ಬೆಂಗಳೂರು:ದಿನಾಂಕ: 28.02.2026 ಮತ್ತು 01.03.2026 ರಂದು ಪಿ.ಇ.ಎಸ್.ಐ.ಟಿ. ಹೊಸಕೆರೆಹಳ್ಳಿ, ಬೆಂಗಳೂರು ಇಲ್ಲಿ ಮಹಿಳಾ ಕ್ರಿಕೇಟ್ ಫೈನಲ್ ಮ್ಯಾಚ್ ನಡೆಯಿತು.
ದಿನಾಂಕ: 28.02.2026 ರಂದು ಬೆಳಿಗ್ಗೆ 8:00 ರಿಂದ ರಾತ್ರಿ 10:00 ಗಂಟೆಯವರೆಗೆ ಹಾಗೂ ದಿನಾಂಕ: 01.03.2026 ರಂದು ಬೆಳಿಗ್ಗೆ 8:00 ರಿಂದ ರಾತ್ರಿ 10:00 ಗಂಟೆಯವರೆಗೆ ಪಿ.ಇ.ಎಸ್.ಐ.ಟಿ. ಹೊಸಕೆರೆಹಳ್ಳಿ, ಬೆಂಗಳೂರು ಇಲ್ಲಿ ಮಹಿಳಾ ಕ್ರಿಕೇಟ್ ಫೈನಲ್ ಮ್ಯಾಚ್‌ನ್ನು ಆಯೋಜಿಸಲಾಗಿತ್ತು. ಈ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಭಾಗಿಯಾಗಿದ್ದರು.ಒಟ್ಟು ಸುಮಾರು ಆರು ಟೀಮುಗಳು ಇವುಗಳಲ್ಲಿ ಮೈಸೂರು “ಮಹಾರಾಣಿ”,ಮಂಡ್ಯ” ಕ್ವೀನ್”, ನಮ್ಮ ಉಡುಪಿ, ಮಂಗಳೂರು”ಕ್ವೀನ್”, “ಕಿತ್ತೂರು ಕೇಸರಿ”ತುಮಕೂರು,ಬೆಂಗಳೂರು” ರಾಯಲ್ ಎಮ್ರಾನ್ಸ್ ಭಾಗವಹಿಸಿದ್ದವು. ಲೀಗ್ ಮ್ಯಾಚ್,ಕ್ವಾಟರ್ ಫೈನಲ್,ಸೆಮಿ ಫೈನಲ್,ಹಾಗೂ ಫೈನಲ್ ಆಟಗಳಲ್ಲಿ ಕ್ರೀಡಾಪಟುಗಳು ತಮ್ಮ ಅಮೋಘ ಆಟ ಪ್ರದರ್ಶಿಸಿದರು.ಅಂತಿಮವಾಗಿ ವಿನ್ನರ್ ಆಗಿ ನಮ್ಮ ಉಡುಪಿ ಜಯಸಾಧಿಸಿ ಹದಿನೈದು ಲಕ್ಷ ನಗದು ಬಹುಮಾನ ಪಡೆದರೆ ಮೈಸೂರು ಮಹಾರಾಣಿ ಟೀಮು ರನ್ನರ್ ಆಗಿ ಬಹುಮಾನವಾಗಿ ಹನ್ನೆರಡು ಲಕ್ಷ ನಗದು ಬಹುಮಾನ ತನ್ನ ದಾಗಿಸಿಕೊಂಡಿತು. ದಿನಾಂಕ: 28.02.2026 ರ ಸಂಜೆ 6:00 ರಿಂದ 8:00 ಗಂಟೆಯವರೆಗೆ ಇದೇ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವುಮನ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನ ಪಂದ್ಯಾವಳಿ ಹೊಸಕೆರೆ ಹಳ್ಳಿಯಲ್ಲಿ ಇರುವ ಪಿ ಇ ಎಸ್ ಕಾಲೇಜು ಕ್ರೀಡಾಂಗಣದಲ್ಲಿ ಸಂಸ್ಕೃತಿಕ್ ಕಾರ್ಯಕ್ರಮದಲ್ಲಿ ಫೌಂಡರ್ ಸಂದೀಪ್ ಶೆಟ್ಟಿ, ಅಧ್ಯಕ್ಷೆ ಅಂಬಿಕಾ, ಉದ್ಯಮಿ ಕಲ್ಯಾಣ ಪ್ರದೀಪ್ ಹಾಗೂ ಡಾಕ್ಟರ್ ಸರವಣ ಮುಂತಾದವರು ಹಾಜರಿದ್ದರು ಎರಡು ದಿನಗಳು ನಡೆಯುವ ಪಂದ್ಯಾವಳಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು ಮಹಿಳಾ ಕ್ರೀಡಾ ಪಟ್ಟುಗಳಿಗೆ ಪ್ರೋತ್ಸಾಹ ನೀಡಲು ಪಿ.ಇ.ಎಸ್.ಐ.ಟಿ. ಹೊಸಕೆರೆಹಳ್ಳಿ, ಬೆಂಗಳೂರು ಸಂಸ್ಥೆ ಶ್ರಮಿಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ.





