ಇರಾನಿನ ಅಧ್ಯಕ್ಷ ಖಮೇನಿ ಅವರ ಹತ್ಯೆಯನ್ನು ಎರಡು ಕಾರಣಗಳಿಗಾಗಿ ಚರ್ಚೆಗೆತ್ತಿಕೊಳ್ಳಬಹುದು. 1. ತನ್ನ ನಿವಾಸವನ್ನು ಇಸ್ರೇಲ್ ಮತ್ತು ಅಮೆರಿಕ ಗುರಿ ಮಾಡಬಹುದು ಅನ್ನುವುದು ಸ್ಪಷ್ಟವಾಗಿ ಗೊತ್ತಿದ್ದರೂ ಅವರು ಸಾವನ್ನು ಭಯಪಡದೆ ಮತ್ತು ಸವಾಲಿಗೆ ಬೆನ್ನು ಹಾಕಿ ಓಡದೆ ತನ್ನ ನಿವಾಸದಲ್ಲೇ ಉಳಿದುಕೊಂಡರು. ಇದು ಅವರಲ್ಲಿರುವ ಧೈರ್ಯ, ದೇಶಪ್ರೇಮ ಮತ್ತು ಅವರೊಳಗಿನ ಪ್ರಾಮಾಣಿಕತೆಯ ಬಗ್ಗೆ ಅವರಿಗಿರುವ ದೃಢ ವಿಶ್ವಾಸವನ್ನು ಸೂಚಿಸುತ್ತದೆ. ತಾನು ಸಾವಿಗೀಡಾದರೆ ಇರಾನ್ ನಲ್ಲಿ ಅರಾಜಕತೆ ಉಂಟಾದೀತು, ನಾಯಕತ್ವದ ಶೂನ್ಯತನ ಉಂಟಾದೀತು ಎಂಬ ಆಲೋಚನೆಯನ್ನೇ ಅವರು ಮಾಡಿಲ್ಲ ಎಂಬುದೇ ಅವರು ತನ್ನ ಉತ್ತರಾಧಿಕಾರಿಗಳನ್ನು ಮತ್ತು ತನ್ನಂತಹ ಇನ್ನಿತರ ನಾಯಕರನ್ನು ಸೃಷ್ಟಿಸಿದ್ದಾರೆ ಅನ್ನೋದನ್ನು ಸೂಚಿಸುತ್ತದೆ. ಅವರಿಲ್ಲದ ಇರಾನ್ ಶೂನ್ಯವಾಗುವುದಿಲ್ಲ ಮತ್ತು ಸಮರ್ಥ ನಾಯಕರು ಇನ್ನೂ ಇದ್ದಾರೆ ಎಂಬ ವಿಶ್ವಾಸವನ್ನು ತಾಳಿದಾಗ ಮಾತ್ರ ಓರ್ವ ನಾಯಕ ಸಾವಿಗೆ ಎದುರುಗೊಳ್ಳುವ ಧೈರ್ಯವನ್ನು ಮಾಡುತ್ತಾರೆ. ಖಾಮಿನಾಯ್ ಅವರ ನಿಲುವಿನಲ್ಲಿ ಆ ಧೈರ್ಯ ಕಾಣಿಸುತ್ತದೆ.

  1. ಭಾರತದಲ್ಲಿ ಒಂದು ಸಣ್ಣ ಸಂಖ್ಯೆಯ ಮಂದಿ ಅವರ ಸಾವನ್ನು ಸಂಭ್ರಮಿಸುತ್ತಿದ್ದಾರೆ. ಇದು ಅಸಹಜ ಅಲ್ಲ. ಯಾವಾಗಲೂ ಎಲ್ಲ ದೇಶಗಳಲ್ಲೂ ಇಂತಹದೊಂದು ಗುಂಪು ಇದ್ದೇ ಇರುತ್ತದೆ. ಇದಕ್ಕೆ ಇರಾನ್ ಮತಾಂಧ ರಾಷ್ಟ್ರವಾಗಿತ್ತು ಮತ್ತು ಮಹಿಳೆಯರಿಗೆ ಹಕ್ಕು ನಿರಾಕರಿಸಿದ ದೇಶವಾಗಿತ್ತು ಎಂಬ ಕಾರಣವನ್ನು ಅವರು ಕೊಡುತ್ತಾರೆ. ಆದರೆ ಮಹಿಳೆಯರ ಹಕ್ಕುಗಳನ್ನೆಲ್ಲ ಕಿತ್ತುಕೊಂಡ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಆಫ್ಘಾನಿಸ್ತಾನಕ್ಕೆ ನಮ್ಮದೇ ರಾಷ್ಟ್ರ ತನ್ನ ಬಜೆಟ್ಟಿನಲ್ಲಿ ನೆರವನ್ನು ಘೋಷಿಸುವುದನ್ನು ಮತ್ತು ಅಲ್ಲಿನ ವಿದೇಶಾಂಗ ಸಚಿವರಿಗೆ ರೆಡ್ ಕಾರ್ಪೆಟ್ ಸ್ವಾಗತ ಕೋರಿರುವುದನ್ನು ಜಾಣತನದಿಂದ ಮರೆಮಾಚುತ್ತಾರೆ. ಈ ಹಿಪಾಕ್ರಸಿಯ ಆಚೆಗೆ ನೋಡುವುದಾದರೆ, ಇರಾನ್ ಎಂದು ಕೂಡ ಭಾರತ ವಿರೋಧಿ ಆಗಿರಲಿಲ್ಲ. ಖಾಮಿನಾಯ್ ಎಲ್ಲೂ ಕೂಡ ಭಾರತದ ವಿರುದ್ಧ ನಿಂತೂ ಇರಲಿಲ್ಲ. ಭಾರತದಿಂದ ಅಕ್ಕಿಯನ್ನು ಖರೀದಿಸಿ ಅಗ್ಗದ ದರದಲ್ಲಿ ತೈಲವನ್ನು ಸರಬರಾಜು ಮಾಡುತ್ತಿದ್ದ ಏಕೈಕ ರಾಷ್ಟ್ರ ಇರಾನ್. ಸಿಂಧೂ ನದಿಯ ನಾಗರಿಕತೆಯ ಜೊತೆ ಇರಾನಿನ ವಲಸೆಗೆ ಸಂಬಂಧ ಇದೆ ಎಂದು ಹೇಳಲಾಗುತ್ತದೆ. ಇರಾನಿನಿಂದ ವಲಸೆ ಬಂದವರು ದ್ರಾವಿಡರ ಜೊತೆ ಹೋರಾಡಿ ಸೃಷ್ಟಿಯಾದ ನಾಗರಿಕತೆಯನ್ನೇ ಸಿಂಧೂ ನಾಗರಿಕತೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಈ ಖಾಮಿನಾಯ್ ಅವರಿಗೂ ಭಾರತೀಯರಿಗೂ ರಕ್ತ ಸಂಬಂಧ ಇದೆ ಎಂದೂ ಹೇಳಬಹುದು. ಇರಾನಿನ ಅಣುಸ್ಥಾವರದ ಮೇಲೆ ಬಾಂಬ್ ಹಾಕಿ ನಿಷ್ಕ್ರಿಯಗೊಳಿಸಿದ್ದೇನೆ ಎಂದು ಕಳೆದ ವರ್ಷ ಹೇಳಿದ್ದ ಟ್ರಂಪ್ ಅವರು ಇದೀಗ ಅದೇ ಅಣುಸ್ಥಾವರದ ನೆಪದಲ್ಲಿ ಮತ್ತೆ ದಾಳಿ ಮಾಡಿದ್ದಾರೆ. ಇದು ದುರಹಂಕಾರದ ಪರಮಾವಧಿ. ತಾನು ಹೇಳಿದಂತೆ ಕೇಳದ ವೆನಿಜುವೇಲಾದ ಅಧ್ಯಕ್ಷನನ್ನು ನುಗ್ಗಿ ಎತ್ತಿಕೊಂಡು ಬರುತ್ತಾರೆ. ಖಾಮಿನಾಯ್ ಅವರನ್ನು ಹತ್ಯೆ ಮಾಡುತ್ತಾರೆ. ನಾಳೆ ತಾನು ಹೇಳಿದಂತೆ ಕೇಳದಿದ್ದರೆ ಮತ್ತು ತಾನು ಹೇಳಿದ್ದಲ್ಲಿಗೆ ಸಹಿ ಹಾಕದಿದ್ದರೆ ಭಾರತದ ಪ್ರಧಾನಿಯನ್ನು ಎತ್ತಿಕೊಂಡು ಹೋಗುವುದಕ್ಕೂ ಅವರು ಹಿಂಜರಿಯಲಾರರು. ಜಗತ್ತು ತನ್ನ ಮುಷ್ಟಿಯಲ್ಲಿರಬೇಕು ಮತ್ತು ತಾನು ಹೇಳಿದಂತೆ ಕೇಳಬೇಕು ಎಂದು ನಂಬಿರುವ ವ್ಯಕ್ತಿಗೆ ಧರ್ಮ ದ್ವೇಷದ ಆಧಾರದಲ್ಲಿ ಬೆಂಬಲ ಕೊಡುವುದು ವಿಕೃತಿಯೇ ಹೊರತು ಬೇರೇನಲ್ಲ.(ಕಿರಣ್ ಮೌರ್ಯ ಫೇಸ್‌ಬುಕ್‌)

LEAVE A REPLY

Please enter your comment!
Please enter your name here