ಬಾಗಲಕೋಟೆ:ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಅಮಿನಗಡ ಹೋಬಳಿಯ ಉಪನಾಳ ಎಸ್ ಸಿ.ಗ್ರಾಮದ ರಿ.ಸ.ನಂಬರ 24 ಎಕರೆ ಜಮೀನಿನಲ್ಲಿ ಸರಕಾರಿ ಯೋಜನೆಯಡಿ ರೈತರಿಗೆ ತಿಳಿಸದೆ ಜೆ.ಇ.ಯವರು ತಪ್ಪಾಗಿ ಸರ್ವೆ ಮಾಡಿದ್ದು ಈ ಸರ್ವೆಯಲ್ಲಿ ಸ್ಥಳ ಪರಿಶೀಲನೆ ಮಾಡದೇ ಅನುಮೋದನೆ ಮಾಡಿ ರೈತರ ಜಮೀನಿನಲ್ಲಿ ಈ ಯೋಜನೆಯ ಕಾಮಗಾರಿ ಪ್ರಾರಂಭಿಸಿದಾಗಿನಿಂದ ಎಲ್ಲ ರೈತರು ಅಡ್ಡಿಪಡಿಸಿ ತಕರಾರು ಮಾಡಿದರೂ ಕೇಳದೆ ಮಾಡಿರುವ ಕಾಮಗಾರಿಯಿಂದ ನೀರು ಅಡ್ಡಾತಿಡ್ಡಿ ಕೊಚ್ಚಿ ಹೋಗಿರುತ್ತದೆ ಎಂದು ರೈತರು ವಿರೋಧ ವ್ಯಕ್ತ ಪಡಿಸಿದರೂ A.W… ಹಾಗೂ ಕಾಂಟಾಕರ ರೈತರನ್ನು ಹೆದರಿಸಿ ಬೇದರಿಸಿ ಕಾಮಗಾರಿಯನ್ನು ಮುಂದುವರಿಸಿದ್ದಾರೆ. ಈ ಕಾಮಗಾರಿ ಸುರು ವಾದಾಗಿನಿಂದ ಅಲ್ಲಿ ನೀರು ರೈತರ ಹೊಲಗಳಲ್ಲಿ ನುಗ್ಗಿ ಜಮೀನಿನಲ್ಲಿ ಹಾಯ್ದು ಹೋಗುತ್ತಿದ್ದು ಆ ಜಮೀನಿನ ಬೆಳೆ ಹಾಗೂ ಫಲವತ್ತತೆ ಮಣ್ಣು ಕೊಚ್ಚಿಕೊಂಡು ಹೋಗಿರುತ್ತದೆ. ಈ ಹಾನಿಯನ್ನು ರೈತರಿಗೆ ಪರಿಹಾರ ಕೊಡಬೇಕು ಮತ್ತು ಕಾಮಗಾರಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಹಾಗೆಯೇ ಕಾಮಗಾರಿ ಮಾಡದೇ ಬೋಗಸ್ ಬಿಲನ್ನು ಮಾಡಿದ್ದಾರೆ

AW. ಇತರೇ ಸಂಭಂದಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಅಕಸ್ಮಾತ ಇವರನ್ನು ಅಮಾನತ್ ಮಾಡದೇ ಕಾಂಟಾಸ್ಕರ ಲಾಯಿಸನ್ನೆನ್ನು ರದ್ದು ಮಾಡದಿದ್ದರೆ ರೈತರಿಗೆ ಪರಿಹಾರ ನೀಡದಿದ್ದರೆ, ಸರಕಾರದ ಹಣವನ್ನು ವ್ಯರ್ಥವಾಗಿ ಸರಕಾರದ ಹಣವನ್ನು ಖರ್ಚುಮಾಡಿ ಸರ್ಕಾರದ ಬೊಕ್ಕಸಕ್ಕೆ, ಹಾನಿಯನ್ನುಂಟು ಮಾಡಿರುತ್ತಾರೆ. ಈ ಹಾನಿಯನ್ನು ಮರಳಿ ತುಂಬಿಸತಕ್ಕದ್ದು ಒಂದು ವೇಳೆ ಈ ಮನವಿ ಪುರಸ್ಕರಿಸಿ ರೈತರ ಬೇಡಿಕ ಇಡೇರಿಸದಿದ್ದರೆ ದಿನಾಂಕ 10-03-2026ರಂದು ಉಗ್ರ ಹೋರಾಟದೊಂದಿಗೆ ಅನಿರ್ದಿಷ್ಟ ಅವಧಿ ಸತ್ಯಾಗ್ರಹವನ್ನು ಕರ್ನಾಟಕ ರೈತ ಸಂಘ (ರಿ)ಯ ಹುನಗುಂದ ಇಲಕಲ್ಲ ತಾಲೂಕಾ ಅಧ್ಯಕ್ಷರಾದ ಶ್ರೀ ಹುಲ್ಲಪ್ಪ ಪೂಜಾರ ಇವರ ನೇತೃತ್ವದಲ್ಲಿ ರೈತಪರ ದಲಿತವರ ಸಂಘಟನೆಗಳ ಬೆಂಬಲದೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು. ಆದ್ದರಿಂದ ಮಾನ್ಯ ತಹಶೀಲ್ದಾರ ಸಾಹೇಬರು ಈ ಕಾಮಗಾರಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ಹಾನಿ ತಪ್ಪಿಸಬೇಕಾಗಿ ಮನವಿ ಮಾಡಿದ್ದಾರೆ.






