ಸಿರುಗುಪ್ಪ:ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವೇ ಮಗುವಿನ ಸರ್ವತೋಮುಖ ಬೆಳವಣಿಗೆ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಲ್ಲಿ ಸಮುದಾಯದ ಚಿತ್ತ ಅಂಗನವಾಡಿ ಯತ್ತ ಕಾರ್ಯಕ್ರಮ ಹಮ್ಮಿಕೊಂಡು ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ತಾಯಿಯ ಮಹತ್ತರ ಪಾತ್ರ ಕುರಿತು ಸಿರುಗುಪ್ಪ ನಗರದ ವಾರ್ಡ್ ನಂಬರ್ 3 ಅಂಗನವಾಡಿ ಕೇಂದ್ರ 8 ರಲ್ಲಿ ಆರೋಗ್ಯ ಶಿಕ್ಷಣ ನೀಡಲಾಯಿತು.

ಮಗುಗೆ ಮುಖ್ಯವಾಗಿ ತಾಯಿಯ ಎದೆ ಹಾಲು ಮತ್ತು ಪೌಷ್ಟಿಕ ಆಹಾರದ ಜೊತೆಗೆ ಸೂಕ್ತ ಕಾಲಕ್ಕೆ ಲಸಿಕೆಗಳು ಆರೋಗ್ಯ ತಪಾಸಣೆ ಹಾಗೂ ಪರಿಸರದ ಪರಿಚಯ ಹಣ್ಣುಗಳು, ಪಕ್ಷಿಗಳು ಪ್ರಾಣಿಗಳು ಹೂಗಳು ವಸ್ತುಗಳ ಹಾಗೂ ಸಂಬಂಧಗಳ ಜ್ಞಾನವನ್ನು ತುಂಬುವುದೇ ಮಗುವಿನ ಸರ್ವತೋಮುಖ ಬೆಳವಣಿಗೆ ಯಾಗಿದೆ ಎಂದು ಮೊಹಮ್ಮದ್ ಖಾಸಿಂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನುಡಿದರು.

ಮಗುವಿನ ಜೊತೆ ತಾಯಿ ಹೆಚ್ಚಿನ ಸಮಯವನ್ನು ಕಳೆಯುವುದರಿಂದ ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠ ಶಾಲೆ ಎಂದು ಶ್ರೀ ಜಗನ್ನಾಥ್ ಜಿಲ್ಲಾ ವ್ಯವಸ್ಥಾಪಕರು ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮ ಬಳ್ಳಾರಿಯವರು ನುಡಿದರು

ಅಂಗನವಾಡಿ ಮೇಲ್ವಿಚಾರಕರಾದ ಮಹಾದೇವಿಯವರು ಪೋಷಕರಿಗೆ ಚಿತ್ರಕಲೆ ಮತ್ತು ಬಣ್ಣ ಹಾಕುವ ಕಾರ್ಯ ಚಟುವಟಿಕೆಯನ್ನು ಮಾಡಿಸಿದರು.
ಚಂದ್ರಶೇಖರ್ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಕ್ಕಳಿಗೆ ಆಟೋಟಗಳಲ್ಲಿ ತೊಡಗಿಸುವುದು ಅತಿ ಮುಖ್ಯ ಎಂದರು

ಶ್ರೀಮತಿ ಶೋಭಾ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಲಸಿಕೆ ನೀಡಿದರು.

ಅಂಗನವಾಡಿ ಶಿಕ್ಷಕಿಯರಾದ ಬಿಎಸ್ ವಿನೋದ, ರಾಜೇಶ್ವರಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಪಾಲಕ ಪೋಷಕ ವರ್ಗದವರು ಹಾಜರಿದ್ದರು

LEAVE A REPLY

Please enter your comment!
Please enter your name here