ಬೆಂಗಳೂರು:
ನಾಡಿನ ಮನೆಮಾತಾಗಿರುವ, ಐದು ಸಾವಿರಕ್ಕೂ ಅಧಿಕ ಸಂಚಿಕೆಗಳ ಪ್ರಸಾರ ಕಂಡು ಗಿನ್ನೆಸ್ ಸೇರಿ ಹಲವು ದಾಖಲೆಗಳನ್ನು ನಿರ್ಮಿಸಿರುವ ದೂರದರ್ಶನ ಚಂದನವಾಹಿನಿಯ “ಥಟ್ ಅಂತ ಹೇಳಿ” ರಸ ಪ್ರಶ್ನೆ ಕಾರ್ಯಕ್ರಮದ ಐದು ಸಂಚಿಕೆಗಳು ಮಾರ್ಚ್ 4 ರ ಬುಧವಾರ ಬೆಳಿಗ್ಗೆಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇಲ್ಲಿ ಚಿತ್ರೀಕರಣ ನಡೆಯಿತು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಡಾ. ನಾ. ಸೋಮೇಶ್ವರ್ ಅವರು ಪ್ರೆಸ್ ಕ್ಲಬ್ ನಲ್ಲಿ ವಿಶೇಷ ಸಂಚಿಕೆಗಳ ನಿರೂಪಣೆ ಮಾಡಿದರು. ಪ್ರೆಸ್ ಕ್ಲಬ್ ನ ಅಧ್ಯಕ್ಷರಾದ ಆರ್. ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂ.ನ. ಜಿಲ್ಲಾಧ್ಯಕ್ಷರಾದ ಸೋಮಶೇಖರ ಗಾಂಧಿ, ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಗೌಡ್ರು, ಎಎನ್ಐ ಸುದ್ದಿಸಂಸ್ಥೆ ಕರ್ನಾಟಕ ಮುಖ್ಯರಾದ ಮಧು, ರಾಷ್ಟ್ರೀಯ ವಾಹಿನಿಯ ರಾಘವ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.





