ಕಲಬುರಗಿ: ಬಿಜೆಪಿಯ ಶಾಸಕರ ಆಪ್ತ ಸಹಾಯಕ. ಈಗ ಕರ್ನಾಟಕ ಕೇಂದ್ರೀಯ ವಿವಿ ಸಾರ್ವಜನಿಕರ ಸಂಪರ್ಕಾಧಿಕಾರಿ!
ನಿನ್ನೆಯವರೆಗೂ(ಏ.10) ವಿರೋಧ ಪರಿಷತ್ತಿನ ಮುಖ್ಯ ಸಚೇತಕ ಬಿಜೆಪಿಯ ಎನ್.ರವಿಕುಮಾರ್ ಆಪ್ತಸಹಾಯಕ. ಇಂದು ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ/ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಶುಕ್ರವಾರ (ಏ.10) ನಡೆದ ವಿಶ್ವವಿದ್ಯಾಲಯದ ಎಕ್ಸಿಕ್ಯುಟಿವ್ ಕೌನ್ಸಿಲ್ ನಲ್ಲಿ ಈ ಹುದ್ದೆಗೆ ಅನುಮೋದನೆ ಪಡೆದುಕೊಳ್ಳಲಾಗಿದೆ.
ಈ ಹುದ್ದೆಗೆ ಪತ್ರಿಕೋದ್ಯಮ ಹಾಗೂ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಆಡಿಟ್ ಬ್ಯುರೊ ಆಫ್ ಸರ್ಕ್ಯುಲೇಷನ್ ನಲ್ಲಿ (ಎಬಿಸಿ)ನೋಂದಾಯಿತ ಮಾಧ್ಯಮಗಳು ಹಾಗೂ ಜಾಹೀರಾತು ಏಜೆನ್ಸಿಯಲ್ಲಿ ಕನಿಷ್ಠ 6ವರ್ಷ ಕೆಲಸ ಮಾಡಿರಬೇಕು ಎಂಬ ವಿಶ್ವವಿದ್ಯಾಲಯದ ಅಧಿಸೂಚನೆಯನ್ನು ಉಲ್ಲಂಘಿಸಿ ಆಯ್ಕೆ ಸಮಿತಿಯು ಬಿಜೆಪಿ ಶಾಸಕರ ಆಪ್ತ ಸಹಾಯಕನ ನೇಮಕಕ್ಕೆ ಅನುಮೋದನೆ ನೀಡಿದೆ.
ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಹುದ್ದೆಯನ್ನು ಪಡೆಯಬೇಕಾದರೆ ಅಭ್ಯರ್ಥಿಗಳು ಸಂಬಂಧಿಸಿದ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪಡೆಯುವ ಅಗತ್ಯವಿಲ್ಲ. ಆರ್ ಎಸ್ ಎಸ್, ಎಬಿವಿಪಿ, ಬಿಜೆಪಿಯಲ್ಲಿ ಕೆಲಸ ಮಾಡಿದ್ದರೆ ಸಾಕು ಅವರು ನೇರವಾಗಿ ವಿಶ್ವವಿದ್ಯಾಲಯಗಳಲ್ಲಿ ಸುಲಭವಾಗಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಇದು ಮೋದಿಯ ವಿಕಸಿತ ಭಾರತದ ಮಾಡಲ್.
ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದು ಮಾಧ್ಯಮಗಳಲ್ಲಿ ಕೆಲಸ ಮಾಡಿದವರನ್ನು ಸಂದರ್ಶನದ ವೇಳೆ ಕೈಬಿಟ್ಟು ಸಂಘದ ಕಾರ್ಯಕರ್ತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಸಂದರ್ಶನಕ್ಕೆ ಹಾಜರಾಗಿದ್ದ ಐವರಲ್ಲಿ ಬಿಜೆಪಿ ಶಾಸಕರ ಆಪ್ತ ಸಹಾಯಕನು ‘ಅನರ್ಹ’ ಎಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಆಯ್ಕೆ ಸಮಿತಿಯ ಪರಿಣತರು ಹಾಗೂ ತಜ್ಞರ ತಂಡ ಅಭಿಪ್ರಾಯ ಪಟ್ಟಿದ್ದರೂ ಕೊನೆಗೂ ಸಂಘದ ಕಾರ್ಯಕರ್ತನಿಗೆ ಮಣೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಹಿಂದುಳಿದ ಹೈದರಾಬಾದ್ ಕರ್ನಾಟಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಎಐಸಿಸಿ ಅಧ್ಯಕ್ಷರೂ, ರಾಜ್ಯಸಭಾ ವಿರೋಧಪಕ್ಷದ ನಾಯಕರೂ ಆದ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ತಂದ ಕನಸಿನ ವಿಶ್ವವಿದ್ಯಾಲಯದಲ್ಲಿ ಈವರೆಗೆ ಕೇವಲ ಸಂಘದ ಚಟುವಟಿಕೆಗಳ ತಾಣವನ್ನಾಗಿ ಮಾಡಿಕೊಳ್ಳಲಾಗಿದೆ. ಈ ಹಿಂದೆ ನಡೆದ ಪ್ರಾಧ್ಯಾಪಕರ ಆಯ್ಕೆಯ ವೇಳೆಯೂ ಅಕ್ರಮಗಳನ್ನು ಎಸಗಲಾಗಿದ್ದು, ಫೇಕ್ ಪಿ ಎಚ್ ಡಿ ಪಡೆದವರು ಇಲ್ಲಿ ಪ್ರಾಧ್ಯಾಪಕರಾಗಿ ನೇಮಕಕೊಂಡಿದ್ದಾರೆ. ಈ ಎಲ್ಲ ಅಕ್ರಮ, ಹಗರಣಗಳೆಲ್ಲವೂ ಆಂಧ್ರಪ್ರದೇಶದ ಎಬಿವಿಪಿ ಗೌರವಾಧ್ಯಕ್ಷ, ಈಗಿನ ಸಿಯುಕೆ ಕುಲಪತಿ ಬಟ್ಟು ಸತ್ಯನಾರಾಯಣ ಅವಧಿಯಲ್ಲೇ ನಡೆದಿವೆ ಎಂಬುದು ಗಮನಾರ್ಹ.(ಕೃಪೆ:ಡಾ ಲಕ್ಷ್ಮಿಕಾಂತ್ ಸಿಂಗೆ ಫೇಸ್‌ಬುಕ್)





