ವಿಜಯಪುರ:ನೀರಾವರಿ ಕ್ರಾಂತಿಯ ಫಲಶೃತಿಯಿಂದಾಗಿ ಬಬಲೇಶ್ವರದ ರೈತ ಧರ್ಮಣ್ಣ ಬೀಳೂರ ಸಾಧನೆ ಮಲೇಶ್ಯಾವರೆಗೆ ಮೊಳಗಲಿದೆ.8,ಎಕರೆಗಳಲ್ಲಿ ದ್ರಾಕ್ಷಿ ಬೆಳೆ 12 ಎಕರೆಗಳಲ್ಲಿ ಒಣಗಿಸುವ ಕಾರ್ಯ ರೂ.1 ಕೋಟಿ 80 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ.
ವರ್ಷಗಳ ಹಿಂದೆ ವಿಜಯಪುರ ಜಿಲ್ಲೆ ಎಂದರೆ ಬಿಸಿಲಿಗೆ ಹೆಸರು ಪಡೆದಿತ್ತು. ಮಳೆಗಾಲದಲ್ಲೂ ಬೇಸಿಗೆಯಂತೆಯೇ ಕಹಿ ಅನುಭವ. ಸುಡು ಬಿಸಿಲು ಅಲ್ಲಿಯ ರೈತರ ಬದುಕನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು!ಅಂಥ ಸಮಯದಲ್ಲಿ ಸಿದ್ದರಾಮಯ್ಯ ನವರ ಸರ್ಕಾರದಲ್ಲಿ ಈ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವನಾಗಿ ಕೆರೆ ತುಂಬುವ ಯೋಜನೆಗಳು, ಬಾವಿ-ಬಾವಡಿಗಳ ಪುನಶ್ಚೇತನ, ಕೃಷಿ ಹೊಂಡಗಳ ನಿರ್ಮಾಣ, ಸೇರಿದಂತೆ ಹಲವಾರು ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸಹಕಾರದಿಂದ ಅನುಷ್ಠಾನಗೊಳಿಸುತ್ತಾ ಹೋದಂತೆ ರೈತರ ಬದುಕು ಹಸನಾಗತೊಡಗಿತು.
ಸುಡು ಬಿಸಿಲ ಈ ದಿನಗಳಲ್ಲು ಕೃಷಿ/ ತೋಟಗಾರಿಕೆ ಯಶಸ್ವಿಯಾಗುತ್ತಿರುವುದು ಸಂತಸ ತರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಬಬಲೇಶ್ವರದ ಪ್ರಗತಿಪರ ರೈತರಾದ ಶ್ರೀ ಧರ್ಮಣ್ಣ ಬೀಳೂರ ಅವರು ತಮ್ಮ 20 ಎಕರೆ ತೋಟದಲ್ಲಿ 8 ಎಕರೆಗಳಲ್ಲಿ ದ್ರಾಕ್ಷಿ ಬೆಳೆದಿದು ಉಳಿದ 12 ಎಕರೆಗಳಲ್ಲಿ ದ್ರಾಕ್ಷಿಯನ್ನು 12ಎಕರೆಗಳಲ್ಲಿ ಒಣಗಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಬಾರಿ ಬಂಪರ್ ಕ್ರಾಪ್ ಬಂದಿದ್ದು, ಸ್ಥಳೀಯವಾಗಿ ಮಾತ್ರವಲ್ಲದೆ ದೂರದ ಮಲೇಶ್ಯಾಕ್ಕೂ ರಫ್ತು ಮಾಡಲು ಸಿದ್ದತೆ ನಡೆಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಈ ರೈತ ಸುಮಾರು 1 ಕೋಟಿ 80 ಲಕ್ಷ ರೂಪಾಯಿಗಳ ಲಾಭದ ನಿರೀಕ್ಷೆಯಲ್ಲಿದ್ದಾರೆಂದು ಹೇಳಿದರು.
ಸೋಮವಾರ ತಮ್ಮನ್ನು ಭೇಟಿಮಾಡಿ ತಮ್ಮ ಯಶಸ್ವೀ ತೋಟಗಾರಿಕೆಯ ಕುರಿತು ರೈತ ತಿಳಿಸಿ, ತಾವು ಬೆಳೆದಿರುವ ದ್ರಾಕ್ಷಿಹಣ್ಣುಗಳನ್ನು ನೀಡಿದರು ಎಂದು ಮತ್ತು ಅವರ ಅಭಿಮಾನ ಹಾಗೂ ತೋರಿದ ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಅವರ ತೋಟಗಾರಿಕೆ ಇನ್ನಷ್ಟು ಯಶಸ್ವಿಯಾಗಲಿ ಎಂದು.ರೈತ ಧರ್ಮಣ್ಣ ಅವರ ಯಶೋಗಾಥೆ ಉಳಿದ ನಮ್ಮ ರೈತರಿಗೆ ಪ್ರೇರಣೆಯಾಗಲಿ, ಬಸವನಾಡು ಸದಾ ಸುಭಿಕ್ಷವಾಗಲಿ ಎಂದು ಹರಸಿದರು.





