ಬೆಂಗಳೂರು:ರೈತರ ಹೆಸರಿನಲ್ಲಿ ಇಂಧನ ಇಲಾಖೆಯು ತನ್ನ ಅವ್ಯವಹಾರ ಸಾಲ ಹಾಗೂ ಹೆಚ್ಚಿನ ಅನವಶ್ಯಕ ಕಾಮಗಾರಿಗಳ, ಆಡಳಿತ ಮಂಡಳಿ ಖರ್ಚು ವೆಚ್ಚ, ದುಂದುವೆಚ್ಚ ಕಡಿಮೆ ಮಾಡದೇ ಎಲ್ಲಾ ನಷ್ಟವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ ಇಂಧನ ಸಚಿವರು ಕಾರ್ಯಪ್ರವೃತ್ತರಾಗಿರುವುದು ಅನುಮಾನಗಳು ಮೂಡುತ್ತಿವೆ.
ಇಂಧನ ಇಲಾಖೆ ಕೆಪಿಟಿಸಿಎಲ್ ಹಾಗೂ ಎಸ್ಕಾಮ್ ಗಳು ಈಗ ರೈತರ ಪಂಪ್ ಸೆಟ್ ಬಳಕೆ ಎಂದು ಹೇಳಿ ತಮ್ಮ ಇಲಾಖೆಗಳ ಅವ್ಯವಹಾರ ಮುಚ್ಚುವ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಕೇಳಿಬರುತ್ತಿದೆ. ಆದರೆ ರೈತರ ಮಳೆ ಗಾಳಿಗೆ ವಿದ್ಯುತ್ ನೀಡದೆ ಹಾಗೂ ಮಳೆ ಇರುವ ಪಂಪ್ ಸೆಟ್ ವಿದ್ಯುತ್ ಬಳಕೆ ಬೇಸಿಗೆ ಕಾಲದಲ್ಲಿ ಇರುವ ವಿದ್ಯುತ್ ಬಳಕೆ ಪ್ರಮಾಣ ಒಂದೇ ಎಂದು ತೋರಿಸಿ ಸರ್ಕಾರಕ್ಕೆ ಸುಳ್ಳು ಲೆಕ್ಕ ತೋರಿಸಿ ರೈತರ ಮೇಲೆ ಗೂಬೆ ಕೂರಿಸಿ ತಮ್ಮ ಇಲಾಖೆಯ ಅವ್ಯವಹಾರ ಮುಚ್ಚುವ ನಿರ್ಧಾರ ಮಾಡುತಿದ್ದಾರೆ. ಆದ್ದರಿಂದ ಇದರ ಬಗ್ಗೆ ಸಂಪೂರ್ಣ ಲೆಕ್ಕ ಪರಿಶೋಧಕರು, ತಜ್ಞರು, ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳು ಕೈಗೊಳ್ಳಬೇಕು.

LEAVE A REPLY

Please enter your comment!
Please enter your name here