ದಾವಣಗೆರೆ:ಅಸಲಿ ಬಂಗಾರ ಎಂದು ನಂಬಿಸಿ ನಕಲಿ ಬಂಗಾರ ನೀಡಿ ವಂಚನೆ ಮಾಡಿದ ಅಂತರ್‌ ಜಿಲ್ಲಾ ಆರೋಪಿತರ ಬಂಧನ, 40,00,000/- ರೂ ನಗದು ಹಣ ವಶ ಪಡಿಸಿಕೊಂಡ ಪೊಲೀಸ್.
ದಿನಾಂಕ: 29.09.2023 ರಂದು ಯವರಾದ ಗೋವರ್ಧನ್ ಬಿ.ಆರ್ ತಂದೆ ಬಿ ಎಂ ರಾಮಯ್ಯ ಚಿಕ್ಕ ಚೀಮನಹಳ್ಳಿ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರಿಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ಪರಿಚಯ ಮಾಡಿಕೊಂಡು ನಮ್ಮ ಮನೆಯ ಪಕ್ಕದಲ್ಲಿ ಪಾಯ ತೆಗೆಯುವಾಗ ಹಳೆ ಕಾಲದ ಬಂಗಾರದ ಬಿಲ್ಲೆಗಳು ಸಿಕ್ಕಿವೆ ಬೇಕಾದರೆ ನಿಮಗೆ ಕೊಡಿಸುತ್ತೇನೆ. ನಿಮಗೆ ಬೇಕಾದರೆ ಸ್ಯಾಂಪಲ್ ಕೋಡಿಸುತ್ತೆನೆ ಬಂದು
ನೋಡಿಕೋಂಡು ಹೋಗಿ ಎಂದು ಪಿರಾಧಿಯವರಿಗೆ ತಿಳಿಸಿದ್ದು, ಪಿರ್ಯದಿಯವು ಅವರ ಮಾತಿನಂತೆ ಹೇಳಿದ ಸ್ಥಳಕ್ಕೆ ಬಂದು ವಂಚಕರು ನೀಡಿದ ಅಸಲಿ ಬಂಗಾರ ಬಿಲ್ಲೆಗಳನ್ನು ಪಡೆದು ಪರಿಶಿಲಿಸಿದ್ದು, ನಂತರ ಅಸಲಿ ಬಂಗಾರ ಖಚಿತ ಪಡಿಸಿಕೊಂಡು ವ್ಯವಹಾರ ಮಾತನಾಡಿದ್ದು, ನಂತರ 60 ಲಕ್ಷ ಪಡೆದು 1/2 ಕೆಜಿ ಅಸಲಿ ಬಂಗಾರ ಎಂಬುದಾಗಿ ನಂಬಿಸಿ ನಕಲಿ ಬಂಗಾರ ನೀಡಿ ಮೋಸ ಮಾಡಿದ್ದು ಈ ಬಗ್ಗೆ ಚನ್ನಗಿರಿ ಪೊಲಿಸ್ ಠಾಣೆ ಗುನ್ನೆ ನಂ: 415/2023,ಕಲಂ: 420 ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲಾಗಿರುತ್ತದೆ.

ಸದರಿ ಪ್ರಕರಣದಲ್ಲಿ ಆರೋಪಿತರು ಮತ್ತು ಮಾಲು ಪತ್ತೆಗಾಗಿ ದಾವಣಗೆರೆ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಮಗೊಂಡ ಬಸರಗಿ ಮತ್ತು ಚನ್ನಗಿರಿ ಉಪ ವಿಭಾಗದ ಪೊಲೀಸ್‌ ಉಪಾದೀಕ್ಷಕರಾದ ಶ್ರೀ ಪ್ರಶಾಂತ್ ಮುನ್ನೋಳಿ ರವರ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆ ಇನ್ಸಪೆಕ್ಟರ್ ರವರಾದ ಶ್ರೀ ನಿರಂಜನ ಬಿ. ರವರ ನೇತೃತ್ವದದಲ್ಲಿ ಪಿ.ಎಸ್.ಐ ಗುರುಶಾಂತಯ್ಯ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚನೆ ಮಾಡಿದ್ದು, ಈ ತಂಡವು ದಿ: 06.10.2023 ರಂದು ಪತ್ತೆ ಕಾರ್ಯದಲ್ಲಿ ತೊಡಗಿ ಆರೋಪಿತರಾದ 01) ಸಂದೀಪ ಪಿ ತಂದೆ ಲೇ|| ಪರಶುರಾಮ, ವಾಸ:- ಪಾವನಪುರ ಗ್ರಾಮ, ಹರಪನಹಳ್ಳಿ ತಾಲ್ಲೂಕು, ವಿಜಯನಗರ ಜಿಲ್ಲೆ. 02) ಈಶ್ವರಪ್ಪ ಹೆಚ್ ತಂದೆ ಲೇ| ಕೊಟ್ರಬಸಪ್ಪ, ವಾಸ:- ಚಿರಸ್ಥಹಳ್ಳಿ ಗ್ರಾಮ, ಹರಪನಹಳ್ಳಿ ತಾಲ್ಲೂಕು, ವಿಜಯನಗರ ಜಿಲ್ಲೆ. ಇವರುಗಳನ್ನು ಮೇಲ್ಕಾಣಿಸಿದ ವಂಚನೆ ಪ್ರಕರಣದಲ್ಲಿ ದಸ್ತಗಿರಿ ಮಾಡಿ ಆರೋಪಿತರಿಂದ 40,00,000/- ರೂ ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಮೇಲ್ಕಂಡ ವಂಚನೆ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡುವಲ್ಲಿ ಮತ್ತು ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಮೇಲ್ಕಂಡ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್‌ರವರಾದ ಶ್ರೀ ನಿರಂಜನ ಬಿ. ಪಿ.ಎಸ್.ಐ ಶ್ರೀ ಗುರುಶಾಂತಯ್ಯ, ಎ.ಎಸ್.ಐ ಶಶಿಧರ್, ಸಂತೆಬೆನ್ನೂರು ವೃತ್ತ ಕಛೇರಿಯ ರುದ್ರೇಶ್‌ ಎಂ. ಹಾಗೂ ಚನ್ನಗಿರಿ ಠಾಣೆಯ ಸಿಬ್ಬಂದಿಯವರಾದ ಬಿರೇಶ್ವರ ಪುಟ್ಟಕ್ಕನವರ್, ನರೇಂದ್ರಸ್ವಾಮಿ, ಚಂದ್ರಚಾರಿ ರವರುಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ರವರು ಶ್ಲಾಘಿಸಿರುತ್ತಾರೆ.

LEAVE A REPLY

Please enter your comment!
Please enter your name here