ವಿಜಯಪುರ:ವಿಜಯಪುರ ಜಿಲ್ಲೆಯ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯದ ಭವನದಲ್ಲಿ ಕಿತ್ತೂರು ಕರ್ನಾಟಕ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಫೆ.27 ರಂದು ನಡೆಯಲಿರುವ “ಕಿತ್ತೂರು ಕರ್ನಾಟಕ ಭಾಗದ ಪಕ್ಷದ Janata Dal Secular ಪಕ್ಷದ ರಜತ ಮಹೋತ್ಸವ” ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಯಿತು .
ಈ ಸಂದರ್ಭದಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹಾಗೂ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜೆ.ಕೆ.ಕೃಷ್ಣಾರೆಡ್ಡಿ ಅವರು, ಮಾಜಿ ಸಚಿವರಾದ ಶ್ರೀ ವೆಂಕಟರಾವ್ ನಾಡಗೌಡ ಅವರು, ದೇವರಹಿಪ್ಪರಗಿ ಶಾಸಕರಾದ ಶ್ರೀ ರಾಜುಗೌಡ ಪಾಟೀಲ್‌ ಅವರು, ಮಾಜಿ ಶಾಸಕರಾದ ಶ್ರೀ ದೇವಾನಂದ ಚವ್ಹಾಣ್ ಅವರು, ಶ್ರೀ ಎಂ.ಎಸ್. ಡೊಂಗರಗಾಂವ, ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಜ್ಯೋತಿ ಪ್ರಕಾಶ್ ಮಿರ್ಜಿ, ಪಕ್ಷದ ಮುಖಂಡರಾದ ಶ್ರೀ ಬಿ.ಡಿ. ಪಾಟೀಲ್, ಶ್ರೀಮತಿ ಸುನೀತಾ ಚವ್ಹಾಣ, ಶ್ರೀಮತಿ ಅಪ್ಸರಾಬೇಗಂ ಛಪ್ಪರಬಂದ, ಶ್ರೀ ಮಲ್ಲಿಕಾರ್ಜುನ , ಜಿಲ್ಲಾಧ್ಯಕ್ಷರಾದ ಶ್ರೀ ಬಸನಗೌಡ ಮಾಡಗಿ, ಶ್ರೀ ಶಂಕರ ಮಾಡಲಗಿ, ಶ್ರೀ ಕೆ.ಪಿ. ಮಗೆಣ್ಣನವರ, ಶ್ರೀ ಹನಮಂತ ಮಾವಿನಮರದ, ಶ್ರೀ ಬಿ.ಬಿ. ಗಂಗಾಧರಮಠ, ಶ್ರೀ ಗುರುರಾಜ ಹುಣಸಿನಮರದ, ಶ್ರೀ ಮಂಜುನಾಥ ಶಿವಣ್ಣನವರ , ರಾಜ್ಯ ವಕ್ತಾರರಾದ ಶ್ರೀ ಬಸವರಾಜ ಪಾದಯಾತ್ರಿ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here