ದಾವಣಗೆರೆ ಆ ೬
ನಮ್ಮ ದಲಿತ ಹೆಣ್ಣುಮಕ್ಕಳು ಓದುವುದೇ ಕಷ್ಟ
ಮನೆಯ ಪರಿಸ್ಥಿತಿ, ಆರ್ಥಿಕ ಅಡಚಣೆ ಸಾಮಾಜಿಕ
ಸಮಸ್ಯೆ ಗಳ ನಡುವೆ ಬಡತನ ನೋವು,ಆತಾಷೆಗಳ ಮೆಟ್ಟಿ ನಿಂತು ಛಲವಂತಳಾಗಿ ಕಾನೂನು ಪದವಿ ಗಳಿಸಿ
ನ್ಯಾಯವಾದಿಯಾಗಿ ಮಹಿಳೆಯರಲ್ಲಿ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರಲ್ಲಿ ಆತ್ಮವಿಶ್ವಾಸ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಶ್ಲಾಘನೀಯ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಸ್ಮರಿಸಿದರು.
ದಾವಣಗೆರೆ ಕೆಟಿಜೆ ನಗರದಲ್ಲಿ ಇದ್ದುಕೊಂಡೇ
ತಮ್ಮ ಶೋಷಿತ ಸಮುದಾಯಗಳ ನಡುವೆ ಬೆಳೆದ
ಹೆಮ್ಮೆಯ ಪ್ರತಿಭೆ ಗಾನ ಕೋಗಿಲೆ, ಕಾನೂನು ತಜ್ಞೆ
ಜಿಲ್ಲಾ ಗ್ರಾಹಕ ವೇದಿಕೆ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ರಾಗಿ ವಿಚಾರವಾದಿ,ಆಂಧೋಲನಗಾರ್ತಿ ಕೂಡ ಆಗಿದ್ದ ಶ್ರೀಮತಿ ಸುನಂದಾ ದುರುಗೇಶ್ ರವರ ನೆನಪು ನಿರಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚೆಗೆ ತಮ್ಮ ಅನಾರೋಗ್ಯ ನಿಮಿತ್ತ ಮೃತಪಟ್ಟ ಶ್ರೀಮತಿ ಸುನಂದಾ ದುರುಗೇಶ್ ರವರ ಇಂದು ಹದಡಿ ರಸ್ತೆ ಯು ಕೆ ಈ ಬಿ ಸಮುದಾಯ ಭವನ ದಲ್ಲಿ
ವಕೀಲ ವೃಂಧ ಹಾಗೂ ಬಂಧು ಬಳಗ ಹಮ್ಮಿಕೊಂಡಿದ್ದ ನೆನಪು ನಿರಂತರ ಕಾರ್ಯಕ್ರಮ
ತುಂಬಾ ಭಾವುಕ ಕ್ಷಣ ಗಳಲ್ಲೆ ಆರಂಭಗೊಂಡು
ಹಲವಾರು ನೆನಪುಗಳ ಮೆಲುಕು ಹಾಕುತ್ತಾ
ಇಷ್ಟು ಕಿರಿದಾದ ವಯಸ್ಸಿನಲ್ಲೂ ಹಿರಿದಾದ ಸಾಧನೆ ಮಾಡಿದ ಅವರ ಅಗಲಿಕೆ ಎಲ್ಲಾರ ಮುಖದಲ್ಲಿ
ವಿಷಾಧ ಛಾಯೇ ಎದ್ದು ಕಾಣುತ್ತಿತ್ತು.
ಗೌರವಾನ್ವಿತ ವಿಶ್ರಾಂತ ಮುಖ್ಯ ನ್ಯಾಯಾಧೀಶರು ಹಿಮಾಚಲಪ್ರದೇಶ ಎಲ್ ನಾರಾಯಣಸ್ವಾಮಿ ಅವರು
ತಾವು ದಾವಣಗೆರೆಗೆ ಬಂದಾಗಲೆಲ್ಲ ಸುಧಾ ಸುನಂದಾ ದುರುಗೇಶ್ ರವರು ತಪ್ಪದೆ ಭೇಟಿ
ಅವರ ಖಾಯಂ ಆರಂಭ ಗಾಯನ
ಶಿಸ್ತು ಸಂಯಮ, ವಿಧೇಯತೆ ಶೋಷಿತ ವರ್ಗದ ಸುನಂದಾ ಆ ಪರಿಸದಲ್ಲೆ ಅವರಜೊತೆ ವಾಸದ ಮನೆ
ಮಾಡಿ ಅವರಲ್ಲಿ ಅರಿವು ಮೂಡಿಸಲು ಹಲವು ಪ್ರಗತಿಪರ ಚಿಂತಕರ ವೇದಿಕೆ ಮೂಲಕ
ಮಹಿಳೆ ಯರ ಬದುಕು ಬವಣೆ ನೀಗಿಸಲು
ಧೈರ್ಯ ತುಂಬುವ ಕೆಲಸ ಶ್ಲಾಘನೀಯ
ಅವರಿಲ್ಲ ಎನ್ನುವುದೇ ಬಹು ಕಷ್ಟದ ಸಂಗತಿ
ಎಂದು ವಿಷಾದಿಸಿದರು.
ಚಿತ್ರದುರ್ಗ ನಾನ್ಯಾವ ಬುಧ್ಧ ಧಮ್ಮ ಉಪನ್ಯಾಸಕ ಫ್ರೋ ಸಿ.ಕೆ.ಮಹೇಶ್ , ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಹೆಗಡೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್ ಹೆಚ್ ಅರುಣ್ ಕುಮಾರ್, ನಿವೃತ್ತ ಲಾ ಕಾಲೇಜು ಪ್ರಾಂಶುಪಾಲ ಸೋಮಶೇಖರ್ ಮಾತನಾಡಿ ,ಸುನಂದ ರವರ ಪತಿ ವಕೀಲ ದುರುಗೇಶ್ ವೇದಿಕೆಯಲ್ಲಿ ದ್ದರು.
ನಡುವೆ ಸುನಂದಾ ಅವರ ಮಕ್ಕಳು ತಾಯಿ ಕುರಿತು ಭಾವಪರವಶರಾಗಿ ಹಾಡಿದ್ದು, ಸುನಂದಾ ಸಹೋದರ ಸಪ್ತಸ್ವರ ತಂಡದ ಗಾಯಕ ನಾಗೇಂದ್ರ
ಅಕ್ಕನನ್ನು ತಾಯಿರೂಪ ಕೊಂಡು ಕರುಳು ಹಿಂಡುವ
ಗೀತೆ ನೆರೆದಿದ್ದ ನೂರಾರು ಅವರು ಹಿತೈಷಿಗಳ, ಬಂಧುಗಳಲ್ಲಿ ಎದೆ ಭಾರ ತುಂಬಿ ಬಂದಂತಿತ್ತು
ಆರಂಭದಲ್ಲಿ ಸುನಂದ ರವರಿಗೇ ಸಂತಾಪ ಸೂಚಕ ನಂತರ ಪುತ್ರಿ ತನ್ಮಯ ಮತ್ತು ಅಪೂರ್ವ ಪ್ರಾರ್ಥನೆ ನಂತರ ಪ್ರಾಸ್ತಾವಿಕವಾಗಿ ದುರುಗೇಶ್ ಹಳೇಬೀಡು ರಾಮಪ್ರಸಾದ್ ಸ್ವಾಗತಿಸಿ
ವಕೀಲ ಡಿ ಪಿ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು ಕೊನೆಯಲ್ಲಿ ಮಂಜುನಾಥ್ ವಂದಿಸಿದರು.
(ವರದಿ: ಪುರಂದರ್ ಲೋಕಿಕೆರೆ)