ದಾವಣಗೆರೆ: ರಾಜ್ಯದಾದ್ಯಂತ ಪ್ರಸ್ತುತ ಬೇಸಿಗೆಯ ಬಿಸಿಗಿಂತ ಹೆಚ್ಚು ಬಿಸಿ ಬಿಸಿ ಚರ್ಚೆಯಲ್ಲಿರುವುದು ದಾವಣಗೆರೆ ದಕ್ಷಿಣ ವಿಧಾನಸಭೆಯ ಉಪಚುನಾವಣೆ.
ಹಿರಿಯ ಕಾಂಗ್ರೆಸ್ ನಾಯಕ ಡಾಕ್ಟರ್ ಶಾಮನೂರು ಶಿವಶಂಕರಪ್ಪನವರು ಇಷ್ಟು ವರ್ಷ ಪ್ರತಿನಿಧಿಸುತಿದ್ದ ದಾವಣಗೆರೆ ದಕ್ಷಿಣ ವಿಧಾನಸಭೆ ಸದಸ್ಯ ಸ್ಥಾನವು ಶಿವಶಂಕರಪ್ಪನವರ ನಿಧನದಿಂದ ತೆರವು ಆಗಿದ್ದು ಆ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದೆ.
ಚುನಾವಣಾ ವೇಳಾ ಪಟ್ಟಿಯಂತೆ ಮಾರ್ಚ್ 15 ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.ನಾಮಪತ್ರ ಸಲ್ಲಿಕೆಯು ಮಾರ್ಚ್ 16 ರಿಂದ ಪ್ರಾರಂಭವಾಗಿದ್ದು, ನಾಮಪತ್ರ ಸಲ್ಲಿಕೆಗೆ ಮಾರ್ಚ್ 23 ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆಯು ಮಾರ್ಚ್ 24 ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು ಕೊನೆಯ ಮಾರ್ಚ್ 26 ಕೊನೆಯ ದಿನವಾಗಿದೆ. ಮತದಾನವು ಏಪ್ರಿಲ್ 9 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ. ಚುನಾವಣಾಧಿಕಾರಿಗಳ ಕಚೇರಿಯು ಪಾಲಿಕೆ ಮುಖ್ಯ ಕಚೇರಿಯಲ್ಲಿದ್ದು ಇಲ್ಲಿಯೇ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತಿದೆ.
ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಅಹಿಂದ ಮತಗಳ ಸಂಖ್ಯೆ ಹೆಚ್ಚಾಗಿದ್ದರೂ ಸಹ ಹಿರಿಯ ರಾಜಕಾರಣಿ ಶಾಮನೂರು ಶಿವಕರಪ್ಪನರ ಮೇಲಿನ ಗೌರವಕ್ಕಾಗಿ ಅಹಿಂದ ವರ್ಗದ ಯಾವೊಬ್ಬರೂ ಕಾಂಗ್ರೆಸ್ ಮುಂಡರು ಈಕ್ಷೇತ್ರದ ಟಿಕೇಟ್ ಕೇಳುತ್ತಿರಲಿಲ್ಲಾ.ಇದಕ್ಕೆ ಕಾರಣ ಅಂದರೆ ಹಿರಿಯ ರಾಜಕಾರಣಿ ಶಿವಶಂಕರಪ್ಪನವರು ಇದು ನನ್ನ ಕೊನೆಯ ಚುನಾವಣೆ ಮುಂದಿನ ಬಾರಿ ಅಹಿಂದ ವರ್ಗಕ್ಕೆ ಟಿಕೇಟ್ ಕೊಡಿಸುವುದಾಗಿ ಹೇಳುತ್ತಲೇ ಚುನಾವಣೆಗಳಲ್ಲಿ ಗೆಲ್ಲುತ್ತಾ ಬಂದರು.ಇದರ ಬಗ್ಗೆ ಅಹಿಂದ ನಾಯಕರುಗಳಿಗೆ ಯಾವುದೇ ಅಸಮಾಧಾನವಿರಲಿಲ್ಲಾ.ಕಾರಣ ಇಷ್ಟೇ ಹಿರಿಯ ರಾಜಕಾರಣಿ ಮೇಲೆ ಗೌರವ ಮತ್ತು ಅವರು ಕೊಟ್ಟಮಾತಿನ ಮೇಲೆ ನಂಬಿಕೆಯಿಂದ.2028,ರ ಚುನಾವಣೆಯಲ್ಲಿ ಶಿವಶಂಕರಪ್ಪನವರು ಸ್ಪರ್ಧೆ ಮಾಡ್ತಿದ್ದರೋ ಅಥವಾ ಅಹಿಂದ ವರ್ಗಕ್ಕೆ ಬಿಟ್ಟು ಕೊಡ್ತಿದ್ದರೋ ಇಲ್ಲವೋ ಅವರಿಗೇಗೊತ್ತು.ಆದರೆ ಈಗ ಅವರಿಲ್ಲಾ ಅವರ ವಯೋಸಹಜ ನಿಧನದಿಂದಾಗಿ ತೆರವು ಆದ ದಕ್ಷಿಣ ವಿಧಾನಸಭೆಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ.
ಉಪ ಚುನಾವಣಾ ಸಿದ್ದವಾಗುತ್ತಿದ್ದಂತೆ ಅಲ್ಪಸಂಖ್ಯಾತರು ಈ ಕ್ಷೇತ್ರದಲ್ಲಿ ಹೆಚ್ಚುಮತದಾರರಿದ್ದೇವೆ ಇಲ್ಲಿಯವರೆಗೆ ಕಾಂಗ್ರೆಸ್ ಬೆಂಬಲಿಸುತ್ತಾ ಬಂದ ನಮಗೆ ಈ ಬಾರಿ ಟಿಕೇಟ್ ಬೇಕೆಂದು ಒಗ್ಗಟ್ಟಿನ ಮಂತ್ರ ಜಪಿಸುತ್ತಾ ಇಲ್ಲಿಯವರೆಗೆ ಶಾಮನೂರು ಕುಟುಂಬದ ವಿರುದ್ಧ ದ್ವನಿ ಎತ್ತದೇ ಇರುವ ಅಲ್ಪ ಸಂಖ್ಯಾತರು ಶಾಮನೂರು ಕುಟುಂಬದ ವಿರುದ್ಧತೊಡೆ ತಟ್ಟಿದರೆಂದೇ ಹೇಳಬಹುದು ಆ ರೀತಿ ವರ್ತನೆಗಳು ಕಂಡುಬಂದವು.ಆದರೆ ಶಾಮನೂರು ಶಿವಶಂಕರಪ್ಪನವರ ಪುತ್ರ ದಾವಣಗೆರೆ ಉತ್ತರ ವಿಧಾನಸಭೆ ಕ್ಷೇತ್ರದ ಶಾಸಕರು ಹಾಗೂ ಗಣಿ ಮತ್ತು ಭೂವಿಜ್ಞಾನ ಖಾತೆ ಹಾಗೂ ಜಿಲ್ಲಾ ಉಸ್ತುವಾರಿಸಚಿವರೂ ಆದ ಎಸ್ ಎಸ್.ಮಲ್ಲಿಕಾರ್ಜುನ್ ರವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಯಲುಶೀಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಹೆಚ್ ಬಿ.ಮಂಜಪ್ಪ ನವರನ್ನು ಮುಂದೆ ಬಿಟ್ಟು ವೀಕ್ಷಕರು ಬಂದಾಗ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವಂತೆ ಫಾರ್ಮಾಲಿಟಿ ಹೈಡ್ರಾಮಾ ಪಾಲಿಸಿ ತನ್ನ ಮಗ ಸಮರ್ಥನಿಗೆ ಟಿಕೇಟ್ ಕೊಡಿಸುವಪ್ರಯತ್ನದಲ್ಲಿ ಯಶಸ್ವಿಯಾಗಿ ದಾಪುಗಾಲುಇಡುತಿದ್ದಾರೆ.
ಸಮರ್ಥ ಏನೂ ರಾಜಕೀಯವಾಗಿ ಸಮರ್ಥ ಅಭ್ಯರ್ಥಿ ಅಲ್ಲದಿದ್ದರೂ ಅವರಿಗೆ ತಾತ ದಿವಂಗತ ಶಾಮನೂರು ಶಿವಶಂಕರಪ್ಪನವರ ಆಶಿರ್ವಾದ,ಸಂಸದೆ ತಾಯಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ರವರ ಹಾರೈಕೆ,ತಂದೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ರವರ ಕೃಪಾಶಿರ್ವಾದ ಎಲ್ಲದಕ್ಕೂ ಹೆಚ್ಚಾಗಿ ಹಣ ಬಲ,ಜಾತಿ ಬಲ ಹೇರಳವಾಗಿದೆ ಎಂದೇ ಹೇಳಬಹುದು.
ಎಸ್ ಎಸ್ ಮಲ್ಲಿಕಾರ್ಜುನ್ ರವರು ತಮ್ಮ ಪುತ್ರ ರಾಜಕೀಯವಾಗಿ ಸಮರ್ಥ ಅಲ್ಲದಿದ್ದರೂ ಗೆದ್ದೇ ಗೆಲ್ಲುತ್ತಾನೆಂಬ ಆತ್ಮ ವಿಶ್ವಾಸ ಇದ್ದೇ ಇದೆ.ಅದರ ಹಿಂದೆ ಅಗೋಚರವಾದ ಮೈತ್ರಿ ಮಹಿಮೆ!!ಇದು ಬಹಳ ಜನರಿಗೆ ಅರ್ಥ ವಾಗದೆಇರಬಹುದು ಸೂಕ್ಷ್ಮವಾಗಿ ರಾಜಕೀಯ ಅನುಭವ ಇದ್ದವರಿಗೆ ಅರ್ಥ ಆಗದೇ ಇರದು.ದೇವೆಗೌಡರು ಮತ್ತು ಯಡಿಯೂರಪ್ಪ ನವರು ವಯಕ್ತಿಕವಾಗಿ ರಾಜಕೀಯವಾಗಿ ಒಡಂಬಡಿಕೆಯಲ್ಲಿದ್ದಾರೆಂಬುವುದಕ್ಕೆ ಸಾಕಷ್ಟು ಉಧಾಹರಣೆಗಳಿವೆ. ನಿಮಗೆಲ್ಲಾ ಗೊತ್ತಿರುವಹಾಗೆ ಕಳೆದ ಲೋಕಸಭೆ ಚುನಾವಣಾ ಸಮಯದಲ್ಲಿ ಡಾಕ್ಟರ್ ಶಾಮನೂರು ಶಿವಶಂಕರಪ್ಪನವರು ಶಿವಮೊಗ್ಗದಲ್ಲಿಯ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿವೈ.ರಾಘವೇಂದ್ರ ಗೆಲ್ಲಿಸುವಂತೆ ಕ್ಲೂ ಕೊಟ್ಟು ಬಂದಿದ್ದರು.ಅದೇರೀತಿಯಲ್ಲಿ ದಾವಣಗೆರೆ ಲೋಕಸಭೆಗೆ ಫ್ರಭ ಮಲ್ಲಿಕಾರ್ಜುನ ರವರಿಗೆ ಪರೋಕ್ಷ ಬೆಂಬಲ ಯಡಿಯೂರಪ್ಪ ನವರದಿತ್ತೆಂದು ಅನುಮಾನಗಳಿದ್ದವು.ಈಗಲೂ ಕೂಡಾ ಚುನಾವಣಾ ವಣೆಗೂ ಮುಂಚೆ ಯಡಿಯೂರಪ್ಪ ನವರು ದಾವಣಗೆರೆಯ ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅನುಮಾಡಿಕೊಟ್ಟು ಗೊಂದಲಗಳ ಹೇಳಿಕೆಗಳು ಸ್ವಪಕ್ಷದಲ್ಲಿ ಪರ ವಿರೋಧ ಹೇಳಿಕೆ ಪ್ರತಿಹೇಳಿಕೆಗಳು ಕಾರ್ಯಕರ್ತರಲ್ಲಿ ಕೇಳಿಬಂದವು.ಇಂಥ ಸಂದರ್ಭಗಳಲ್ಲಿ ರೇಣುಕಾಚಾರ್ಯರವರು ಎಸ್ ಎಸ್ ಮೀಟ್ ಗಮನಿಸಬಹುದು ಇದರ ಅರ್ಥ ವೂ ಅಷ್ಟೆ ಶಾಮನೂರು ಕುಟುಂಬಕ್ಕೆ ಕಾಂಗ್ರೆಸ್ ಟಿಕೇಟ್ ಕೊಡದಿದ್ದರೆ ಬಿಜೆಪಿಯಿಂದ ಎಂಬ ರಾಜಕೀಯಬಲದ ಕ್ಲೂ ಎಂದೇ ಹೇಳಬಹುದು.ಎಲ್ಲಕಿಂತ ಹೆಚ್ಚಾಗಿ ದೇವೆಗೌಡರಾಗಲಿ,ಯಡಿಯೂರಪ್ಪನವರಾಗಲಿ ಶಾಮನೂರು ಕುಟುಂದ ವಿರುದ್ಧ ತೊಡೆತಟ್ಟಿ ರಾಜಕಾರಣ ಮಾಡದಿರುವುದು ಗುಟ್ಟಾಗಿಯೇನೂ ಇಲ್ಲಾ. ಹಾಗಾಗಿ ದಾವಣಗೆರೆಯಲ್ಲಿ ರಾಜಕೀಯ ಪ್ರಮುಖ ಮುಖಂಡರುಗಳ ಒಳ ಒಪ್ಪಂದ ಕ್ಕೆ ಯಾವಭಂಗವೂ ಇಲ್ಲದೆ ಸಾರಾಗವಾಗಿಯೇ ಸಾಗಿದೆ ಈ ಆತ್ಮಬಲ ಎಸ್ ಎಸ್ ಮಲ್ಲಿಕಾರ್ಜುನ ರವರಿಗೆ ಮಗನನ್ನ ಶಾಸಕನಾಗಿಸಲು ಹೆಚ್ಚಿದೆ ಎಂದರೂ ತಪ್ಪಾಗದು.
ಎಸ್ ಎಸ್.ಪಡೆಯ ಕಾರ್ಯತಂತ್ರ ಮತ್ತು ಪ್ರತಿ ವಾರ್ಡ್ ಗಳಲ್ಲಿ ಕೆಲಸಮಾಡುತ್ತದೆ.ಸಣ್ಣ,ಸಣ್ಣ ಸಮುದಾಯದ ದೊಡ್ಡದೊಡ್ಡ ಕಾರ್ಯಕ್ರಮಗಳ ಯಶಸ್ವಿಯ ಹಿಂದೆ ಎಸ್ ಎಸ್ ಆರ್ಥಿಕ ಸಹಾಯ ಸಹಕಾರ ಬಹಳ ಇದೆ.ಬೇರೆಯವರನ್ನು ಇಂಥ ಸಮುದಾಗಳು ಬೆಂಬಲಿಸಿದರೆ ಅವರ ಸಮಾಜದ ಕೆಲಸ ಕಾರ್ಯಕ್ರಮಗಳು ಕುಡಿಯುವ ನೀರಿಗೂ ಪರದಾಡಬೇಕಾಗಬಹುದುದಾದ ಪರಿಸ್ಥಿತಿ ಬರುತ್ತದೆ.ಬೇರೆ ರಾಜಕೀಯ ಮುಖಂಡರು ಸ್ವ ಹಿತಾಶಕ್ತರು ನಾಯಿಮೊಲೆಯೊಳಗಿನ ಹಾಲಿನಂತೆ ಹಾಗಾಗಿ ಅಭ್ಯರ್ಥಿ ಅ ಸಮರ್ಥ ಆಗಿದ್ದರೂ ಸಹ ಮೈತ್ರಿ ಅಭಯಮಾತ್ರ “ಹಸ್ತ” ಅವರವರಭಾವಕ್ಕೆ ಅವರು ಅರ್ಥೈಸಿಕೊಳ್ಳಬಹುದು.
ಎಸ್ ಕೆ.ಒಡೆಯರ್ ಪತ್ರಕರ್ತ.





