ನಮ್ಮ ರಾಜ್ಯದ ಐತಿಹಾಸಿಕ ಪವಿತ್ರ ದೇವಸ್ಥಾನಗಳು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವುದು ಹೆಮ್ಮೆಯ ವಿಚಾರ. 10-14ನೇ ಶತಮಾನದಲ್ಲಿ ಹೋಯ್ಸಳರ ಆಡಳಿತದಲ್ಲಿ ಹಾಸನದ ಬೇಲೂರು-ಹಳೇಬೀಡು ಮತ್ತು ಮೈಸೂರು ಜಿಲ್ಲೆಯ ಸೋಮನಾಥಪುರ ದೇವಸ್ಥಾನಗಳಿಗೆ ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನಮಾನ ನೀಡಿದೆ.

ಬೇಲೂರಿನಲ್ಲಿರುವ ಚನ್ನಕೇಶವ ದೇವಸ್ಥಾನವನ್ನು 12ನೇ ಶತಮಾನದಲ್ಲಿ ರಾಜ ವಿಷ್ಣುವರ್ಧನ ಚೋಳರ ವಿರುದ್ಧದ ಗೆಲುವಿನ ಸ್ಮರಣಾರ್ಥ ಕಟ್ಟಿಸಿದ ದೇಗುಲವಾಗಿದೆ.

ಸಂಕೀರ್ಣವಾದ ಕೆತ್ತನೆಗಳು, ಸೂಕ್ಷ್ಮವಾದ ವಿವರವಾದ ಶಿಲ್ಪಗಳು ಮತ್ತು ನಕ್ಷತ್ರಾಕಾರದ ವಾಸ್ತುಶಿಲ್ಪದ ಶೈಲಿಯು ಹಳೇಬೀಡಿನಲ್ಲಿರುವ ಹೊಯ್ಸಳೇಶ್ವರ ದೇವಸ್ಥಾನದ ಪ್ರಧಾನ ಲಕ್ಷಣಗಳಾಗಿವೆ.

ಕಪ್ಪೆ ಚೆನ್ನಿಗರಾಯ ದೇವಸ್ಥಾನ, ವೀರನಾರಾಯಣ ದೇವಸ್ಥಾನ ಮತ್ತು ರಂಗನಾಯಕಿ ದೇವಸ್ಥಾನಗಳು ಬೇಲೂರಿನಲ್ಲಿರುವ ಇತರ ಹೊಯ್ಸಳರ ಪವಿತ್ರ ದೇವಸ್ಥಾನಗಳು.

LEAVE A REPLY

Please enter your comment!
Please enter your name here