ನಾರಾಯಣಸ್ವಾಮಿಯವರೇ ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪವರಿಸುವ ಮಾತನ್ನು ಬಿಟ್ಟು ಮೊದಲು ನೀವು ನಿಜವಾಗಿಯೂ ಒಳ ಮೀಸಲಾತಿ , ಪರವಾಗಿದ್ದೀರಾ ಅಥವಾ ಬಿಜೆಪಿ ಪರವಾಗಿದ್ದಿರೋ ತಿಳಿಸಿ??
ನಿಮ್ಮ ಮುಂದೆ ಮೈಕ್ ಇದ್ದಾಗ ಪತ್ರಿಕಾಗೋಷ್ಠಿಕರದಾಗ ಮಾಧ್ಯಮದ ಸ್ನೇಹಿತರು ನಿಮ್ಮ ಮುಂದೆ ನಿಂತಾಗ ನಿಮ್ಮಗೆ ಒಂದು ರೀತಿ ಉತ್ಸಾಹ ಉಕ್ಕಿ ಬಂದುಬಿಡುತ್ತೆ ಈ ಉಕ್ಕಿದ ಉತ್ಸಾಹದಲ್ಲಿ ರಾಜ್ಯದ ಜನರನ್ನು ಗೊಂದಲಕೀಡು ಮಾಡುವುದೇ ನಿಮ್ಮ ಮೊದಲ ಆದ್ಯತೆ!!
ಒಳ ಮೀಸಲಾತಿ ಪರವಾಗಿ ವರ್ಷಾನುಗಟ್ಟಲೆ ಹೋರಾಟ ಮಾಡಿದವರ ಜೊತೆ
ಆ ಹೋರಾಟಗಳಲ್ಲಿ ನೀವು ಯಾವತ್ತಾದರೂ ಪಕ್ಷಾತೀತವಾಗಿ ಗುರುತಿಸಿಕೊಂಡಿದ್ದೀರಾ?? ಯಾವ ನೈತಿಕತೆ ಇದೆ ನಿಮಗೆ ಈ ಬಗ್ಗೆ ಮಾತಾಡೋಕೆ ??
ಸ್ವಾರ್ಥಕ್ಕಾಗಿ ಅಧಿಕಾರಕ್ಕಾಗಿ ನಿಮ್ಮ ಆಸೆ ಆಕಾಂಕ್ಷೆಗಳಿಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಂದಿಗೂ ಒಪ್ಪದ ಸಿದ್ಧಾಂತವನ್ನು ನೀವು ಅಪ್ಪಿಕೊಂಡಾಗಲೇ ಗೊತ್ತಾಯಿತು ನಿಮ್ಮ ಅಸಲಿ ಮುಖವಾಡ ಪದೇ ಪದೇ ಒಳ ಮೀಸಲಾತಿ,
ಮೀಸಲಾತಿಯ ಬಗ್ಗೆ ನೀವು ಮಾತನಾಡುವುದು ನಿಮ್ಮ ಲಾಭಕ್ಕಾಗಿ ವಿನಃ ಜನರಿಗಾಗಿ ಅಲ್ಲ(ಸಂಜೀವ್ ಕುಮಾರ್)
Home ಸಾರ್ವಜನಿಕ ಧ್ವನಿ ಪದೇ ಪದೇ ಒಳ ಮೀಸಲಾತಿ,ಮೀಸಲಾತಿಯ ಬಗ್ಗೆ ನೀವು ಮಾತನಾಡುವುದು ನಿಮ್ಮ ಲಾಭಕ್ಕಾಗಿ ವಿನಃ ಜನರಿಗಾಗಿ ಅಲ್ಲ:ಸಂಜೀವ್...





