ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭೆ ಸದಸ್ಯ ಸ್ಥಾನವು ಡಾಕ್ಟರ್ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವುಗೊಂಡಿದ್ದ ಕಾರಣ ಈ ಕ್ಷೇತ್ರದಲ್ಲಿ ಉಪ ಚುನಾವಣೆ ಘೋಷಣೆ ಆಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಟಿಕೇಟ್ ಗಾಗಿ ಬಣ ರಾಜಕಾರಣ ಮಾಡುತ್ತಾ ಕೊನೆಗೆ ಹೈಕಮಾಂಡ್ ಸೂಚಿಸಿದ ಅಭ್ಯರ್ಥಿ ಪರ ಪ್ರಚಾರಮಾಡಿ ಗೆಲ್ಲಿಸುವ ಹುಸಿನಗೆ ಬೀರುತ್ತ ಮಾಧ್ಯಮಗಳಿಗೆ ಒಲ್ಲದಮನಸ್ಸಿಂದ ಪ್ರತಿಕ್ರಿಯಿಸುತ್ತಾ ಹೊರನಡೆದಿದ್ದರ ಪರಿಣಾಮವಾಗಿ ಅಂತೂ ಇಂತೂ ಕುಂತಿಗೆ ಹೆರಿಗೆ ಆಯ್ತು ಎನ್ನುವ ಹಾಗೆ ಬಿಜೆಪಿ ಮತ್ತು ಕಾಂಗ್ರೆಸ್ ಹೈಡ್ರಾಮಕ್ಕೆ ಹೈಕಮಾಂಡ್ ಗಳು ಇತಿಶ್ರೀ ಹಾಕಿವೆ.
ಬಿಜೆಪಿಯ ಶ್ರೀನಿವಾಸ್ ದಾಸಕರಿಯಪ್ಪನವರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ತೋರಿಸಿದರೆ ಕಾಂಗ್ರೆಸ್ ಹೈಕಮಾಂಡ್ ಶಾಮನೂರು ವಂಶಕುಡಿ ಸಮರ್ಥ ಗೆ ಮಂಡಿಯೂರಿವ ಲಕ್ಷಣ ಕಂಡುಬರುತ್ತದೆ. ಎಂದು ಹೇಳಲಾಗುತ್ತದೆ.
ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತ ಹಾಗೂ ಶಾಮನೂರು ಕುಟುಂಬದ ಮಧ್ಯ ಟಿಕೇಟ್ ಪೈಪೋಟಿ ತೀವ್ರ ಗೊಂಡಿದ್ದರೂ ಸಹ ಅಂತಿಮವಾಗಿ ಶಾಮನೂರು ಕುಟುಂಬ ಟಿಕೇಟ್ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯತ್ತ ದಾಪುಗಾಲಿಟ್ಟಿದೆ.
ಅದೇ ಖುಷಿಯಲ್ಲಿ ದಿವಂಗತ ಶಾಮನೂರು ಶಿವಶಂಕರಪ್ಪನವರ ಸೊಸೆ ಸಂಸದೆ ಶ್ರೀಮತಿ ಡಾಕ್ಟರ್ ಪ್ರಭ ಮಲ್ಲಿಕಾರ್ಜುನ ರವರು ಇಂದು ಕಾರ್ಯಕರ್ತರೊಂದಿಗೆ ಚುನಾವಣಾ ಕಚೇರಿಗೆ ತೆರಳಿ ಪುತ್ರ ಸಮರ್ಥ ರವರಿಂದ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳ್ತಾ ತಮ್ಮ ಪುತ್ರನಿಂದ ಉಮೇದುವಾರಿಕೆಯನ್ನು ಕೊಡಿಸಿದ್ದಾರೆ.
ಕಾಂಗ್ರೆಸ್ ಅಲ್ಪಸಂಖ್ಯಾತರ ಮತಗಳಿಂದ ಬೀಗುತಿತ್ತು ಈ ಬಾರಿ ಅಲ್ಪಸಂಖ್ಯಾತರ ಆಯ್ಕೆ ಕಾಂಗ್ರೆಸ್ ಅಥವಾ ಪರೋಕ್ಷವಾಗಿ ಮತದಾನದಿಂದ ದೂರವಿದ್ದು ಅಥವಾ ಪಕ್ಷೇತರ ಪರ ಒಲವು ತೋರಿಸಿ ಬಿಜೆಪಿ ಗೆಲುವಿಗೆ ಸಹಕರಿಸುತ್ತದೆಯೋ ಅಥವಾ ಮಾಡು ಇಲ್ಲಾ ಮಡಿ ಎನ್ನುವಂತೆ ಅದೇ (ಕಾಂಗ್ರೆಸ್ ಪಕ್ಷದ) ಅಭ್ಯರ್ಥಿ ಸಮರ್ಥ ಗೆಲುವಿಗೆ ಶ್ರಮಿಸುತ್ತವೆಯೋ ಕಾದು ನೋಡಬೇಕಾಗಿದೆ.ಎಲ್ಲ ಎಡರು ತೊಡರುಗಳ ಮಧ್ಯೆ ಸಮರ್ಥ ಉಪಸಮರ ಅಕಾಡಕ್ಕೆ ದುಮುಕಿದ್ದಾರೆ ಈಜಿದಡ ಸೇರುವರೋ ಅಥವಾ ನಿಖಿಲ್ ಕುಮಾರ್ ಸ್ವಾಮಿಯವರ ಹಾಗೆ ನಿರಾಶೆಗೊಳ್ತಾರೋ ಇದಕ್ಕೆ ಮತದಾರರು ಏಪ್ರಿಲ್ 9,ರಂದು ತೆಗೆದುಕೊಳ್ಳುವ ನಿರ್ಧಾರದಮೇಲೆ ಶಾಮನೂರು ವರ್ಸ್ಸ್ ಅಲ್ಪಸಂಖ್ಯಾತರ ಮತಶಕ್ತಿ ತೀರ್ಮಾನಿಸುತ್ತದೆ.ಕಾಂಗ್ರೆಸ್ ವರ್ಸ್ ಬಿಜೆಪಿ ಎನ್ನುವ ಬದಲಾಗಿ ಸದ್ಯದ ಪರಿಸ್ಥಿತಿಯಲ್ಲಿ ಶಾಮನೂರು ವರ್ಸ್ಸ್ ಅಲ್ಪಸಂಖ್ಯಾತರ ಎನ್ನುವಂತಾಗಿದೆ.

LEAVE A REPLY

Please enter your comment!
Please enter your name here