ದೇಹಲಿ:ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯ ಆರ್.ಎಸ್. 02.04.2025 ಕ್ಕೆ USQ ಸಂಖ್ಯೆ. 3592 1968 ರಲ್ಲಿ, ಅಧಿಕೃತ ಭಾಷಾ ಇಲಾಖೆಯು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ರಾಜಭಾಷಾ ಹಿಂದಿಯ ಬಳಕೆ ಮತ್ತು ಪ್ರಚಾರಕ್ಕಾಗಿ ವಾರ್ಷಿಕ ಕಾರ್ಯಕ್ರಮವನ್ನು ಪ್ರಾರಂಭಿಸಿತು, ಅದರ ಪ್ರಗತಿಪರ ಬಳಕೆಗಾಗಿ ಗುರಿಗಳನ್ನು ನಿಗದಿಪಡಿಸಿತು. ಅಧಿಕೃತ ಭಾಷಾ ಇಲಾಖೆಯ ಬಜೆಟ್ ಹಿಂದಿ ಭಾಷೆಯ ಪ್ರಚಾರಕ್ಕಾಗಿ ವಾರ್ಷಿಕ(ಲಕ್ಷಗಳಲ್ಲಿ ರೂಪಾಯಿಗಳು) 2021-22-ರಲ್ಲಿ (6513,ಲಕ್ಷ) 65.13 ಕೋಟಿರೂಗಳು, 2022-23-ರಲ್ಲಿ (6725 ಲಕ್ಷ) 67.25 ಕೋಟಿ ರೂಗಳು, 2023-24-ರಲ್ಲಿ (6757 ಲಕ್ಷ) 67.57ಸಂಘಟನೆಗಳು ಳು,.ಭಾರತದ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ಪ್ರಚಾರಕ್ಕೆ ಬಜೆಟ್ ಲ್ಲಿ ಒದಗಿಸಿದೆ.
ಆದರೆ ಇತರೆ ರಾಜ್ಯ ಭಾಷೆಗಳ ಪ್ರಚಾರಕ್ಕಾಗಿ ಶಾಸ್ತ್ರೀಯ ಭಾಷೆಗಳಿಗೆ ಮಂಜೂರು ಮಾಡಲಾದ ಬಜೆಟ್ ಅನುದಾನದ ಸಮೀಪ ಬಜೆಟ್ (ಕೋಟಿಗಳಲ್ಲಿ ಮೊತ್ತ) ಕನ್ನಡ – (100ಲಕ್ಷ) ಒಂದು ಕೋಟಿ ರೂಗಳನ್ನು ಮಾತ್ರ, ತೆಲುಗು ಭಾಷೆಗೆ -(100ಲಕ್ಷ) ಒಂದು ಕೋಟಿ ರೂಗಳನ್ನು. ಮಲೆಯಾಳ ಭಾಷೆಗೆ (100ಲಕ್ಷ)ಒಂದು ಕೋಟಿ ರೂಗಳು.ಓರಿಯಾ ಭಾಷೆಗೆ (100ಲಕ್ಷ) ಒಂದು ಕೋಟಿ ರೂಗಳು ಮಾತ್ರ.
ಕೇಂದ್ರ ಸರ್ಕಾರವು ಹಿಂದಿಹೇರಿಕೆಯನ್ನು ಪುಷ್ಟಿ ಗೊಳಿಸಲು ನಡೆಸಿರುವ ಖರ್ಚನ್ನು ಗಮನಿಸಿದರೆ ಶಾಸ್ತ್ರೀಯ ಸ್ಥಾನಮಾನ ಪಡೆದ ಕನ್ನಡ ಹಾಗೂ ಇತರೆ ಭಾಷೆಗಳಿಗೆ ತಲಾ ಒಂದು ಕೋಟಿ!ಇದನ್ನು ಗಮನಿಸಿದರೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಬಹಳ ಕಠಿಣವಾಗಬಹುದೆಂದು ಕನ್ನಡಿಗರು ಆತಂಕ ಪಡುತಿದ್ದಾರೆ.
ಕನ್ನಡಿಗರು ಜಾತಿ,ಧರ್ಮ,ಪಕ್ಷ,ಪಂಗಡಗಳ ಅಂಧ ಅಭಿಮಾನದಲ್ಲಿ ಕನ್ನಡ ಅವಸಾನದತ್ತ ಸಾಗುತ್ತಿರುವ ಆತಂಕವನ್ನು ಗಮನಿಸುತ್ತಿಲ್ಲ ವೆನಿಸುತ್ತದೆ.ಕರ್ನಾಟಕದ ಪ್ರತಿಯೊಬ್ಬರೂ ಹಾಗೂ ಕನ್ನಡಪರ ಸಂಘಟನೆಗಳು ಒಳ ವೈಮನಸ್ಸುಗಳನ್ನು ಬಿಟ್ಟು ಒಟ್ಟಾಗಿ ಹೋರಾಡಿ ಮುಂದಿನ ದಿನಗಳಲ್ಲಿ ಕನ್ನಡ ಭಾಷಾ ಪ್ರಚಾರಕ್ಕೆ ಕೇಂದ್ರ ಬಜೆಟ್ ಹೆಚ್ಚಿಸಲು ಪಣ ತೊಡಬೇಕೆಂದು ಬಿ.ಎಂ.ಮಹೇಂದ್ರಪ್ರಸಾದ್ ರವರು ಮನದಾಳ ಹಂಚಿಕೊಂಡಿದ್ದಾರೆ.






