ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಕಳೆದ ಎಪ್ಪತ್ತು ವರ್ಷಗಳಿಂದಲೂ ತನ್ನ ಅಧಿಕಾರ ನಡೆಸಿ ಒಂದೆರಡು ಅವದಿಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರ ಮಾಡಿವೆ.ರಾಜ್ಯದಲ್ಲಿ ಅಹಿಂದ ನಾಯಕನೆಂದು ಗುರುತಿಸಿಕೊಂಡಿರುವ ಕುರುಬ ಸಮುದಾಯದ ಶ್ರೀ ಸಿದ್ದರಾಮಯ್ಯ ನವರು ಸಾಮಾಜಿಕ ನ್ಯಾಯದ ಪರಿಪಾದಕರು ಎಂದು ಬಂಬಿತರಾಗಿ ಎರಡನೇಬಾರಿಗೆ ಮುಖ್ಯ ಮಂತ್ರಿ ಯಾಗಿ ರಾಜ್ಯದಲ್ಲಿ ಅತಿ ಹೆಚ್ಚು ಆಡಳಿತನಡೆಸಿದ ಮುಖ್ಯಮಂತ್ರಿ ಗಳಪಟ್ಟಿಯಲ್ಲಿ ಮೊದಲನೆಯ ಸ್ಥಾನ ಪಡೆದುಕೊಂಡು ದಾಖಲೆ ಮಾಡಿರುವುದು ಇಡೀ ಅಹಿಂದ ವರ್ಗಕ್ಕೇ ಹೆಮ್ಮೆಯ ವಿಷಯ.ಆದರೆ ಅವರ ಸಮುದಾಯದ ಕುರುಬ ಸಮಾಜವನ್ನು ಎಸ್ ಟಿ.ಮೀಸಲಾತಿಗೆ ಸೇರಿಸಿಸಬೇಕೆಂಬ ಒತ್ತಾಯವನ್ನು ಮಾಡುತ್ತಾ ಕುರುಸಮಾಜದ ಸಂಘಸಂಸ್ಥೆಗಳು, ಮಠಾಧೀಶರುಗಳು ಹಲವು ಪ್ರತಿಭಟನೆ ಮುಖಾಂತರ, ನಿಯೋಗಗಳಮುಖಾಂತರ,ಪಾದಯಾತ್ರೆಯಮುಖಾಂತರ ಸರ್ಕಾರದ ಗಮನಸೆಳೆದರೂ ಸಹ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಕುಂಟು ನೆಪಗಳನ್ನೊಡ್ಡಿ ವಿಳಂಬನೀತಿ ಅನುಸರಿಸುತ್ತಿರುವುದು ಕುರುಬ ಸಮುದಾಯದೊಂದಿಗೆ ಚಲ್ಲಾಟ ವಾಡುವಂತಿದೆ ಎಂದು ಬೇಸರವಾಗುತ್ತದೆ.
ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸಿದ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಿಗೂ ಕುರುಬ ಸಮುದಾಯ ಚುನಾವಣಾ ಸಂದರ್ಭದಲ್ಲಿ ಮತದಾನ ಮಾಡಿದೆ ಎಂಬುದನ್ನು ಮರೆಯಬಾರದು.ಆದ್ದರಿಂದ ಈಗಾಗಲೆ ರಾಜ್ಯ ಸರ್ಕಾರವು ಕುಲಶಾಸ್ತ್ರ ಅಧ್ಯಯನದ ವರದಿ ಮತ್ತು ಸಂಭವಿಸಿದ ಇಲಾಖೆಯುಕೇಳಿದ ಮಾಹಿತಿಯನ್ನು ಕೇಂದ್ರಕ್ಕೆ ಸಲ್ಲಿಕೆ ಮಾಡಲಾಗಿದೆ.ಆದರೆ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷ ಮತ್ತು ಜೆಡಿಎಸ್ ಪಕ್ಷಗಳ ಅಂಗಳದಲ್ಲಿ ಕುರುಬ ಸಮುದಾಯದ ಎಸ್ ಟಿ ಬೇಡಿಕೆಯ ಒಕ್ಕೊತ್ತಾಯ ಮತ್ತು ಸಂಬಂಧಿಸಿದ ಅದ್ಯಯನ ವರದಿ ಎಲ್ಲವೂ ಕೇಂದ್ರ ಸರ್ಕಾರದ ಅಂಗಳದಲ್ಲಿದೆ.
ಈಗ ಕೇಂದ್ರಸರ್ಕಾರದ ಪಾಲುದಾರಿಕೆಯ ಜೆಡಿಎಸ್ ಪಕ್ಷವು ಕುರುಬ ಸಮುದಾಯದ ಎಸ್ ಟಿ ಮೀಸಲಾತಿ ಬೇಡಿಕೆ ಈಡೇರಲು ಪ್ರಮುಖ ಪಾತ್ರ ವಹಿಸಬೇಕಾಗಿದೆ.ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪರ್ಯಾಯ ಪಕ್ಷ ಜೆಡಿಎಸ್ ಮಾತ್ರ.ಆದ್ದರಿಂದಲೇ ಜೆಡಿಎಸ್ ಪಕ್ಷವು ರಾಜ್ಯದ ಕುರುಬ ಸಮುದಾಯದ ಬೇಡಿಕೆ ಈಡೇರಿಸಲು ಕೇಂದ್ರದ ಮೇಲೆ ಒತ್ತಡ ತಂದು ತನ್ನ ಶಕ್ತಿ ಪ್ರದರ್ಶಿಸಬೇಕು.ಹಾಗೇನಾದರೂ ಜೆಡಿಎಸ್ ಮಾಡಿದ್ದೇ ಆದರೆ ಹಾಲಿನಂತ ಮನಸ್ಸುಳ್ಳ ಕೊಟ್ಟಮಾತು ತಪ್ಪದ ಸಮಾಜವೆಂಬಹೆಸರಾದ ಸಮುದಾಯ ನಿಮ್ಮೊಂದಿಗೆ ಕೈಜೋಡಿಸಲು ಯಾವುದೇ ಹಿಂಜರಿಕೆ ಇಲ್ಲಾ.ಮುಂದೆ ಬರುವ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ್ ಮತ್ತು ಇತರೆ ಸ್ಥಳೀಯ ಸಂಸ್ಥೆಗಳಿಗೆ ನಡೆಯವು ಚುನಾವಣೆಯಲ್ಲಿ ಮತ ಕೇಳಲು ಬರುವಾಗ ಕುರುಬ ಸಮುದಾಯದ ಎಸ್ ಟಿ ಮೀಸಲಾತಿ ಆದೇಶ ಹಿಡಿದುಕೊಂಡುಬಂದರೆ ಚುನಾವಣೆಯ ಖದರೇ ರಂಗುಮಯವಾಗಿರುತ್ತದೆ.ಆದ್ದರಿಂದ ಮಾನ್ಯ ದೇವೆಗೌಡರು ಮೋದಿಯ ಹಾಡಿಹೊಗಳಿ ನೇರ ಸಂಪರ್ಕದಲ್ಲಿದ್ದಾರೆ ಅಲ್ಲದೆ ಮೋದಿ ಕೂಡಾ ದೇವೆಗೌಡರಿಗೆ ಬಹಳಗೌರವ ಕೊಡುತ್ತಾರೆ ದೇವೆಗೌಡರ ಮಾತಿಗೆ ಮೋದಿ ಒಪ್ಪದೆ ಇರಲಾರರು.ಕುಮಾರಸ್ವಾಮಿಯವರೂ ಸಹ ಕೇಂದ್ರ ಸಂಪುಟ ಸಚಿವರು ಅವರಿಗೂ ಕುರುಬ ಸಮುದಾಯದ ಜನರ ಕಷ್ಟ,ನಷ್ಟ,ನೋವು,ನಲಿವು ಗೊತ್ತಿದೆ ರಾಜ್ಯದ ಬಿಜೆಪಿಯ ಸಂಸದರಿಗೂ ರಾಜ್ಯದ ಕುರುಬ ಸಮುದಾಯದ ನೋವು ನಲಿವು ಗೊತ್ತಿದೆ.ಆದ್ದರಿಂದ ಕೇಂದ್ರ ಸರ್ಕಾರದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುಂಬರುವ ಜಿಲ್ಲಾಪಂಚಾಯತ್,ತಾಲೂಕು ಪಂಚಾಯತ್, ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರಕ್ಕೆ ಬರುವ ಮುಂಚೆ ಎಸ್ ಟಿ ಮೀಸಲಾತಿ ಆದೇಶ ತರಬೇಕು.ಇಲ್ಲದಿದ್ದರೆ ಮತ ಕೇಳಲು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಿಗೆ ಮತ ಕೇಳುವ ನೈತಿಕತೆ ಇರುವುದಿಲ್ಲಾ.ಅಲ್ಲದೆ ಈ ಚುನಾವಣೆಗಳನ್ನು ಬಹಿಸ್ಕರಿಸಲು ಕೂಡಾ ಚಿಂತನೆಗಳು ಸಮುದಾಯದಲ್ಲಿ ಚರ್ಚೆಗಳು ನಡೆದರೂ ಅಚ್ಛರಿ ಪಡಬೇಕಿಲ್ಲಾ.
Home ಸಾರ್ವಜನಿಕ ಧ್ವನಿ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಿ “ಬಿಜೆಪಿ ಮತ್ತು ಜೆಡಿಎಸ್” ಝಡ್. ಪಿ.ಚುನಾವಣೆಗೆ ಮತ ಕೇಳಲು ಬರಬೇಕು.





