ವಿಜಯಪುರ: ವಿಜಯಪುರ ಜಿಲ್ಲೆಯ ಪ್ರತಿಷ್ಠಿತ ಬಬಲೇಶ್ವರ ವಿಧಾನಸಭೆ ವ್ಯಾಪ್ತಿಯಲ್ಲಿರುವ ಹೊನಗನಹಳ್ಳಿ ಗ್ರಾಪಂಚಾಯತಿಗೆ ಒಳಪಟ್ಟ ಸವನಹಳ್ಳಿಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಸವನಹಳ್ಳಿಗೆ ಶೌಚಾಲಯ ಸೌಲಭ್ಯ ಒದಗಿಸಿ ಎಂದು ಅಲ್ಲಿಯ ಮುಖ್ಯೋಪಾಧ್ಯಾಯರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಗೆ ಮೊಲ ಸೌಕರ್ಯ ಅಭಿವೃದ್ಧಿ ಸಚಿವರೂ ಪ್ರಭಾವಿರಾಜಕಾರಣಿ ಶ್ರೀ ಎಂ.ಬಿ.ಪಾಟೀಲ್ ಸಾಹೇಬರಿಗೆ ಮನವಿಮಾಡಿಕೊಂಡಿದ್ದಾರೆಂದರೆ ಅಲ್ಲಿಯ ಆಡಳಿತ ವೈಖರಿಯು ಹೇಗಿದೆಎಂದು ಅರ್ಥಮಾಡಿಕೊಳ್ಳಿ.
ಅಲ್ಲಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಧಿವ್ಯ ನಿರ್ಲಕ್ಷ ಮತ್ತು ಬೇಜವಾಬ್ದಾರಿತನದ ಕರ್ತವ್ಯ ಹೀನತೆಯನ್ನು ಊಹಿಸಬಹುದು.ಅವರೊಬ್ಬರನ್ನೇ ಹೊಣೆಮಾಡಲಾಗದು ಅವರ ಮೇಲಾಧಿಕಾರಿಗಳು,ಶಿಕ್ಷಣಾಧಿಕಾರಿಗಳು,ತಹಶಿಲ್ದಾರರು.ಆರೋಗ್ಯಾಧಿಕಾರಿಗಳು ಯಾವಮಟ್ಟದಲ್ಲಿ ಈ ಗ್ರಾಮಗಳಲ್ಲಿ ಪ್ರಗತಿ ಪರಿಶೀಲನೆ ಮಾಡುತ್ತಿರಬಹುದು?ಈ ಅಧಿಕಾರಿಗಳು ಸಂಬಳಕ್ಕಾಗಿಯೇ ದುಡಿಮೆ ಮಾಡಿದರೂ ಪರವಾಗಿಲ್ಲಾ ಮಾನವೀಯ ದೃಷ್ಟಿಯಿಂದ ಲಾದರೂ ಈ KGHPS ಹೆಣ್ಣು ಮಕ್ಕಳ ಶಾಲೆಯಲ್ಲಿಯ ಮಕ್ಕಳ ಮನೋಸ್ಥಿತಿಯನ್ನಾದರೂ ಅರಿತು ಕೆಲಸಮಾಡಬಹುದಿತ್ತಲ್ಲವೆ? ಇಲ್ಲಿ 200 ಮಕ್ಕಳು ಓದುತ್ತಿದ್ದು ಇಲ್ಲಿ ಶೌಚಾಲಯ ವ್ಯವಸ್ಥೆ ಇರುವುದಿಲ್ಲಾ, ಮಕ್ಕಳು ಹೊರಗಡೆ ಶೌಚಾಲಯಕ್ಕೆ ಹೋಗಲು ಮುಜುಗರ ಪಡುತ್ತಿದ್ದಾರೆ. ಹಾಗೆ ಪುರುಷ ಶಿಕ್ಷಕರಿಗೂ ಶೌಚಾಲಯ ಇರುವುದಿಲ್ಲಾ ಎಂದು ಶಾಲಾ ಸಿಬ್ಬಂದಿ ಮನದಾಳದ ನೋವು ತೋಡಿಕೊಂಡಿದ್ದಾರೆ.ಈ ಗ್ರಾಮಗಳ ರಾಜಕಾರಣಿಗಳು ತಮ್ಮ ಸ್ವ ಹಿತಾಶಕ್ತಿಗಾಗಿ ಅಧಿಕಾರಿಗಳಿಗೆ,ಶಾಸಕ,ಸಂಸದರಿಗೆ ಅಡಮಾನವಾಗಿಬಿಟ್ಟಿದ್ದಾರೆಂದರೂ ತಪ್ಪಾಗಲಿಕ್ಕಿಲ್ಲಾ.ಗರಿ ಗರಿ ಬಿಳಿಬಟ್ಟೆ ಹಾಕಿಕೊಂಡು ನಾಯಕರ ಮನಗಳಬಳಿ ಬಿಳಿವಸ್ತ್ರದ ವಾಚಮೆನ್ಗಳಹಾಗೆ ಬಾಗಿಲಲ್ಲಿ ಇರ್ತಾರೆ ಹೊರತು ಗ್ರಾಮದ ಜ್ವಲಂತ ಸಮಸ್ಯೆಗಳನ್ನು ಅವರಬಳಿ ಹೇಳಿಕೊಳ್ಳುವುದಿಲ್ಲಾ.ಅಧಿಕಾರಿಗಳು ಇವರಿಗೆ ಕವಡೆಕಾಶಿನ ಮರ್ಯಾದೆ ಕೊಡಲ್ಲಾ ಅದು ನಿಜ.ಆದರೆ ಸಚಿವರ ಗಮನಕ್ಕೆ ತಂದರೆ ಅಧಿಕಾರಿಗಳಿಗೆ ಹೇಳಿ ಕೆಲಸಮಾಡಿಸುತ್ತಾರೆ ಅವರಗಮನಕ್ಕೆ ತರುವುದು ನಮ್ಮ ಕರ್ತವ್ಯ ಅಲ್ಲವೆ?ಎಲ್ಲವನ್ನೂ ಸಚಿವರು ನೋಡಲು ಆಗಲ್ಲಾ ಆಗಬೇಕಾದಕೆಲಸ ಅವರ ಗಮನಕ್ಕೆ ತರಬೇಕು ಅದು ಗ್ರಾಮಸ್ಥರ ಕೆಲಸ ಮತ್ತು ಎಸ್ ಡಿ ಎಂ ಸಿ ಯ ಕರ್ತವ್ಯ.ಆದರೆ ಇವರೆಲ್ಲರೂ ನಿದ್ದೆ ಮಂಪರಿನಲ್ಲಿದ್ದಾರೋ ಅಥವಾ ಅಧಿಕಾರಿಗಳಿಗೆ,ಮಂತ್ರಿ ಗಳಿಗೆ ಹೇಳಿಕೊಳ್ಳಲಾಗದಷ್ಟು ಅಸಮರ್ಥರೋ ಗೊತ್ತಿಲ್ಲಾ.ಈ ಮನವಿಯನ್ನು ಶಾಲೆಯ ಮುಖ್ಯೋಪಾಧ್ಯರು ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.ಸಂಭವಿಸಿದ ಅಧಿಕಾರಿಗಳು ಈ ಕೂಡಲೆ ಈ KGHPS ಹೆಣ್ಣು ಮಕ್ಕಳ ಶಾಲೆಯಲ್ಲಿಯ ಮಕ್ಕಳ ಮನೋಸ್ಥಿತಿಯನ್ನು ಅರ್ಥಮಾಡಿಕೊಂಡು ತಮ್ಮ ಮನೆಯ ಹೆಣ್ಣುಮಕ್ಕಳನ್ನು ನೆನಪಿಸಿಕೊಂಡು ತಕ್ಷಣ ಈ ಕೆಲಸವನ್ನು ಮಾಡಲು ಈ ಮೂಲಕ ನಮ್ಮದೂ ಒಂದು ಮನವಿ.

LEAVE A REPLY

Please enter your comment!
Please enter your name here