಾ, ಧರ್ಮ ಗುರುಗಳಾದ ಜೈನಿ ಉಸ್ತಾದ್, ಸಹ ಸಂಪಾದಕರಾದ ಬಿ.ಎನ್. ಮಲ್ಲೇಶ್, ನಗರಸಭೆ ಮಾಜಿ ಅಧ್ಯಕ್ಷರಾದ ಕೆ.ಜಿ. ಶಿವಕುಮಾರ್, ಕನ್ನಡಪರ ಸಂಘಟನೆ ಒಕ್ಕೂಟದ ಮಹಿಳಾ ಅಧ್ಯಕ್ಷ ಶ್ರೀಮತಿ ಶುಭ ಮಂಗಳ, ಉಪ ಮಹಾಪೌರರಾದ ಶ್ರೀಮತಿ ಯಶೋಧ ಹೆಗ್ಗಪ್ಪ ಮುಂತಾದವರು ಉಪಸ್ಥಿತ ರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಹಾನಗರ ಪಾಲಿಕೆ ಸದಸ್ಯರಾದ ಎ. ನಾಗರಾಜ್. ಸ್ವಾಗತವನ್ನು ಸದಸ್ಯರಾದ ಚಮನ್‌ಸಾಬ್. ವಂದನಾರ್ಪಣೆಯನ್ನು ಜೆಡಿ ಪ್ರಕಾಶ್ .ನೆರವೇರಿಸಿದರು.