ಬೆಂಗಳೂರು:ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ರಾಜೇಶ್ ರವರು.ತಪ್ಪಸ್ಸು ಮಾಡಿದಂತೆ, ಕಲೆಯನ್ನ ಆರಾಧಿಸಿ, ಕಲಾ ಸರಸ್ವತಿಯನ್ನ ಒಲಿಸಿಕೊಂಡ ಕಲಾತಪಸ್ವಿ ರಾಜೇಶ್ ರವರು ರವಿವರ್ಮನ ಕುಂಚದಿಂದ ಬಣ್ಣಗಳ ಚಿತ್ತಾರ ಮೂಡಿದಂತೆ, ರಾಜೇಶ್ ತಮ್ಮ ನಟನೆಯಲ್ಲಿ ಭಾವನೆಗಳನ್ನ ಬಂಧಿಸಿದ ಮಹಾನ್ ನಾಯಕ, ರಾಜೇಶ್ ರವರು ಕನ್ನಡ ಚಿತ್ರರಂಗವನ್ನ ಶ್ರೀಮಂತಗೊಳಿದ ಕಲಾವಿದ. ನಾನೇ ಎಂಬ ಭಾವ ನಾಶವಾಯಿತೋ, ರವಿವರ್ಮನ ಕುಂಚದ ಕಲೆ, ಈ ದೇಶ ಚೆನ್ನ ಈ ಮಣ್ಣು ಚಿನ್ನ, ಕಂಗಳು ವಂದನೆ ಹೇಳಿವೆ ಇಂತಹ ಜನಪ್ರಿಯ ಹಾಡುಗಳನ್ನು ನೆನೆದಾಗ, ಕೇಳಿದಾಗ, ತಟ್ಟನೆ ರಾಜೇಶ್ ಎಂಬ ಅದ್ಭುತ ಕಲಾವಿದ ಕಣ್ಮುಂದೆ ಬಂದು ನಿಲ್ಲುತ್ತಾರೆ. ರಾಜೇಶ್ ಅಂದ ತಕ್ಷಣ ನೂರೆಂಟು ಪಾತ್ರಗಳು ಮನದೊಳಗೆ ಸುಳಿದಾಡಿಬಿಡುತ್ತವೆ.. ಒಂದೇ ತರನಾದ ಪಾತ್ರಗಳಿಗೆ ಸೀಮಿತವಾಗದೆ ಎಲ್ಲಾ ಪಾತ್ರಗಳಲ್ಲೂ ನಟಿಸಿ ಅಭಿಮಾನಿಗಳ ಹೃದಯದಲ್ಲಿ ಸ್ಟಾರ್ ಆಗಿ ನೆಲೆನಿಂತ ನಟ ರಾಜೇಶ್ ರವರು. ಹೈಟ್ ಫಿಟ್ ಲುಕ್ ಮ್ಯಾನರಿಸಂ ಯಾವುದ್ರಲ್ಲಿ ಕಮ್ಮಿ ಹೇಳಿ.. ನೋಡಿದ ತಕ್ಷಣ ವಾಟ್ ಎ ಹ್ಯಾಂಡಸಂ ಅನ್ನಿಸಿಬಿಡುವಂತಾ ವ್ಯಕ್ತಿತ್ವ ಅವರದು. ಆ ತೀಕ್ಷ್ಣ ಕಣ್ಣೋಟ, ಸ್ಪುಟವಾದ ಮಾತುಗಳು, ಖಡಕ್ ಧ್ವನಿ ರಾಜೇಶ್‌ರ ಪ್ಲಸ್ ಪಾಯಿಂಟ್ ಆಗಿದ್ದವು. ಹಾಗಾಗಿನೆ ಕನ್ನಡದ ಈ ಮಾಣಿಕ್ಯ ಐದು(೫) ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ರಾರಾಜಿಸಿದರು.
ಡಾ. ರಾಜೇಶ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಲ್ಲಿ ಒಬ್ಬರು. ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ ಕುಮಾರ್ ಅವರ ಸಮಕಾಲೀನರಾಗಿ ಅಂತಹ ಮಹಾನ್ ಪ್ರತಿಭೆಗಳ ಕಾಲದಲ್ಲಿ ಕೂಡಾ ತಮ್ಮದೇ ಆದ ವಿಶಿಷ್ಟ ಛಾಪನ್ನು ಚಿತ್ರಂಗದಲ್ಲಿ ಮೂಡಿಸಿದ್ದವರು.1932ರ ಏ.15ರಂದು ಬೆಂಗಳೂರಿನಲ್ಲಿ ಜನಿಸಿದ್ದ ರಾಜೇಶ್, ಅಭಿನಯದ ಬಗ್ಗೆ ರಾಜೇಶ್ ಅವರು ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದರು. ಶಾಲಾ-ಕಾಲೇಜು ದಿನಗಳಲ್ಲಿ ಮನೆಯವರಿಗೆ ಗೊತ್ತಿಲ್ಲದಂತೆಯೇ ಅವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ರಾಜೇಶ್ ಜನಿಸಿದ್ದು ಬೆಂಗಳೂರಿನಲ್ಲಿ. ಅವರ ಮೂಲ ಹೆಸರು ಮುನಿ ಚೌಡಪ್ಪ. ಬಳಿಕ ಅವರು ನಾಟಕಗಳಲ್ಲಿ ಅಭಿನಯಿಸುವಾಗ ವಿದ್ಯಾಸಾಗರ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ಚಿತ್ರರಂಗದಲ್ಲಿ ‘ಕಲಾ ತಪಸ್ವಿ’ ರಾಜೇಶ್ ಎಂದೇ ಅವರು ಫೇಮಸ್ ಆದರು. 1960ರ ದಶಕದಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ನೂರಾರು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿದ್ದರು.
ಬೆಂಗಳೂರಿನ ಅಂಚೆ ಪೇಟೆಯ ಮದ್ಯಮ ವರ್ಗದ ಕುಟುಂಬದಲ್ಲಿ ರಾಜೇಶ್ ಎಂಬ ಕಲಾತಪಸ್ವಿ ಇವರ ತಂದೆ ಟಿಂಬರ್ ಮರ್ಚೆಂಟ್ ಆಗಿ ಕೆಲಸ ಮಾಡ್ತಿದ್ರು. ರಾಜೇಶ್ ಎರಡನೇ ಮಗ ಮುನಿಚಾಡಪ್ಪ. ಇವರು ನಿರುದ್ಯೋಗಿ ಬಾಳು, ಬಡವನ ಬಾಳು, ವಿಷ ಸರ್ಪ, ನಂದಾ ದೀಪ, ಕಿತ್ತೂರು ರಾಣಿ ಚೆನ್ನಮ್ಮ ನಾಟಕಗಳಲ್ಲಿ ಅಭಿನಯಿಸಿದ್ದರು. 60ರ ದಶಕದಲ್ಲಿ ವೀರ ಸಂಕಲ್ಪ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ರಾಜೇಶ್ ಅವರಿಗೆ 1968ರ ನಮ್ಮ ಊರು ಚಿತ್ರ ಹೆಸರು ತಂದುಕೊಟ್ಟಿತ್ತು. ನಂತರ ರಾಜೇಶ್ ಎಂದು ಹೆಸರು ಬದಲಿಸಿಕೊಂಡಿದ್ದರು.ಸೊಸೆ ತಂದ ಸೌಭಾಗ್ಯ, ದೇವರ ದುಡ್ಡ, ಕಲಿಯುಗ, ದೇವರ ಗುಡಿ, ವೀರ ಸಂಕಲ್ಪ, ಗಂಗೆ ಗೌರಿ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜೇಶ್ ಬಣ್ಣ ಹಚ್ಚಿದ್ದರು.ಅವರು ‘ಓಲ್ಡ್ ಮಾಂಕ್’ ಸಿನಿಮಾದಲ್ಲಿಯ ಅತಿಥಿ ಪಾತ್ರ ಅವರ ಕೊನೆಯದು. ಇಂಥಾ ಮಹಾನ್ ಕಲಾವಿದ ದಿನಾಂಕ:೧೯ ಫೆಬ್ರವರಿ ೨೦೨೨,ರಂದು ಇಹಲೋಕ ತ್ಯಜಿಸಿದರು.
ದೇವರ ಗುಡಿ’ ಸಿನಿಮಾದಲ್ಲಿ ವಿಷ್ಣುವರ್ಧನ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.ಅದರ ನಂತರ ಅವರು ೧೯೭೦ ರ ದಶಕದಲ್ಲಿ ದೇವರ ದುಡ್ಡು, ಬದು ಬಂಗಾರವಾಯಿತು, ಬೆಳುವಾಳದ ಮಡಿಲಲ್ಲಿ, ಮುಗಿದ ಕಥೆ ಮತ್ತು ೧೯೮೦ ರ ದಶಕದಲ್ಲಿ ಕಲಿಯುಗ, ಪಿತಾಮಹ ಮತ್ತು ಸತ್ಯನಾರಾಯಣ ಪೂಜಾ ಫಲೆಯಂತಹ ಹೆಚ್ಚಿನ ಸಿನಿಮಾದಲ್ಲಿ ನಟಿಸಿದರು.
ಅವರು ೧೯೫೦ ರ ದಶಕದಲ್ಲಿ ಹೊನ್ನಪ್ಪ ಭಾಗವತರ್, ರಾಜಕುಮಾರ್, ಉದಯಕುಮಾರ್, ಕಲ್ಯಾಣಕುಮಾರ್, ಬಿ.ಆರ್. ಪಂತುಲು, ಕೆ.ಎಸ್.ಅಶ್ವಥ್, ನರಸಿಂಹರಾಜು, ಬಾಲಕೃಷ್ಣ, ಅಯ್ಯರ್, ಬಿ.ಸರೋಜಾದೇವಿ, ಲೀಲಾವತಿ, ಪಂಡರಿ ಬಾಯಿ, ಎಂ.ವಿ.ರಾಜಮ್ಮ, ಮೈನಾವತಿ, ವಂದನಾ, ಕಲ್ಪನಾ, ಜಯಂತಿ, ಭಾರತಿ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು. ಆದರೆ ಇತ್ತೀಚಿನ ದಿನಗಳಲ್ಲಿ ನಿರ್ಮಾಣವಾಗಿರುವ ಕನ್ನಡ ಚಿತ್ರಗಳು ಉತ್ತಮ ಕಥೆ ಮತ್ತು ಸಾಮಾಜಿಕ ಬದ್ಧತೆಯ ಕೊರತೆಯಿಂದ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ ಎಂದು ರಾಜೇಶ್ ವಿಷಾದ ವ್ಯಕ್ತಪಡಿಸಿದರು. ಹಿಂದಿನ ಸ್ಟಾರ್ “ಆ ಚಿತ್ರಗಳು ಆರೋಗ್ಯಕರ ಮನರಂಜನೆಯನ್ನು ಒದಗಿಸುವುದರ ಜೊತೆಗೆ ಸಮಾಜಕ್ಕೆ ಸಂದೇಶವನ್ನು ಹೊಂದಿದ್ದವು. ಆದರೆ ೧೯೮೦ ರ ನಂತರ ಬಂದ ಚಲನಚಿತ್ರಗಳು ಸಾಮಾಜಿಕ ಬದ್ಧತೆಯ ಕೊರತೆ ಮತ್ತು ಅಗ್ಗದ ಅಭಿರುಚಿಯನ್ನು ಹೊಂದಿವೆ. ತಂತ್ರಜ್ಞಾನದ ಬೆಳವಣಿಗೆ ಮತ್ತು ಚಲನಚಿತ್ರಗಳಿಗೆ ವ್ಯಯಿಸುತ್ತಿರುವ ಅಪಾರ ಹಣವನ್ನು ಚಲನಚಿತ್ರ ನಿರ್ಮಾಪಕರು ಸಮಾಜದ ಒಳಿತಿಗಾಗಿ ಬಳಸುತ್ತಿಲ್ಲವೆಂಬ ಬೇಸರ ಅವರಲ್ಲಿತ್ತು.
ಕಪ್ಪು ಬಿಳುಪು, ಎರಡು ಮುಖ, ಪುಣ್ಯ ಪುರುಷ, ದೇವರ ಗುಡಿ, ಕಾವೇರಿ, ಕ್ರಾಂತಿ ವೀರ ಸೇರಿದಂತೆ 150ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಜೇಶ್ ನಟಿಸಿದ್ದಾರೆ. ಅವರ ಕಲಾ ಸೇವೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿರತ್ತು.
ಇಂಥಹ ಮಹಾನ್ ಕಲಾವಿದನ ನಾಲ್ಕನೇ ವರ್ಷದ ಪುಣ್ಯಾರಾಧನೆಯನ್ನು
ನ್ಯೂ ಇಂಡಿಯಾ ಗುಡ್ ಶೆಪರ್ಡ್ ಫೌಂಡೇಶನ್ ರಿ.ಎನ್ ಜಿ ಓ ಬೆಂಗಳೂರು ಸಂಸ್ಥೆಯವರು ಕಲಾತಪಸ್ವಿ “ಡಾ. ರಾಜೇಶ್ ಕುಮಾರ್ ತಪೋವನ”
ಗೋವಿಂದಪುರ, ದಾಸನಪುರ ಹೋ, ಬೆಂಗಳೂರು ಉತ್ತರ ಈ ಸ್ಥಳದಲ್ಲಿ ದಿನಾಂಕ: ೦೧೯-೦೨-೨೦೨೬,ರಂದುಗುರುವಾರ ಬೆಳಿಗ್ಗೆ: 10 ಗಂಟೆಗೆ ಪೂಜೆ,ನಂತರ ಭಜನಾ ಕಾರ್ಯಕ್ರಮ,
ಮಧ್ಯಾಹ್ನ 12:30ಕ್ಕೆ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲಾ ತಪಸ್ವಿ ಡಾ ರಾಜೇಶ್ ಅವರ ಕುಟುಂಬ ವರ್ಗದವರು ಹಾಗೂ ಶ್ರೀ ವೀರ ಕುಮಾರ್, ಅಧ್ಯಕ್ಷ, ಕರುನಾಡ ಮುಕುಟ ಕಲಾತಪಸ್ವಿ ಪ್ರತಿಷ್ಠಾನ ಟ್ರಸ್ಟ್(ರಿ),ಶ್ರೀ ಎಸ್ ಮನೋಹರ್, ಅಧ್ಯಕ್ಷರು, ದಿ ಮೈಸೂರು ಎಲೆಕ್ಟಿಕಲ್ ಇಂಡಸ್ಟ್ರೀಸ್ ಲಿ.ಶ್ರೀ ಎಣ್ಣಿಗೇರಿ ರಾಮಯ್ಯ ಕರ್ನಾಟಕ ಹಿಂದುಳಿದ ವರ್ಗಗಳ ಸಂಘ ಉಪಾಧ್ಯಕ್ಷ,ಶ್ರೀ ಸಿದ್ದಲಿಂಗಯ್ಯ, ಕಲಾ ತಪಸ್ವಿ ತಪೋವನ ಕ್ಕೆ ಭೂದಾನಿ,ಶ್ರೀ ಸತ್ಯಪ್ಪ ಗುರಿಕಾರ್ ರಾಷ್ಟ್ರೀಯ ಸಂಚಾಲಕ, ಅಖಿಲ ಭಾರತೀಯ ಒಬಿಸಿ ಮಹಾಸಭಾ ಭೂಪಾಲ್, ಶ್ರೀ ಕುಶಾಲ್ ಹುರುವೇಗೌಡ ಯುವ ನಾಯಕ.ಶ್ರೀ ರಾಮಚಂದ್ರಪ್ಪ ಹನುಮಂತ ಸಾಗರ ನಿವೃತ್ತ ಪೊಲೀಸ ಅಧಿಕಾರಿ.ಶ್ರೀ ಹೆಚ್ ಟಿ ಗಿರಿಧರ್ ಅಧ್ಯಕ್ಷ ಅಖಿಲ ಭಾರತೀಯ ಪಶುಪಾಲಕ ಕ್ಷತ್ರೀಯ ಟ್ರಸ್ಟ್ ,ಶ್ರೀ ಅಯ್ಯಪ್ಪ ಗಬ್ಬರ್, ಅಧ್ಯಕ್ಷ ರಾಯಚೂರು ಜಿಲ್ಲೆ ಕಾರ್ಮಿಕ ಸಂಘಟನೆಗಳು,ಶ್ರೀ ಹನುಮಂತಪ್ಪ ಸೋಮನಕಟ್ಟೆ, ಸಾಹಿತಿಗಳು,ಶ್ರೀ ಮುನಿರಾಜು ಕುಕ್ಕನಳ್ಳಿ ಸಮಾಜ ಸೇವಕರು,ಶ್ರೀ ಸುಭಾಸ ಶಾಮ ಭಟ್ಟರ ಪಾಳ್ಯ ಸಮಾಜ ಸೇವಕರು,ಶ್ರೀ ಕಲ್ಯಾಣ ಕುಮಾರ್ ಭಕ್ತನ ಪಾಳ್ಯ ಸಮಾಜ ಸೇವಕರು,ಶ್ರೀ ಪ್ರವೀಣ್ ಕುಮಾರ್ ನೆಲಮಂಗಲ ಸಮಾಜ ಸೇವಕರು,ಶ್ರೀ ಗಿರೀಶ್ ಕುಮಾರ್ ಕೊನಕುಂಟೆ ಸಮಾಜ ಸೇವಕರು,ಶ್ರೀ ರಾಮಪ್ಪ ಜೋಗಿನ ನ್ಯೂ ಇಂಡಿಯಾ ಗುಡ್ ಶೆಪರ್ಡ್ ಫೌಂಡೇಶನ್ ಅಧ್ಯಕ್ಷ ಶ್ರೀ ಗಂಗರಾಜು ಪಟೇಲ್ ಬೆಟ್ಟಹಳ್ಳಿ ಸಮಾಜ ಸೇವಕರು,ಶ್ರೀ ಬಿ ಎಂ ದೊಡ್ಡಯ್ಯ ಮಮತಾ ಮಕ್ಕಳ ಮಂದಿರ ಎನ್ ಜಿ ಓ.ಶ್ರೀ ಲಕ್ಕವಳ್ಳಿ ಮಂಜುನಾಥ,ಶ್ರೀ ಗೋಪಾಲ ಎಂ. ಪಿ. ಅಖಿಲ ಭಾರತೀಯ ಬುಡಕಟ್ಟು ಅಲೆಮಾರಿ ಸಂಘಟನೆ ನವದೆಹಲಿ,ಶ್ರೀ ನರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗುಡ್ ಶೆಪರ್ಡ್,ಫೌಂಡೇಶನ್, ಜೊತೆಗೆ ವಿಶೇಷ ಆಹ್ವಾನಿತರಾಗಿ ಶ್ರೀಮತಿ ಅಪ್ಪ ಮಂಜು ಚಿತ್ರರಂಗ ಕಲಾವಿದರು | ಶ್ರೀ ಬಸವರಾಜ ಹೊನ್ನಾಸಂದ್ರ,ಶ್ರೀ ಗಂಗಾಧರ ಹೊನ್ನಾಸಂದ್ರ ಕನಕದಾಸ ದೇವಸ್ಥಾನ ಪೂಜಾರಿ,ಶ್ರೀ ಶಿವಲಿಂಗಪ್ಪ ಜೋಗಿನ | ಶ್ರೀ ಆರ್ ಜಯಕುಮಾರ್ ,ಶ್ರೀಮತಿ ಸ್ವರೂಪರಾಣಿ ಸಮಾಜ ಸೇವಕರು,ಶ್ರೀ ಹೊಂಬಳ ಹಾಲ್ಲಪ್ಪ ಸಮಾಜ ಸೇವಕರು | ಶ್ರೀ ರವಿ ಕುಮಾರ್ ರಾಯಣ್ಣ ನವರು ಭಾಗವಹಿಸಲಿದ್ದಾರೆ. ನ್ಯೂ ಇಂಡಿಯಾ ಗುಡ್ ಶೆಪರ್ಡ್ ಫೌಂಡೇಶನ್ (ರಿ) ಎನ್ ಜಿ ಓ ಬೆಂಗಳೂರು ಶ್ರೀಮತಿ ವಿಜಯ ಕುಮಾರಿ, ಶ್ರೀ ಸಿದ್ದರಾಮನಂದ ಮಹಾಸ್ವಾಮಿ ಸತ್ಸಂಗ ಬೆಂಗಳೂರುಇವರು ಈ ಕಾರ್ಯಕ್ರಮದ ಪ್ರಮುಖ ಆಯೋಜನೆ ಮಾಡಿದ್ದಾರೆ.





